‘ರತ್ನನ್ ಪ್ರಪಂಚ’ ಸಿನಿಮಾ ಬಳಿಕ ‘ಉಡಾಳ ಬಾಬು ರಾವ್’ ಎಂದೇ ಖ್ಯಾತಿಗಳಿಸಿರುವ ನಟ ಪ್ರಮೋದ್, ಇದೀಗ ‘ಬಾಂಡ್ ರವಿ’ಯಾಗಿ ತೆರೆ ಮೇಲೆ ಬರಲಿದ್ದಾರೆ. ಚಿತ್ರದ ಮುಹೂರ್ತ ಇತ್ತೀಚೆಗೆ ನಡೆಯಿತು. ನಟರಾದ ಧ್ರುವ ಸರ್ಜಾ ಹಾಗೂ ವಿನೋದ್ ಪ್ರಭಾಕರ್ ಕ್ಲ್ಯಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.

ಸಿನಿಮಾದಲ್ಲಿನ ತಮ್ಮ ಪಾತ್ರದ ಕುರಿತು ಮಾತಿಗಿಳಿದ ಪ್ರಮೋದ್, ‘ನಾನು ಅಪ್ಪು(ಪುನೀತ್ ರಾಜ್ಕುಮಾರ್) ಅವರ ಅಭಿಮಾನಿಯಾಗಿ ‘ಬಾಂಡ್ ರವಿ’ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ‘ಅಣ್ಣಾ ಬಾಂಡ್’ ಸಿನಿಮಾದಲ್ಲಿ ಅಪ್ಪು ಅವರು ಮಿಂಚಿದ್ದ ಬಾಂಡ್ ರವಿ ಪಾತ್ರದ ರೀತಿಯೇ ಈ ಸಿನಿಮಾದಲ್ಲಿ ನನ್ನ ಪಾತ್ರ ಇರುತ್ತದೆ. ಹೀಗಾಗಿ ಅಪ್ಪು ಅವರ ನಟನೆ, ಮ್ಯಾನರಿಸಂ ನೋಡಿ ಕಲಿಯುತ್ತಿದ್ದೇನೆ’ ಎಂದರು. ‘ಮಾಯಕನ್ನಡಿ’ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಹೆಜ್ಜೆ ಇಟ್ಟಿದ್ದ ಕಾಜಲ್ ಕುಂದರ್ ‘ಬಾಂಡ್ ರವಿ’ಗೆ ಜೋಡಿಯಾಗಿದ್ದಾರೆ.

ಕಳೆದ ಹನ್ನೊಂದು ವರ್ಷದಿಂದ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡಿರುವ ಪ್ರಜ್ವಲ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ‘ಬಾಂಡ್ ರವಿ’ ಕಮರ್ಷಿಯಲ್ ಎಮೋಷನಲ್ ಥ್ರಿಲ್ಲರ್ ಜಾನರ್ ಸಿನಿಮಾವಾಗಿದ್ದು, ಲೈಫ್ ಲೈನ್ ಫಿಲಂಸ್ ಬ್ಯಾನರ್ನಡಿ ನರಸಿಂಹಮೂರ್ತಿ ಬಂಡವಾಳ ಹೂಡುತ್ತಿದ್ದಾರೆ.

ಬ್ಯಾಕ್ಲೆಸ್ ಡ್ರೆಸ್ನಲ್ಲಿ ಪಾರ್ಟಿಗೆ ಎಂಟ್ರಿ: ಟ್ರೋಲ್ಗೆ ಗುರಿಯಾದ ಜಾಹ್ನವಿ!

ರವಿಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದು, ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಸುನಿಲ್ ಮತ್ತು ದೇವರಾಜ್ ಸಂಭಾಷಣೆ, ಮನೋಮೂರ್ತಿ ಅವರ ಸಂಗೀತ ಚಿತ್ರಕ್ಕಿದೆ. ಬೆಂಗಳೂರು, ಶಿವಮೊಗ್ಗ, ಕೊಡಚಾದ್ರಿ ಸುತ್ತಮುತ್ತ ಐವತ್ತು ದಿನ ಚಿತ್ರೀಕರಣ ನಡೆಸಲು ಚಿತ್ರತಂಡ ನಿರ್ಧರಿಸಿದೆ.

‘ತ್ರಿಕೋನ’ ಸಿನಿಮಾ ವಿಮರ್ಶೆ: ಕಾಲನ ಕೈಯಲ್ಲಿ ‘ತ್ರಿಕೋನ’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.