‘19.20.21’ ಸಿನಿಮಾ ಬಳಿಕ ನಿರ್ದೇಶಕ ಮಂಸೋರೆ ಅವರು ಕೈಗೆತ್ತಿಕೊಂಡಿರುವ ‘ದೂರ ತೀರ ಯಾನ’ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದೆ.

ಈ ಸಿನಿಮಾದಲ್ಲಿ ಪ್ರೇಮಕಥೆಯೊಂದಿಗೆ ಪ್ರೇಕ್ಷಕರೆದುರಿಗೆ ಮಂಸೋರೆ ಬರುತ್ತಿದ್ದಾರೆ. ಡಿ.ಕ್ರಿಯೇಷನ್ಸ್ನ ದೇವರಾಜ್ ಆರ್.ನಿರ್ಮಾಣ ಮಾಡುತ್ತಿರುವ ಈ ಸಿನಿಮಾದಲ್ಲಿ ವಿಜಯ್ ಕೃಷ್ಣ ನಾಯಕರಾಗಿ ಹಾಗೂ ಪ್ರಿಯಾಂಕ ಕುಮಾರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಎರಡನೇ ಹಂತದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ ಎಂದು ಮಂಸೋರೆ ತಿಳಿಸಿದ್ದಾರೆ. ಇದೊಂದು ಪಯಣದ ಕಥೆ. ಚಿತ್ರದ ಮೊದಲ ಹತ್ತು ನಿಮಿಷ ಮಾತ್ರ ಬೆಂಗಳೂರಿನಲ್ಲಿ ನಡೆಯುತ್ತದೆ. ಉಳಿದೆಲ್ಲಾ ಕಥೆ ದಾರಿಯಲ್ಲಿ ಸಾಗುತ್ತದೆ. ಬೆಂಗಳೂರಿನಿಂದ ಗೋವಾಕ್ಕೆ ಹೊರಟ ಹುಡುಗ-ಹುಡುಗಿ ತಮ್ಮ ಪ್ರೀತಿಯನ್ನು ಹೊಸ ರೀತಿಯಲ್ಲಿ ಕಂಡುಕೊಳ್ಳುವ ಕಥೆ ಇದಾಗಿದೆ. ಇದು ಮ್ಯೂಸಿಕಲ್ ಜರ್ನಿ ಸಿನಿಮಾ ಎಂದಿದ್ದರು ಮಂಸೋರೆ.

ಚಿತ್ರಕ್ಕೆ ಶೇಖರ್ ಚಂದ್ರು ಅವರ ಛಾಯಾಚಿತ್ರಗ್ರಹಣ, ಬಕ್ಕೇಶ್ ಮತ್ತು ಕಾರ್ತಿಕ್ ಸಂಗೀತ, ಜಯಂತ ಕಾಯ್ಕಿಣಿ, ಕವಿರಾಜ್, ಪ್ರಮೋದ್ ಮರವಂತೆ ಅವರ ಗೀತ ಸಾಹಿತ್ಯ, ನಾಗೇಂದ್ರ ಕೆ. ಉಜ್ಜನಿ ಸಂಕಲನ, ಸರವಣ ಅವರ ಕಲಾ ನಿರ್ದೇಶನ ಹಾಗೂ ವಿವಿಡ್ ಐ ನಿರ್ಮಾಣ ವಿನ್ಯಾಸವಿದೆ. ಚಿತ್ರತಂಡವು ಸದ್ಯಕ್ಕೆ ನಾಯಕ–ನಾಯಕಿಯರನ್ನಷ್ಟೇ ಪರಿಚಯಿಸಿದ್ದು, ಉಳಿದ ತಾರಾಗಣದ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡಲಾಗುವುದು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.