ಉಪೇಂದ್ರ ಹಾಗೂ ರಚಿತಾ ರಾಮ್ ಅಭಿನಯದ ‘ಐ ಲವ್ ಯು’ ಚಿತ್ರ ತೆರೆಗೆ ಬರಲು ಸಜ್ಜಾಗುತ್ತಿದೆ. ಇದು ಜೂನ್ 14ರಂದು ವೀಕ್ಷಕರ ಎದುರು ಪ್ರೇಮ ನಿವೇದನೆ ಮಾಡಿಕೊಳ್ಳಲಿದೆ ಎಂಬ ನಿರೀಕ್ಷೆ ಇದೆ. ಚಿತ್ರವು ದೇಶದಾದ್ಯಂತ ಒಟ್ಟು ಒಂದು ಸಾವಿರ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.

ಅಂದಹಾಗೆ, ಚಿತ್ರದ ಟ್ರೇಲರ್ ಬಿಡುಗಡೆಗೆ ನಿರ್ದೇಶಕ ಆರ್. ಚಂದ್ರು ಅವರು ಅದ್ದೂರಿ ಸಮಾರಂಭವೊಂದನ್ನು ಆಯೋಜಿಸಿದ್ದರು. ಟ್ರೇಲರ್ ಬಿಡುಗಡೆಗೆ ಬಂದಿದ್ದು ಸುದೀಪ್. ‘ಉಪೇಂದ್ರ ಅವರು ಅಭಿಮಾನಿಗಳ ಚಕ್ರವರ್ತಿ. ಸುದೀಪ್ ಅವರು ಅಭಿನಯ ಚಕ್ರವರ್ತಿ. ಇಬ್ಬರೂ ಕನ್ನಡದ ಗಂಧವನ್ನು ಪಸರಿಸಿದವರು. ಅಭಿಮಾನಿಗಳ ಚಕ್ರವರ್ತಿ ಹಾಗೂ ಅಭಿನಯ ಚಕ್ರವರ್ತಿ ಒಟ್ಟಿಗೆ ಸೇರಿದ್ದಾರೆ’ ಎಂಬ ಖುಷಿ ಹಂಚಿಕೊಂಡರು ಚಂದ್ರು.

ಉಪೇಂದ್ರ ಅವರು ಚಂದ್ರು ನಿರ್ದೇಶನದ ‘ಬ್ರಹ್ಮ’ ಚಿತ್ರದಲ್ಲಿ ಕೂಡ ಅಭಿನಯಿಸಿದ್ದರು. ಆ ಚಿತ್ರ ಪೂರ್ಣಗೊಂಡ ನಂತರ, ‘ಚಂದ್ರು ಜೊತೆ ಕೆಲಸ ಮಾಡಿದ್ದು ಖುಷಿಕೊಟ್ಟಿತು’ ಎಂದಿದ್ದರಂತೆ ಉಪೇಂದ್ರ. ಹಾಗಾಗಿ, ಚಂದ್ರು ಅವರು ಈ ಚಿತ್ರದ ಪ್ರಸ್ತಾವವನ್ನು ಉಪೇಂದ್ರ ಎದುರಿಟ್ಟಾಗ, ಅಭಿನಯಿಸಲು ತಕ್ಷಣ ಒಪ್ಪಿಕೊಂಡರಂತೆ.

ಉಪ್ಪಿ ಡಾನ್ಸ್!: ‘ಉಪೇಂದ್ರ ಅವರು ಈ ಚಿತ್ರದಲ್ಲಿ ಒಂದು ಹಾಡಿಗೆ ಡಾನ್ಸ್ ಮಾಡಿದ್ದಾರೆ’ ಎಂದು ಖುಷಿಯಿಂದ ಹೇಳಿದರು ಕಿಚ್ಚ. ಅವರು ಡಾನ್ಸ್ ಮಾಡಿದ್ದರಲ್ಲಿ ಖುಷಿಕೊಡುವ ವಿಚಾರ ಏನಿದೆ ಎಂಬುದನ್ನೂ ತಿಳಿಸಿದರು. ‘ಸಾಮಾನ್ಯವಾಗಿ ಡಾನ್ಸ್ ಮಾಡುವಾಗ ಉಪೇಂದ್ರ ಅವರ ಎರಡೂ ಕಾಲುಗಳು ಒಂದೇ ಕಡೆ ಹೋಗುತ್ತವೆ’ ಎನ್ನುವುದು ಆ ವಿವರಣೆ. ಆದರೆ ಈ ಚಿತ್ರದಲ್ಲಿ ಉಪ್ಪಿ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರಂತೆ. ‘ಬಹುಶಃ ರಚ್ಚು (ರಚಿತಾ ರಾಮ್) ಅವರ ಮಹಿಮೆಯಿಂದ ಇದು ಸಾಧ್ಯವಾಗಿರಬೇಕು’ ಎಂದು ಕಿಚಾಯಿಸಿದರು ಸುದೀಪ್.

ನಂತರ ತುಸು ಗಂಭೀರವಾದ ಸುದೀಪ್, ‘ಉಪ್ಪಿ ಸರ್ ಮತ್ತೆ ನಿರ್ದೇಶನ ಶುರು ಮಾಡಬೇಕು. ಸಿನಿಮಾ ನಿರ್ದೇಶನ ಮಾಡುವುದಾಗಿ ಅವರು ಹತ್ತು ವರ್ಷಗಳಿಂದ ಹೇಳುತ್ತ ಇದ್ದಾರೆ. ಅವರು ನಿರ್ದೇಶನ ಮಾಡುವುದು ಸಿನಿಮಾ ಉದ್ಯಮಕ್ಕೆ ಅಗತ್ಯವಿದೆ. ಹಲವು ನಿರ್ದೇಶಕರಿಗೆ ಉಪೇಂದ್ರ ಸ್ಫೂರ್ತಿ’ ಎಂದರು.

ಸುದೀಪ್ ಇಷ್ಟೆಲ್ಲ ಹೇಳಿದರೂ ಮತ್ತೆ ನಿರ್ದೇಶನದ ಕಡೆ ಮುಖ ಮಾಡುವುದು ಯಾವಾಗ ಎಂಬ ಗುಟ್ಟನ್ನು ಉಪೇಂದ್ರ ಬಿಟ್ಟುಕೊಡಲಿಲ್ಲ. ‘ಐ ಲವ್ ಯು ಚಿತ್ರದ ಕಥೆ ಕೇಳಿ ಥ್ರಿಲ್ ಆಗಿದ್ದೆ. ರಚಿತಾ ಕೂಡ ಥ್ರಿಲ್ ಆಗಿದ್ದರು. ಆ ಸೀನ್ ಬಗ್ಗೆ ಕೇಳಿದಿರಾ, ಈ ಸೀನ್ ಬಗ್ಗೆ ಕೇಳಿದಿರಾ ಎಂದು ಕರೆ ಮಾಡಿ ವಿಚಾರಿಸುತ್ತಿದ್ದರು’ ಎಂದರು ಉಪೇಂದ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.