ಜಯಮ್ ರವಿ ತಮಿಳಿನ ಮುಂಚೂಣಿ ನಟರಲ್ಲೊಬ್ಬರು. ತಮ್ಮ 25ನೇ ಚಿತ್ರಕ್ಕಾಗಿ ಈಗ ಬಣ್ಣ ಹಚ್ಚಲಿದ್ದಾರೆ. ಅದು ರೈತನ ಪಾತ್ರ. ಜೂನ್ ಎರಡನೇ ವಾರದಲ್ಲಿ ಚಿತ್ರದ ಮುಹೂರ್ತ ನಡೆಯಲಿದೆ.

ಜಯಮ್ ಅವರ ಅತ್ತೆ ಸುಜಾತಾ ವಿಜಯಕುಮಾರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಲಕ್ಷ್ಮಣ್ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಚಿತ್ರದ ನಾಯಕ ನಟಿಯಾಗಿ ಯಾರೂ ಆಯ್ಕೆಯಾಗಿಲ್ಲ. ಆದರೆ ಜಯಮ್ ಅವರ ತಾರಾ ವರ್ಚಸ್ಸಿಗೆ ಸರಿಗಟ್ಟುವ ನಟಿಯನ್ನು ಆಯ್ಕೆ ಮಾಡುವುದು ನಿರ್ದೇಶಕರ ಲೆಕ್ಕಾಚಾರ.

ಜಯಮ್ ಅವರಿಗೆ ‘ಜೂಲಿಯೆಟ್’ ಮತ್ತು ‘ಬೋಗನ್’ಗೆ ಆ್ಯಕ್ಷನ್ ಕಟ್ ಹೇಳಿರುವ ಲಕ್ಷ್ಮಣ್, ಜೆಆರ್ ಅವರ 25ನೇ ಚಿತ್ರವನ್ನು ಅವಿಸ್ಮರಣೀಯವಾಗಿಸುವ ನಿಟ್ಟಿನಲ್ಲಿ ತಯಾರಿ ನಡೆಸಿದ್ದಾರೆ.

‘ತಿರುಡಾ ತಿರುಡಾ’ ಚಿತ್ರದಲ್ಲಿ ನೋಡಿದ ಹಳ್ಳಿಯ ಚಿತ್ರಣವನ್ನು ಜೆಆರ್ ಹೊಸ ಚಿತ್ರದಲ್ಲಿ ಕಾಣಬಹುದು ಎನ್ನಲಾಗಿದೆ. ಅಂದರೆ ಟಿಪಿಕಲ್ ಹಳ್ಳಿಯ ಚಿತ್ರಣ ಇಲ್ಲಿ ಇರುವುದಿಲ್ಲ. ಅಲ್ಲದೆ ರೈತರ ಕಥಾವಸ್ತು ಇದ್ದರೂ ಜೆಆರ್ ಮಾಮೂಲಿ ರೈತನ ಗೆಟಪ್ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಈ ಎರಡು ಅಂಶಗಳು ಚಿತ್ರವನ್ನು ಇತರ ಗ್ರಾಮೀಣ ಕಥೆಯುಳ್ಳ ಚಿತ್ರಗಳಿಗಿಂತ ಭಿನ್ನವಾಗಿಸುತ್ತದೆ ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ.

ಡಿ.ಇಮ್ಮಾನ್ ಸಂಗೀತ ನೀಡಲಿದ್ದಾರೆ. ಖಳ ನಾಯಕನ ಪಾತ್ರಕ್ಕೆ ಮಾಉಕತೆ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.