ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ, ಬಾಕ್ಸ್ ಆಫೀಸ್ನಲ್ಲಿ ‘ಕಾಂತಾರ’ದ್ದೇ ಹವಾ! ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಈ ಸಿನಿಮಾ ಇದೀಗ ಬಾಲಿವುಡ್, ಟಾಲಿವುಡ್, ಕಾಲಿವುಡ್ನಲ್ಲೂ ಸದ್ದು ಮಾಡುತ್ತಿದ್ದು, ಗಳಿಕೆಯಲ್ಲಿ ಹೊಸ ದಾಖಲೆ ಬರೆದಿದೆ.

ಸೆ.30ರಂದು ‘ಕಾಂತಾರ’ ಕನ್ನಡದಲ್ಲಷ್ಟೇ ಬಿಡುಗಡೆಯಾಗಿತ್ತು. ಕರಾವಳಿ ಭಾಗದ ದೈವಾರಾಧನೆಯ ಕಥಾಹಂದರ ಹೊಂದಿದ್ದ ಈ ಕಮರ್ಷಿಯಲ್ ಸಿನಿಮಾ ಕೆಲವೇ ದಿನಗಳಲ್ಲಿ ‘ಡಿವೈನ್ ಬ್ಲಾಕ್ಬಸ್ಟರ್’ ಎಂದು ಕರೆಸಿಕೊಳ್ಳುತ್ತಿದೆ.ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನಡಿ ನಿರ್ಮಾಣವಾದ ಈ ಸಿನಿಮಾ, ಇದೀಗ ಹಿಂದಿ, ತಮಿಳು ಮತ್ತು ತೆಲುಗಿಗೆ ಡಬ್ ಆಗಿ ರಿಲೀಸ್ ಆಗಿದೆ. ಇದು ಸಿನಿಮಾ ಕಲೆಕ್ಷನ್ ಮೇಲೂ ಭರ್ಜರಿ ಪ್ರಭಾವ ಬೀರಿದೆ. ಈ ಕಾರಣದಿಂದಾಗಿ ವೀಕೆಂಡ್ನಲ್ಲಿ ‘ಕಾಂತಾರ’ ಬಾಕ್ಸ್ ಆಫೀಸ್ ಕಲೆಕ್ಷನ್ ಹೆಚ್ಚಿದೆ.

ಅಕ್ಟೋಬರ್ 15ರಂದು, ಎಂದರೆ ಕಳೆದ ಶನಿವಾರ ಭಾರತದಾದ್ಯಂತ ಮತ್ತು ವಿದೇಶಗಳಲ್ಲಿ ಸೇರಿ ಸಿನಿಮಾ ₹15 ಕೋಟಿ ಸಂಗ್ರಹಿಸಿದೆ. ಸಿನಿಮಾ ಬಿಡುಗಡೆಯಾದ ದಿನದಿಂದ ಹಿಡಿದು ಇಲ್ಲಿಯವರೆಗೂ, ಒಂದೇ ದಿನದಲ್ಲಿ ಸಿನಿಮಾ ಇಷ್ಟು ಕಲೆಕ್ಷನ್ ಮಾಡಿರಲಿಲ್ಲ. ಹೀಗಾಗಿ ಹೊಸ ದಾಖಲೆಯೊಂದನ್ನು ಸಿನಿಮಾ ಬರೆದಿದೆ. ಒಟ್ಟಾರೆ ಸಿನಿಮಾದ ಕಲೆಕ್ಷನ್ ₹100 ಕೋಟಿ ದಾಟಿದೆ ಎನ್ನಲಾಗುತ್ತಿದೆ.

ಅ.14ಕ್ಕೆ ಹಿಂದಿಯಲ್ಲಿ ಡಬ್ ಆದ ‘ಕಾಂತಾರ’ ಬಿಡುಗಡೆಯಾಗಿತ್ತು. ಅ.15ಕ್ಕೆ ಹಿಂದಿ ಬೆಲ್ಟ್ನಲ್ಲಿ ಸಿನಿಮಾ ₹2.75 ಕೋಟಿ ಸಂಗ್ರಹಿಸಿದೆ. ಇದು ಮೊದಲನೇ ದಿನಕ್ಕೆ ಹೋಲಿಸಿದರೆ ದುಪ್ಪಟ್ಟು ಎಂದು ಚಿತ್ರತಂಡ ತಿಳಿಸಿದೆ.ಹಿಂದಿ ಭಾಷೆಯೊಂದರಲ್ಲೇ 2,500ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ಸಿನಿಮಾ ಪ್ರದರ್ಶನ ಕಂಡಿದ್ದು ಇದಕ್ಕೆ ಪ್ರಮುಖ ಕಾರಣವಾಗಿದೆ. ಇನ್ನು, ಕನ್ನಡ, ತೆಲುಗು ಮತ್ತು ತಮಿಳು ಅವತರಣಿಕೆಯಿಂದ ₹12 ಕೋಟಿ ಗಳಿಕೆ ಆಗಿದೆ. ಒಟ್ಟಾರೆ, ಶನಿವಾರ ಒಂದೇ ದಿನದಲ್ಲಿ ‘ಕಾಂತಾರ’ ಚಿತ್ರವು ನಾಲ್ಕು ಭಾಷೆಗಳಿಂದ ಸೇರಿ ₹15 ಕೋಟಿ ಗಳಿಕೆ ಮಾಡಿದೆ. ಮಲಯಾಳಂನಲ್ಲಿ ಡಬ್ ಆದ ‘ಕಾಂತಾರ’ ಅ.20ಕ್ಕೆ ಬಿಡುಗಡೆಯಾಗುತ್ತಿದ್ದು, ನಂತರದಲ್ಲಿ ಸಿನಿಮಾದ ಒಟ್ಟಾರೆ ಗಳಿಕೆ ಮತ್ತಷ್ಟು ಏರಿಕೆಯಾಗುವುದು ಖಚಿತ.

‘ಕಾಂತಾರ’, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆಯಾಗಿದ್ದು, ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ.

ಲಿಂಕ್:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.