ಮಾನ್ವಿತಾ ಹರೀಶ್, ಶ್ರೇಯಶ್ ಸೂರಿ ಜೋಡಿಯಾಗಿ ನಟಿಸುತ್ತಿರುವ ‘ಒನ್ ಅಂಡ್ ಆ ಹಾಫ್’ ಸಿನಿಮಾದ ‘ಹ್ಯಾಂಡಲ್ ವಿತ್ ಕೇರ್’ ಎಂಬ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ‘ರಂಗ್ಬಿರಂಗಿ’, ‘ಡೆವಿಡ್’ ಮೊದಲಾದ ಸಿನಿಮಾಗಳ ಮೂಲಕ ಭರವಸೆ ಮೂಡಿಸಿದ್ದ ಯುವ ನಟ ಶ್ರೇಯಶ್ ಸೂರಿ ನಟನೆಯ ಜೊತೆಗೆ ಈ ಚಿತ್ರದ ನಿರ್ದೇಶನವನ್ನೂ ಮಾಡುತ್ತಿದ್ದಾರೆ.

‘ಈ ಸಿನಿಮಾ ನನ್ನಿಂದ ಅಲ್ಲ. ಇಡೀ ತಂಡದ ಕೆಲಸ. ಈ ಚಿತ್ರದ ನನ್ನದಲ್ಲ. ನಮ್ಮೆಲ್ಲರದ್ದು. ಬಿಡುಗಡೆ ಆದ ನಂತರ ಪ್ರೇಕ್ಷಕರದ್ದು. ಜನ ಕೈ ಹಿಡಿದರೆ ಇನ್ನಷ್ಟು ಉತ್ತಮ ಸಿನಿಮಾ ಮಾಡುವ ಆಸೆಯಿದೆ’ ಎಂದರು ಶ್ರೇಯಸ್ ಸೂರಿ.

ಈ ಹಾಡಿಗೆ ಎಂ.ಸಿ.ಬಿಜ್ಜು ಹಾಗೂ ಯಶಸ್ ನಾಗ್ ಸಾಹಿತ್ಯ ಬರೆದಿದ್ದು, ನಾಯಕ ಶ್ರೇಯಸ್ ಸೂರಿ, ಅನಂತ್ ಹಾಗೂ ಎಂ.ಸಿ.ಬಿಜ್ಜು ಧ್ವನಿಯಾಗಿದ್ದಾರೆ. ಕದ್ರಿ ಮಣಿಕಾಂತ್ ಸಂಗೀತ ನಿರ್ದೇಶನವಿದೆ.

ಸಿನಿಮಾವನ್ನು ಸುಲಕ್ಷ್ಮೀ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ. ಸಾಧು ಕೋಕಿಲ, ಅವಿನಾಶ್ ಯೆಳಂದೂರ್, ಸುಚೇಂದ್ರ ಪ್ರಸಾದ್, ಸ್ಪರ್ಶ ರೇಖಾ, ಅನಂತು, ಸುಂದರಶ್ರೀ ಮುಂತಾದವರು ತಾರಾಬಳಗದಲ್ಲಿದ್ದಾರೆ. ದೇವೇಂದ್ರ ಛಾಯಾಚಿತ್ರಗ್ರಹಣ, ಮುಕೇಶ್ ಜೆ ಸಂಕಲನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.