ಪ್ರಮೋದ್ ಶೆಟ್ಟಿ ನಾಯಕರಾಗಿ ನಟಿಸಿರುವ, ವಿಷ್ಣು ವಿ.ಪ್ರಸನ್ನ ನಿರ್ದೇಶನದ ‘ಜಲಂಧರ’ ಚಿತ್ರದ ‘ಹುಟ್ಟುತ್ತಾ ನಾವು’ ಎಂಬ ಹಾಡಿನ ಲಿರಿಕಲ್ ವೀಡಿಯೊ ಜಂಕಾರ್ ಮ್ಯೂಸಿಕ್ ಯೂಟ್ಯೂಬ್ ಮೂಲಕ ಬಿಡುಗಡೆಯಾಗಿದೆ.

ಮನ್ವರ್ಷಿ ನವಲಗುಂದ ಬರದಿರುವ ಈ ಹಾಡನ್ನು ಅವಿನಾಶ್ ಬಸತ್ಕೂರ್ ಹಾಡಿದ್ದಾರೆ. ಜತಿನ್ ದರ್ಶನ್ ಸಂಗೀತ ನೀಡಿದ್ದಾರೆ. ‘ಈ ಕಥೆಯನ್ನು ಕೋವಿಡ್ ಪೂರ್ವದಲ್ಲಿ ಸ್ಟೆಪ್ ಅಪ್ ಲೋಕಿ ಹೇಳಿದ್ದರು. ನಾನು ಇದರಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದೇನೆ. ಆದರೆ ಇದು ಗಂಭೀರವಾದ ಪಾತ್ರ. ನಾನೊಬ್ಬನೇ ಇದರಲ್ಲಿ ಹೀರೋ ಅಲ್ಲ. ಕಥೆ ಹಾಗೂ ಅಭಿನಯಿಸಿರುವ ಕಲಾವಿದರು ಎಲ್ಲರೂ ನಾಯಕರೇ. ಕನಕಪುರ ಭಾಗದ ಜಾನಪದ ಕಲೆಯನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ‘ಹುಟ್ಟುತ್ತಾ ನಾವು’ ಹಾಡಿನಲ್ಲಿ ಚಿತ್ರದ ಕಥೆ ಹೇಳುವ ಪ್ರಯತ್ನ ಮಾಡಲಾಗಿದೆ’ ಎಂದರು ಪ್ರಮೋದ್ ಶೆಟ್ಟಿ.

ಚಿತ್ರದ ಕಥೆಯನ್ನು ನಿರ್ಮಾಪಕ ಲೋಕಿ ಅವರು ಬರೆದಿದ್ದು, ‘ನೀರಿನ ಬಗ್ಗೆ ನಮ್ಮ ಅಜ್ಜಿ ಹೇಳುತ್ತಿದ್ದ ಕಥೆ, ಈ ಚಿತ್ರದ ಕಥೆ ಬರೆಯಲು ಸ್ಫೂರ್ತಿ. ನಾನು ಈ ಚಿತ್ರದಲ್ಲಿ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದೇನೆ’ ಎಂದರು ಲೋಕಿ. ಪ್ರಮೋದ್ಗೆ ಜೋಡಿಯಾಗಿ ‘ಟಗರು’ ಖ್ಯಾತಿಯ ರುಶಿಕಾ ರಾಜ್ ನಟಿಸಿದ್ದು, ಆರೋಹಿತ ಗೌಡ, ಬಲ ರಾಜವಾಡಿ, ನವೀನ್ ಸಾಗರ್, ಪ್ರತಾಪ್ ನನಸು, ಆದಿ ಕೇಶವರೆಡ್ಡಿ, ಭೀಷ್ಮಾ ರಾಮಯ್ಯ, ವಿಜಯರಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸರಿನ್ ರವೀಂದ್ರನ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.