ಬೆಂಗಳೂರು: ನಟ ಗೌರಿ ಶಂಕರ್ ಎಸ್ಆರ್ಜಿ ಮುಖ್ಯಪಾತ್ರದಲ್ಲಿರುವ 'ಕೆರೆಬೇಟೆ' ಕನ್ನಡ ಚಿತ್ರದ ಟೀಸರ್ ಬುಧವಾರ ಬಿಡುಗಡೆಯಾಗಿದ್ದು ಕನ್ನಡ ಸಿನಿಪ್ರಿಯರ ಗಮನ ಸೆಳೆದಿದೆ.

ಎ2ಮ್ಯೂಸಿಕ್ ಯೂಟ್ಯೂಬ್ ಚಾನಲ್ನಲ್ಲಿ ಟೀಸರ್ ಬಿಡುಗಡೆಯಾಗಿದ್ದು ಕೆಲವೇ ಗಂಟೆಗಳಲ್ಲಿ ಉತ್ತಮ ವೀಕ್ಷಣೆ ಕಂಡಿದೆ.

ಈ ಹಿಂದೆ ‘ಜೋಕಾಲಿ’ ಮತ್ತು ‘ರಾಜಹಂಸ’ ಸಿನಿಮಾಗಳಲ್ಲಿ ನಾಯಕನಾಗಿದ್ದ ಗೌರಿ ಶಂಕರ್ ‘ಕೆರೆಬೇಟೆ’ ಚಿತ್ರದ ಮೂಲಕ ಮತ್ತೆ ಸ್ಯಾಂಡಲ್ವುಡ್ನಲ್ಲಿ ಸಕ್ರಿಯರಾಗಿದ್ದಾರೆ. ಮಲೆನಾಡಿನ ಮೀನುಗಾರಿಕೆ ಕಥೆಯನ್ನು ಹೊಂದಿರುವ ಚಿತ್ರಕ್ಕೆ 10 ವರ್ಷಗಳಿಂದ ಚಿತ್ರರಂಗದಲ್ಲಿ ಸಹ ನಿರ್ದೇಶಕರಾಗಿರುವ ರಾಜ್ ಗುರು ಆ್ಯಕ್ಷನ್ ಕಟ್ ಹೇಳಿದ್ದಾರೆ.

ಜೈ ಶಂಕರ್ ಪಟೇಲ್ ಮತ್ತು ಗೌರಿ ಶಂಕರ್ ‘ಜನಮನ ಸಿನಿಮಾ’ ಬ್ಯಾನರ್ ಮೂಲಕ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇದು ‘ಅಪ್ಪಟ ಮಲೆನಾಡ ಸೊಗಡಿನ ಕಥೆ. ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಇದೇ ವರ್ಷ ಚಿತ್ರ ತೆರೆಗೆ ಬರಲಿದೆ. ಸಿಗಂದೂರು ಮತ್ತು ಸೊರಬ ಸುತ್ತಮುತ್ತ ಚಿತ್ರೀಕರಣ ನಡೆದಿದೆ.

ಗಗನ್ ಬಡೇರಿಯ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.