ಬೆಂಗಳೂರು: ತಮಿಳಿನ ಖ್ಯಾತ ನಟ ಜಯಂ ರವಿ ಅವರು ಪತ್ನಿ ಆರತಿಗೆ ವಿಚ್ಛೇದನ ನೀಡುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ಬೆನ್ನಲ್ಲೇ ‘ನನಗೆ ಗೊತ್ತಿಲ್ಲದೆ ವಿಚ್ಛೇದನ ಘೋಷಿಸಿದ್ದಾರೆ’ ಎಂದು ಆರತಿ ಅವರು ಪೋಸ್ಟ್ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.
.ಪತ್ನಿಗೆ ವಿಚ್ಛೇದನ ನೀಡಿದ ನಟ ಜಯಂ ರವಿ; 18 ವರ್ಷಗಳ ದಾಂಪತ್ಯ ಅಂತ್ಯ.
ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಆರತಿ ಅವರು ಸುದೀರ್ಘ ಪತ್ರವೊಂದನ್ನು ಬರೆದಿದ್ದಾರೆ. ‘ವಿಚ್ಛೇದನದ ಬಗ್ಗೆ ನನಗೆ ಗೊತ್ತಿಲ್ಲದೆ ಘೋಷಣೆ ಮಾಡಿರುವುದು ಆಘಾತಕಾರಿ ಮತ್ತು ಬೇಸರವನ್ನುಂಟು ಮಾಡಿದೆ. 18 ವರ್ಷಗಳ ಕಾಲ ಪರಸ್ಪರ ಜೀವನವನ್ನು ಹಂಚಿಕೊಂಡಿದ್ದಾಗ ಇಂತಹ ಮಹತ್ವದ ವಿಷಯವನ್ನು ಅದಕ್ಕೆ ಅರ್ಹವಾದ ಗೌರವ ಮತ್ತು ಗೌಪ್ಯತೆಯಿಂದ ನಿರ್ವಹಿಸಬೇಕು ಎಂದು ನಾನು ನಂಬುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

‘ಇಬ್ಬರ ಕುಟುಂಬವನ್ನು ಗೌರವಿಸುವ ದೃಷ್ಟಿಯಿಂದ ನನ್ನ ಪತಿಯೊಂದಿಗೆ ನೇರವಾಗಿ ಮಾತನಾಡಲು ಹಲವಾರು ಬಾರಿ ಪ್ರಯತ್ನಿಸಿದೆ. ಆದರೆ ಬೇಸರದ ವಿಷಯವೆಂದರೆ ಪರಸ್ಪರ ಮಾತನಾಡಲು ಸಾಧ್ಯವಾಗಲೇ ಇಲ್ಲ. ಈಗ ಅವರು ಮಾಡಿರುವ ದಿಢೀರ್ ಘೋಷಣೆಯಿಂದ ನನಗೆ ಮತ್ತು ನನ್ನ ಮಕ್ಕಳಿಗೆ ಕತ್ತಲೆ ಕವಿದಂತಾಗಿದೆ. ಇದು ಒಂದು ಕಡೆಯ ನಿರ್ಧಾರವಾಗಿದೆ, ಇದರಿಂದ ನಮ್ಮ ಕುಟುಂಬಕ್ಕೆ ಯಾವ ಪ್ರಯೋಜನವಿಲ್ಲ’ ಎಂದಿದ್ದಾರೆ.

ಜಯಂ ಅವರ ಘೋಷಣೆಯಿಂದ ಹಲವು ಟ್ರೋಲ್ಗಳು ಕಾಮೆಂಟ್ಗಳು ಕೇಳಿಬಂದ ಹಿನ್ನೆಲೆ ಪ್ರತಿಕ್ರಿಯಿಸುತ್ತಿರುವುದಾಗಿ ಹೇಳಿರುವ ಆರತಿ, ‘ಈ ರೀತಿಯ ಘೋಷಣೆಯಿಂದ ಸಾರ್ವಜನಿಕವಾಗಿ ಟೀಕೆಗಳು ವ್ಯಕ್ತವಾಗಿವೆ, ಅನ್ಯಾಯವಾಗಿ ನನ್ನ ಮೇಲೆ ಆರೋಪ ಹೊರಿಸಿ ನನ್ನ ಮೇಲೆ ಸಾರ್ವಜನಿಕವಾಗಿ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡಿರುವುದನ್ನು ಸಹಿಸಿಕೊಳ್ಳುವುದು ಕಷ್ಟಕರವಾಗಿದೆ’ ಎಂದಿದ್ದಾರೆ.

‘ಒಬ್ಬ ತಾಯಿಯಾಗಿ ನನಗೆ ನನ್ನ ಮಕ್ಕಳೇ ಮೊದಲ ಆದ್ಯತೆ. ಈ ನಿರ್ಧಾರ ಮಕ್ಕಳ ಮೇಲೆ ಪರಿಣಾಮ ಬೀರಲು ಅವಕಾಶ ಕೊಡುವುದಿಲ್ಲ, ಅಲ್ಲದೆ ಈ ಆಧಾರರಹಿತ ಆರೋಪಗಳನ್ನೂ ಹೀಗೆಯೇ ಬಿಡುವುದಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.