ಜಯತೀರ್ಥ ಅವರ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘ಬನಾರಸ್’ ಇಂದು(ನ.4) ದೇಶದಾದ್ಯಂತ 1,250 ಪರದೆಗಳಲ್ಲಿ 2,500ಕ್ಕೂ ಅಧಿಕ ಪ್ರದರ್ಶನ ಕಾಣಲಿದೆ. ರಾಜ್ಯದಲ್ಲಿ ಸುಮಾರು 125 ಚಿತ್ರಮಂದಿರ ಹಾಗೂ 60 ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಬಿಡುಗಡೆಗೊಳ್ಳಲಿದೆ.

ಹಿಂದಿಯಲ್ಲಿ ಅತಿ ಹೆಚ್ಚು(450) ಪರದೆಗಳು ಈ ಸಿನಿಮಾಗೆ ಸಿಕ್ಕಿವೆ. ಹಿಂದಿಯಲ್ಲಿ ನಟ ಅಜಯ್ ದೇವಗನ್ ಅವರ ವಿತರಣಾ ಸಂಸ್ಥೆ ಪನೋರಮಾ ಸ್ಟುಡಿಯೋಸ್ ಬನಾರಸ್ ಅನ್ನು ವಿತರಣೆ ಮಾಡುತ್ತಿದೆ.

ಮಲಯಾಳಂನಲ್ಲಿ ಮುಲಕ್ಕುಪ್ಪಡಂ ಹಾಗೂ ತಮಿಳುನಾಡಿನಲ್ಲಿ ಶಕ್ತಿ ಫಿಲಂ ಫ್ಯಾಕ್ಟರಿ ಸಿನಿಮಾ ವಿತರಣೆ ಮಾಡುತ್ತಿದೆ. ಸಿನಿಮಾ ಬಿಡುಗಡೆಯಾದ ಒಂದು ವಾರದೊಳಗೆ ವಿದೇಶದಲ್ಲೂ ಸಿನಿಮಾ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿದೆ. ಈಗಾಗಲೇ ಉತ್ತರ ಪ್ರದೇಶ ಸರ್ಕಾರ ‘ಬನಾರಸ್’ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿದ್ದು ಜೊತೆಗೆ ಸಬ್ಸಿಡಿಯನ್ನೂ ಘೋಷಿಸಿದೆ ಎಂದಿದ್ದಾರೆ ನಿರ್ಮಾಪಕ ತಿಲಕ್ ರಾಜ್ ಬಲ್ಲಾಳ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.