‘ಉಗ್ರಂ’ ಖ್ಯಾತಿಯ ಶ್ರೀಮುರಳಿ, ರುಕ್ಮಿಣಿ ವಸಂತ್ ಜೋಡಿಯಾಗಿ ನಟಿಸಿರುವ ‘ಬಘೀರ’ ಚಿತ್ರ ಅ.31ರಂದು ತೆರೆ ಕಂಡಿದೆ. ಈ ಸಿನಿಮಾ ಮತ್ತು ಚಿತ್ರೋದ್ಯಮದ ಕುರಿತು ಶ್ರೀಮುರಳಿ ಹಂಚಿಕೊಂಡ ಒಂದಷ್ಟು ಅನಿಸಿಕೆ, ಅನುಭವಗಳು ಇಲ್ಲಿವೆ...

1. ಒಳ್ಳೆಯವರನ್ನು ಪರೀಕ್ಷೆ ಮಾಡಬಾರದು. ಕೆಟ್ಟವರನ್ನು ತಿದ್ದುತ್ತೇನೆ ಎಂದು ಹೋಗಬಾರದು. ಎರಡೂ ಸಮಯ ವ್ಯರ್ಥದ ಕೆಲಸ. ಅದನ್ನೇ ‘ಬಘೀರ’ ಕಥೆಯಲ್ಲಿ ಹೇಳಿದ್ದೇವೆ.

2. ನಾನು ನನ್ನ ಎಲ್ಲ ಸಿನಿಮಾಗಳಿಗೂ ಒಂದೇ ರೀತಿ ಕೆಲಸ ಮಾಡಿದ್ದೇನೆ. ಇಂಡಸ್ಟ್ರಿ ಎಂಬುದು ಎಲ್ಲರಿಗೂ ಒಂದೇ. ಇಲ್ಲಿ ಸಣ್ಣ ಮತ್ತು ದೊಡ್ಡ ಸಿನಿಮಾಗಳೆಂದಿಲ್ಲ. ನಮ್ಮಿಂದ ಇಂಡಸ್ಟ್ರಿಯಲ್ಲ. ಇಂಡಸ್ಟ್ರಿಗೆ ನಾವು ಅಷ್ಟೆ. ಇಲ್ಲಿ ಸಾಕಷ್ಟು ಜನ ಬರುತ್ತಾರೆ, ಹೋಗುತ್ತಾರೆ. ಎಷ್ಟು ಜನ ಉಳಿದುಕೊಳ್ಳುತ್ತಾರೆ, ಎಷ್ಟು ಜನ ಹೊರ ಹೋಗುತ್ತಾರೆ ಎಂಬುದನ್ನು ಇಂಡಸ್ಟ್ರಿ ನಿರ್ಧಾರ ಮಾಡುತ್ತದೆ.

3. ಮುರಳಿಗೆ ರುಕ್ಮಿಣಿ ಅಂತ ನಿರ್ಧಾರ ಮಾಡಿದ್ದು ನಿರ್ದೇಶಕ ಸೂರಿ. ನಿರ್ದೇಶಕರು ಅವರ ಚಿತ್ರ ತೋರಿಸಿದಾಗ ನಾನು ನನ್ನದೇ ವರ್ಕೌಟ್ ಪ್ರಂಪಚದಲ್ಲಿದ್ದೆ. ಅವರ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ಸೆಟ್ಗೆ ಕಾಲಿಟ್ಟಾಗ ಅವರು ಒಳ್ಳೆಯ ನಟಿ ಎಂಬುದು ಅವರ ನಟನೆಯಿಂದ ತಿಳಿಯಿತು.

4. ಸಾಕಷ್ಟು ಹೊಸಬರ ಜೊತೆ ಕೆಲಸ ಮಾಡಿದ್ದೇನೆ. ನನಗೆ ಹೊಸಬರು, ಹಳಬರು ಎನ್ನುವುದಕ್ಕಿಂತ ತಂಡ ಬಹಳ ಮುಖ್ಯವಾಗುತ್ತದೆ. ನಿರ್ಮಾಣ ಸಂಸ್ಥೆ ಕೂಡ ಮುಖ್ಯವಾಗುತ್ತದೆ. ನಿರ್ಮಾಣ ಸಂಸ್ಥೆ ಚಿತ್ರಕ್ಕೆ ಬೇಕಾಗಿದ್ದನ್ನೆಲ್ಲ ನೀಡಿದರೆ ಮಾತ್ರ ಚಿತ್ರ ಉತ್ತಮವಾಗಲು ಸಾಧ್ಯ. ಇಲ್ಲವಾದರೆ ನಮ್ಮೆಲ್ಲರ ಶ್ರಮ ವ್ಯರ್ಥವಾಗುತ್ತದೆ. ನನ್ನ ಅದೃಷ್ಟಕ್ಕೆ ಒಳ್ಳೊಳ್ಳೆ ನಿರ್ಮಾಪಕರು ಸಿಕ್ಕಿದ್ದಾರೆ.

5. ಪ್ರಶಾಂತ್ ನೀಲ್ ಅವರ ಬಗ್ಗೆ ಎಷ್ಟು ಮಾತಾಡಿದರೂ ಕಡಿಮೆಯೇ. ಅವರು ‘ಉಗ್ರಂ’ ಮಾಡಿದ್ದು ನನಗಾಗಿಯೇ. ನನಗಿಂತ ಹೆಚ್ಚಾಗಿ ನನ್ನ ಪತ್ನಿಗಾಗಿ. ಆ ಚಿತ್ರದಲ್ಲಿ ಇಬ್ಬರೂ ಒಬ್ಬರಿಗೊಬ್ಬರು ಜೊತೆಯಾಗಿ ನಿಂತೆವು. ‘ಉಗ್ರಂ’ನಿಂದ ಒಬ್ಬ ಅದ್ಭುತ ತಂತ್ರಜ್ಞನಾಗಿ ಅವರು ಹೊರಬಂದರು. ಆಮೇಲೆ ಎರಡು ‘ಕೆಜಿಎಫ್’ ಆಯ್ತು, ಒಂದು ‘ಸಲಾರ್’ ಆಯ್ತು. ಅದು ತುಂಬ ಖುಷಿ ಕೊಡುತ್ತದೆ. ನಾನು ಈ ಪಯಣದ ಭಾಗ ಎಂಬುದು ಹೆಮ್ಮೆ ಎನಿಸುತ್ತದೆ. ನಾನು ಮಾಡಿದೆ, ಅವರು ಮಾಡಿದರು ಎನ್ನುವುದಕ್ಕಿಂತ ನಾವೆಲ್ಲ ಸೇರಿ ಒಂದು ಸಿನಿಮಾ ಮಾಡಿದೆವು.

6. ನಾನು ಈವರೆಗೂ ಮಾಡಿರದ ಸ್ಟಂಟ್ಸ್ ಈ ಚಿತ್ರದಲ್ಲಿ ಮಾಡಿದ್ದೇನೆ. ನನಗೆ ನನ್ನನ್ನು ನೋಡಿಕೊಂಡಾಗ ಪರವಾಗಿಲ್ಲ ಈ ರೇಂಜಿಗೆ ಸ್ಟಂಟ್ಸ್ ಮಾಡಿದ್ದೇನೆ ಎನ್ನಿಸಿತು ಈ ಸಿನಿಮಾದಿಂದ. ಈ ಸಿನಿಮಾದಲ್ಲಿ ಬೇರೆ ರೀತಿ ಕಾಣಿಸುತ್ತೇನೆ. ಈ ಲುಕ್ಗಾಗಿ ಮೂರು ವರ್ಷ ಒಂದು ರೀತಿ ನರಕಯಾತ್ರೆ ತೋರಿಸಿದ್ದರು. ಏನೂ ತಿನ್ನಲು, ಊಟ ಮಾಡಲು ಕೊಡುತ್ತಿರಲಿಲ್ಲ. ಕಟ್ಟುನಿಟ್ಟಿನ ಡಯಟ್ ಇತ್ತು. ಊಟ ಮಾಡುವ ಸಂಭ್ರಮವೇ ಮರೆತು ಹೋದಂತಾಗಿತ್ತು.

ಸೂರಿ ಹೇಳಿದ್ದು

‘ಬಘೀರ’ ಎಂದರೆ ಕರಿ ಚಿರತೆ. ಸೂಪರ್ ಹೀರೊವನ್ನು ಇಷ್ಟಪಡುವ ಹುಡುಗನೊಬ್ಬ ಜೀವನದಲ್ಲಿ ತಾನೇ ಸೂಪರ್ ಹೀರೊ ಆಗುವ ಕಥೆಯಿದು. ಶ್ರೀಮುರಳಿ ಜೊತೆ ಹಲವು ಕಥೆಗಳನ್ನು ಚರ್ಚಿಸಿದ್ದೆ. ಆದರೆ ಯಾವ ಕಥೆಗಳೂ ಇಬ್ಬರಿಗೂ ಹೊಂದಾಣಿಕೆ ಆಗುತ್ತಿರಲಿಲ್ಲ. ಆಗ ಪ್ರಶಾಂತ್ ನೀಲ್ ಈ ಕಥೆ ಕೊಟ್ಟರು. ಇಬ್ಬರಿಗೂ ಇಷ್ಟವಾಯ್ತು. ವೈಯಕ್ತಿಕವಾಗಿ ನನಗೆ ಈ ರೀತಿ ಸೂಪರ್ ಹೀರೊ ಕಥೆಗಳು ಇಷ್ಟ. ಹಾಗಂತ ಇದು ಬರಿ ಆ್ಯಕ್ಷನ್ ಸಿನಿಮಾ ಅಲ್ಲ, ಫ್ಯಾಮಿಲಿ ಆಡಿಯನ್ಸ್ಗೂ ಇಷ್ಟವಾಗುವ ಕಥೆಯಿದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.