ಎಸ್. ನಾರಾಯಣ್ ಅವರ ರಚನೆ ಹಾಗೂ ನಿರ್ದೇಶನದ, ಅನಿರುದ್ಧ ಮುಖ್ಯಭೂಮಿಕೆಯಲ್ಲಿದ್ದ ಧಾರಾವಾಹಿ ‘ಸೂರ್ಯವಂಶ’ 2022ರಲ್ಲಿ ಸೆಟ್ಟೇರಿತ್ತು. ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ ಈ ಧಾರಾವಾಹಿ ಬದಲಾದ ತಂಡದೊಂದಿಗೆ ಅದೇ ಶೀರ್ಷಿಕೆಯಡಿ ಉದಯ ವಾಹಿನಿಯಲ್ಲಿ ಮತ್ತೆ ಪ್ರಾರಂಭಗೊಂಡಿದೆ.

‘ಹಿಂದೆ ಈ ಧಾರಾವಾಹಿಯ 23 ಸಂಚಿಕೆಗಳ ಚಿತ್ರೀಕರಣ ಪೂರ್ಣಗೊಂಡಿತ್ತು. ಆದರೆ ಕಾರಣಾಂತರಗಳಿಂದ ಸ್ಥಗಿತಗೊಂಡಿತು. ಇದೀಗ ಶೀರ್ಷಿಕೆ, ವಾಹಿನಿ ಬದಲಾಗಿಲ್ಲ. ನಾನೂ ಮುಖ್ಯಭೂಮಿಕೆಯಲ್ಲೇ ಇದ್ದೇನೆ. ಮಾರ್ಚ್ 11ರಿಂದ ಧಾರಾವಾಹಿ ಪ್ರಸಾರ ಆರಂಭವಾಗಿದೆ’ ಎಂದು ಅನಿರುದ್ಧ ಮಾಹಿತಿ ನೀಡಿದರು. ಈ ಮೂಲಕ ಬೆಳ್ಳಿತೆರೆಯ ಜೊತೆಗೆ ಕಿರುತೆರೆಯಲ್ಲೂ ಅನಿರುದ್ಧ ಸಕ್ರಿಯರಾಗಿದ್ದಾರೆ. ಈ ಧಾರಾವಾಹಿಗೆ ತನ್ವಿ ಕ್ರಿಯೇಶನ್ಸ್ ಲಾಂಛನದಲ್ಲಿ ಎಲ್. ಪದ್ಮನಾಭ ಬಂಡವಾಳ ಹೂಡುವುದರ ಮೂಲಕ ಕಿರುತೆರೆಗೆ ಹೆಜ್ಜೆ ಇಟ್ಟಿದ್ದಾರೆ. ಹರಿಸಂತು ಪ್ರಧಾನ ನಿರ್ದೇಶಕರಾಗಿದ್ದು, ಪ್ರಕಾಶ್ ಮುಚ್ಚಳಗುಡ್ಡ ಸಂಚಿಕೆ ನಿರ್ದೇಶನ ಮಾಡುತ್ತಿದ್ದಾರೆ.

ಸುಂದರ್ ರಾಜ್ ‘ಸತ್ಯಮೂರ್ತಿ’ ಎನ್ನುವ ಪಾತ್ರ ಮಾಡುತ್ತಿದ್ದು, ‘ಕರ್ಣ’ನಾಗಿ ಅನಿರುದ್ಧ ನಟಿಸಿದ್ದಾರೆ. ನಾಯಕಿಯಾಗಿ ಸುರಭಿ, ಖಳನಟನಾಗಿ ವಿಕ್ರಂ ಉದಯಕುಮಾರ್, ರವಿಭಟ್, ಸುಂದರಶ್ರೀ, ಲೋಕೇಶ್ ಬಸವಟ್ಟಿ, ಪುಷ್ಪಾ ಬೆಳವಾಡಿ, ನಯನಾ, ರಾಮಸ್ವಾಮಿ, ಸುನಂದಾ ಮುಂತಾದವರಿದ್ದಾರೆ. ಧಾರಾವಾಹಿ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.