ಮಯೂರ್ ಪಟೇಲ್ ಚೊಚ್ಚಲ ನಿರ್ದೇಶನದಲ್ಲಿ ಮದನ್ ಪಟೇಲ್ ಮುಖ್ಯಭೂಮಿಕೆಯಲ್ಲಿರುವ ‘ತಮಟೆ’ ಚಿತ್ರದ ಶೋ ರೀಲ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಿತ್ರದ ಶೋ ರೀಲ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.

‘ನಾನು ಟೂರಿಂಗ್ ಟಾಕೀಸ್ ನಡೆಸುತ್ತಿದೆ. ಸಿನಿಮಾ ನೋಡಿ ಇಪ್ಪತ್ತೈದು ವರ್ಷಗಳಾಗಿವೆ. ನಮ್ಮದೇ ಚಿತ್ರಮಂದಿರಗಳಿದ್ದರೂ ನಾನು ಸಿನಿಮಾ ನೋಡಿಲ್ಲ. ಎಷ್ಟೋ ದಿನಗಳ ನಂತರ ‘ತಮಟೆ’ ಚಿತ್ರದ ಶೋ ರೀಲ್ ವೀಕ್ಷಿಸಿದೆ. ಸಮಯ ಸಿಕ್ಕಾಗ ಪೂರ್ತಿ ಸಿನಿಮಾ ನೋಡುತ್ತೇನೆ. ಗ್ರಾಮೀಣ ಸೊಗಡಿನ ಹಾಗೂ ‘ತಮಟೆ’ ವಾದ್ಯಗಾರನೊಬ್ಬನ ಜೀವನದ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಮದನ್ ಪಟೇಲ್ ಅವರು ಚೆನ್ನಾಗಿ ಅಭಿನಯಿಸಿದ್ದಾರೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿ’ ಎಂದು ಹಾರೈಸಿದರು ಡಿ.ಕೆ.ಶಿವಕುಮಾರ್.

‘ನಾನು ಕೆಲವು ವರ್ಷಗಳ ಹಿಂದೆ ಈ ಕಾದಂಬರಿ ಬರೆದಿದ್ದೆ. ಈಗ ಅದನ್ನು ನನ್ನ ಮಗ ಮಯೂರ್ ಪಟೇಲ್ ನಿರ್ದೇಶನ ಮಾಡಿದ್ದಾನೆ. ನಾನೇ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದೇನೆ. ನಾನು ಈವರೆಗೂ ಮಾಡಿರದ ಪಾತ್ರವಿದು. ಈ ಚಿತ್ರಕ್ಕೆ ಚಿತ್ರಕಥೆ ಬರೆಯುವುದರೊಂದಿಗೆ ಸಂಗೀತವನ್ನು ನೀಡಿ, ನಿರ್ಮಾಣವನ್ನು ಮಾಡಿದ್ದೇನೆ. ಈಗಾಗಲೇ ಅನೇಕ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿರುವ ಈ ಚಿತ್ರವನ್ನು ಸದ್ಯದಲ್ಲೇ ಬಿಡುಗಡೆ ಮಾಡುತ್ತಿದ್ದೇವೆ’ ಎಂದರು ಮದನ್ ಪಟೇಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.