ಬೆಂಗಳೂರು: ಸೆಂಚುರಿ ಸ್ಟಾರ್, ಕರುನಾಡ ಚಕ್ರವರ್ತಿ, ನಟ ಶಿವರಾಜ್ ಕುಮಾರ್ (ಶಿವಣ್ಣ) ಅವರಿಗೆ ಇಂದು (ಜುಲೈ 12) 62ನೇ ಜನ್ಮದಿನದ ಸಂಭ್ರಮ.

ನೆಚ್ಚಿನ ನಟನ ಹುಟ್ಟುಹಬ್ಬದ ಅಂಗವಾಗಿ ಚಿತ್ರರಂಗ ಗಣ್ಯರು, ರಾಜಕೀಯ ಮುಖಂಡರು ಸೇರಿದಂತೆ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಶುಭ ಹಾರೈಸಿದ್ದಾರೆ.

‘ಅಭಿಮಾನಿಗಳ ಪ್ರೀತಿಯ ಅಪ್ಪುಗೆ, ನೀಡೋ ಆಶೀರ್ವಾದ ನಿಮ್ಮ ಶಿವುಗೆ ಶ್ರೀರಕ್ಷೆ. ಈ ವರ್ಷ ಜನ್ಮದಿನದಂದು ಅಭಿಮಾನಿಗಳ ಜೊತೆ ಇರಲು ಸಾಧ್ಯವಾಗುವುದಿಲ್ಲ. ವರ್ಷವಿಡೀ ಒಟ್ಟಿಗೆ ಪ್ರತಿದಿನ ಸೆಲೆಬ್ರೇಟ್ ಮಾಡೋಣ’ ಎಂದು ‘ಎಕ್ಸ್’ನಲ್ಲಿ ಶಿವರಾಜ್ಕುಮಾರ್ ಪೋಸ್ಟ್ ಮಾಡಿದ್ದಾರೆ.

ಜನ್ಮದಿನಕ್ಕೆ ಸಿನಿಮಾಗಳ ಕೊಡುಗೆ...

1986ರಲ್ಲಿ ‘ಆನಂದ್’ ಚಿತ್ರದ ಮುಖಾಂತರ ಬೆಳ್ಳಿತೆರೆಗೆ ಕಾಲಿಟ್ಟ ಶಿವರಾಜ್ಕುಮಾರ್, ಸದ್ಯ ಚಂದನವನದಲ್ಲಿ 38 ವರ್ಷ ಪೂರೈಸಿ ಮುನ್ನಡೆಯುತ್ತಿದ್ದಾರೆ. 125ನೇ ಸಿನಿಮಾ ಪೂರೈಸಿದ ಸಂಭ್ರಮದಲ್ಲಿರುವ ಶಿವರಾಜ್ಕುಮಾರ್ ಅವರ ಕೈಯಲ್ಲಿರುವ ಸಿನಿಮಾಗಳ ಸಂಖ್ಯೆ ನೋಡಿದರೆ ಅವರ ವಯಸ್ಸು ಮರೆಯಾಗುತ್ತದೆ.

ಸದ್ಯ ಗೀತಾ ಪಿಕ್ಚರ್ಸ್ ಲಾಂಛನದಡಿ ನಿರ್ಮಾಣವಾಗಿರುವ ‘ಭೈರತಿ ರಣಗಲ್’, ಅರ್ಜುನ್ ಜನ್ಯ ನಿರ್ದೇಶನದ ‘45’, ಧನಂಜಯ ಅವರ ಜೊತೆಗೆ ‘ಉತ್ತರಕಾಂಡ’ ಸಿನಿಮಾಗಳು ಶಿವರಾಜ್ಕುಮಾರ್ ಕೈಯಲ್ಲಿವೆ. ‘ಭೈರತಿ ರಣಗಲ್’ ಟೀಸರ್ ಜನ್ಮದಿನದಂದು ಬಿಡುಗಡೆಯಾಗಿದೆ.

ಶಿವರಾಜ್ಕುಮಾರ್ ಅವರ 131ನೇ ಸಿನಿಮಾಗೆ ತೆಲುಗಿನ ಕಾರ್ತಿಕ್ ಅದ್ವೈತ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಇದರ ಫಸ್ಟ್ಲುಕ್ ಜುಲೈ 12ರ ಸಂಜೆ ಬಿಡುಗಡೆಯಾಗಲಿದೆ.

ಸೂರಪ್ಪ ಬಾಬು ನಿರ್ಮಾಣ ಮಾಡುತ್ತಿರುವ, ನಂದಕಿಶೋರ್ ಆ್ಯಕ್ಷನ್ ಕಟ್ ಹೇಳಲಿರುವ ‘ಶಿವಗಣ’ವೂ ಘೋಷಣೆಯಾಗಿದೆ. ಇದರಲ್ಲಿ ಶಿವರಾಜ್ಕುಮಾರ್ ಹಾಗೂ ಗಣೇಶ್ ಮುಖ್ಯಭೂಮಿಕೆಯಲ್ಲಿ ಇರಲಿದ್ದಾರೆ.

ಇದಾದ ಬಳಿಕ ಶಿವರಾಜ್ಕುಮಾರ್ ‘ಟಗರು–2’ ಸಿನಿಮಾ ಮಾಡುವ ಯೋಚನೆಯಲ್ಲಿದ್ದಾರೆ.

ಶಿವರಾಜ್ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ನಟಿಸುತ್ತಿರುವ, ಅರ್ಜುನ್ ಜನ್ಯ ಆ್ಯಕ್ಷನ್ ಕಟ್ ಹೇಳುತ್ತಿರುವ ‘45’ ಸಿನಿಮಾದ ಚಿತ್ರೀಕರಣ ಕೊನೆಯ ಹಂತ ತಲುಪಿದೆ. ‘ಬಹುಕೋಟಿ ವೆಚ್ಚದಲ್ಲಿ ಸಿನಿಮಾ ಅದ್ದೂರಿಯಾಗಿ ನಿರ್ಮಾಣವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.