ಮುಂಬೈ: 2000ರಲ್ಲಿ ತೆರೆಕಂಡ 'ಕಹೋ ನಾ ಪ್ಯಾರ್ ಹೇ ' ಚಿತ್ರದ ಜನಪ್ರಿಯ 'ಎಕ್ ಪಲ್ ಕಾ ಜೀನಾ ' ಹಾಡಿಗೆ 21 ವರ್ಷಗಳ ಬಳಿಕ ನಟ ಹೃತಿಕ್ ರೋಷನ್ ಹಾಗೂ ನೃತ್ಯ ಸಂಯೋಜಕಿ ಫರ್ಹಾ ಖಾನ್ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದಿದ್ದಾರೆ.

ಈ ಕುರಿತು ನಿರ್ದೇಶಕಿ ಕೂಡಾ ಆಗಿರುವ ಫರ್ಹಾ ಖಾನ್, ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊ ಹಂಚಿದ್ದಾರೆ. 'ಈ ಹೆಜ್ಜೆಗೆ 21 ವರ್ಷಗಳು, ಈಗಲೂ ಪ್ರಬಲವಾಗಿ ಮುಂದಕ್ಕೆ ಸಾಗುತ್ತಿದೆ' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಕೊಳದಲ್ಲಿ ಮೌನಿ ರಾಯ್.. ಅಭಿಮಾನಿಗಳ ಮೈಬಿಸಿ ಏರಿಸಿದ ನಟಿ

ಫರ್ಹಾ ನೃತ್ಯ ಸಂಯೋಜನೆ ಮಾಡಿದ ಈ ಹಾಡು 21ನೇ ಶತಮಾನದ ಆರಂಭದಲ್ಲಿ ಮೋಡಿ ಮಾಡಿತ್ತು. ಬಾಲಿವುಡ್ ಸಿನಿಮಾದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿತ್ತು. ಈ ಚಿತ್ರದ ರೋಮ್ಯಾಂಟಿಕ್ ಹಾಡುಗಳೆಲ್ಲವೂ ಯುವ ಮನಸ್ಕರಲ್ಲಿ ರಾರಾಜಿಸಿದ್ದವು.

ಕಹೋ ನಾ ಪ್ಯಾರ್ ಹೇ ಚಿತ್ರದ ಮೂಲಕ ನಿರ್ದೇಶಕ ರಾಕೇಶ್ ರೋಶನ್, ತನ್ನ ಪುತ್ರ ಹೃತಿಕ್‌ನನ್ನು ಸಿನಿಮಾ ರಂಗಕ್ಕೆ ಪರಿಚಯಿಸಿದ್ದರು. ಅಲ್ಲದೆ ಚೊಚ್ಚಲ ಪ್ರಯತ್ನದಲ್ಲೇ ಹೃತಿಕ್, ಯಶಸ್ಸು ಕಂಡಿದ್ದರಲ್ಲದೆ 'ಅತ್ಯುತ್ತಮ ನಟ' ಹಾಗೂ 'ಪದಾರ್ಪಣೆ ನಟ'ನಿಗಾಗಿ ಫೀಲ್ಮ್‌ಫೇರ್ ಪ್ರಶಸ್ತಿಯನ್ನು ಬಾಚಿಕೊಂಡಿದ್ದರು. ಪ್ರಸ್ತುತ ಚಿತ್ರವು 2000ರಲ್ಲಿ ಗರಿಷ್ಠ ಗಳಿಕೆಯನ್ನು ಪಡೆದಿತ್ತು.

ಅತ್ತ 'ಮೈ ಹೂನ್ ನಾ' ಚಿತ್ರದ ಮೂಲಕ ನಿರ್ದೇಶನಕ್ಕೂ ಕಾಲಿಟ್ಟಿದ್ದ ಫರ್ಹಾ ಖಾನ್, 'ಓಂ ಶಾಂತಿ ಓಂ', 'ತೀರ್ ಮಾರ್ ಖಾನ್', 'ಹ್ಯಾಪಿ ನ್ಯೂ ಇಯರ್' ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.