ಜಗತ್ತಿನಲ್ಲಿ ನಾಯಿಯಷ್ಟು ನಿಯತ್ತಿನ ಪ್ರಾಣಿ ಬೇರೊಂದಿಲ್ಲ. ನಾಯಿಗಾಗಿ ತಮ್ಮ ಆಸ್ತಿಯನ್ನೇ ಮುಡಿಪಿಟ್ಟವರು ಇದ್ದಾರೆ. ‘ಡಿಂಗ’ ಚಿತ್ರದ ನಾಯಕನಿಗೂ ನಾಯಿಯೆಂದರೆ ಅಪಾರ ಪ್ರೀತಿ. ತಾನು ಸಾಯುವುದು ಖಚಿತವಾದಾಗ ಪ್ರೀತಿಯಿಂದ ಸಾಕಿದ ನಾಯಿಮರಿಯ ಪಾಡೇನು ಎನ್ನುವ ಚಿಂತೆ ಆತನಿಗೆ ಕಾಡುತ್ತದೆಯಂತೆ. ನಾಯಿಮರಿಯ ಜಾತಕ, ರಕ್ತ ಸಂಬಂಧಕ್ಕೆ ಹೊಂದುವ ಸಾಕುವವನಿಗಾಗಿ ಹುಡುಕಾಟ ನಡೆಸುವುದೇ ಈ ಚಿತ್ರದ ಕಥೆಯ ಸಾರಾಂಶ.

ಅಂದಹಾಗೆ ಈ ಡಿಂಗ ‘ಬಾಲ ಮಂಗಳ’ದ ಡಿಂಗನಲ್ಲವಂತೆ. ನಾಯಕನ ಮುದ್ದಿನ ನಾಯಿಮರಿಯಂತೆ. ಐಫೋನ್ ಬಳಸಿ ಚಿತ್ರೀಕರಿಸಿರುವ ಸಿನಿಮಾ ಇದು. ಜನವರಿ 31ರಂದು ಬಿಡುಗಡೆಗೆ ಸಿದ್ಧವಾಗಿದ್ದು ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು.

ಐಫೋನ್ ಬಳಸಿ ಶೂಟಿಂಗ್ ನಡೆಸಿದ್ದರಿಂದ ಜನರು ಅಷ್ಟಾಗಿ ಚಿತ್ರದ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲವಂತೆ. ಹಾಡುಗಳು ಬಿಡುಗಡೆಗೊಂಡಾಗಲೇ ಚಿತ್ರದ ಗುಣಮಟ್ಟ ನೋಡಿ ಪ್ರತಿಕ್ರಿಯಿಸಲು ಶುರು ಮಾಡಿದರಂತೆ. ‘ಐಫೋನ್‌ನಲ್ಲಿಯೇ ಸಿನಿಮಾ ಚಿತ್ರೀಕರಿಸುವ ಮಸೂರಗಳಿವೆ. ಅವುಗಳನ್ನು ಬಳಸಿ ಶೂಟಿಂಗ್ ನಡೆಸಲಾಗಿದೆ’ ಎಂದರು ನಿರ್ದೇಶಕ ಅಭಿಷೇಕ್ ಜೈನ್.

ಆರವ ಗೌಡ ಈ ಚಿತ್ರದ ನಾಯಕ. ನಾಯಕಿ ಅನುಷಾ ಮಧ್ಯವಯಸ್ಸಿನ ಹೆಂಗಸಿನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಶುದ್ಧೋ ರಾಯ್ ಸಂಗೀತ ಸಂಯೋಜಿಸಿದ್ದಾರೆ. ಜಯಂತ್ ಮಂಜುನಾಥ್ ಅವರ ಛಾಯಾಗ್ರಹಣವಿದೆ.

ಅಭಿಷೇಕ್ ಜೈನ್ ಹಾಗೂ ಆರವ ಗೌಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.