ಬೆಂಗಳೂರು: ಕಳೆದ ಗುರುವಾರಜಗತ್ತಿನಾದ್ಯಂತ ತೆರೆ ಕಂಡಿರುವ ಪ್ಯಾನ್ ಇಂಡಿಯಾ ಚಿತ್ರ ಕೆ.ಜಿ.ಎಫ್ ಚಾಪ್ಟರ್–2, ಕೇವಲ ಎರಡೇ ದಿನಕ್ಕೆ ಜಾಗತಿಕವಾಗಿ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ₹300 ಕೋಟಿ ಗಡಿ ದಾಟಿದೆ.

ಯಶ್ ಅಭಿನಯದ ಈ ಸಿನಿಮಾ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಚಿತ್ರರಂಗವನ್ನೇಬೆರಗುಗೊಳಿಸಿದೆ.

ಸಿನಿಮಾ ಹಾಗೂ ಮನರಂಜನಾ ಕ್ಷೇತ್ರದ ವಿಶ್ಲೇಷಕ ರಮೇಶ್ ಬಾಲಾ ಅವರು ನೀಡಿರುವ ಮಾಹಿತಿ ಪ್ರಕಾರ, ‘ಕೆಜಿಎಫ್ ಚಾಪ್ಟರ್–2 ಸಿನಿಮಾ ಬಿಡುಗಡೆಯಾಗಿ ಎರಡೇ ದಿನದಲ್ಲಿ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ₹300 ಕೋಟಿ ಗಡಿ ದಾಟಿದೆ. ಹಿಂದಿ ಅವತರಣಿಕೆಯಲ್ಲೇ₹100 ಕೋಟಿ ದಾಟಿದೆ’ ಎಂದು ತಿಳಿಸಿದ್ದಾರೆ.

ಈ ಚಿತ್ರವನ್ನು ಹಿಂದಿಯಲ್ಲಿ ವಿತರಣೆ ಮಾಡಿರುವ ಎಕ್ಸೆಲ್ ಸಿನಿಮಾ ಸಂಸ್ಥೆ, ಹಿಂದಿ ಭಾಷೆಯ ಮಾರುಕಟ್ಟೆಯಲ್ಲಿ ಕೆಜೆಎಫ್ ಚಾಪ್ಟರ್–2 ₹134 ಕೋಟಿ ಗಳಿಸಿದೆ ಎಂದು ಹೇಳಿಕೊಂಡಿದೆ.

ಕೆ.ಜಿ.ಎಫ್–2 ಸಿನಿಮಾ ವಿಮರ್ಶೆ: ಚಿನ್ನದ ಕಡಲಲ್ಲಿ ರಾಕಿ ‘ದುನಿಯಾ’

ಕೆಲ ಇಂಗ್ಲಿಷ್ ವಾಹಿನಿಗಳ ವರದಿ ಹಾಗೂ ಬಾಕ್ಸ್ ಆಫೀಸ್ ಇಂಡಿಯಾ.ಕಾಮ್ ಪ್ರಕಾರ ಕೆಜಿಎಫ್ ಚಾಪ್ಟರ್ 2 ಸಿನಿಮಾ ಮೊದಲ ದಿನದಲ್ಲೇ ₹125 ಕೋಟಿ ಗಳಿಕೆ ಕಂಡಿತ್ತು ಎನ್ನಲಾಗಿದೆ. ಇನ್ನೊಂದು ವಿಶೇಷವೆಂದರೆ, ಹಿಂದಿಯಲ್ಲಿ ಬಿಡುಗಡೆಯಾಗಿ ಮೊದಲ ದಿನವೇ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ದಾಖಲೆಯನ್ನು ಈ ಚಿತ್ರ ಮಾಡಿದೆ.

ಎಸ್.ಎಸ್. ರಾಜಮೌಳಿ ಅವರ ‘ಬಾಹುಬಲಿ ದಿ ಬಿಗಿನಿಂಗ್’ನ ಹಿಂದಿ ಅವತರಣಿಕೆ ಮೊದಲ ದಿನ ಸುಮಾರು ₹37 ಕೋಟಿ ಗಳಿಸಿತ್ತು. ಇದೀಗ ಕೆಜಿಎಫ್ ಚಾಪ್ಟರ್–2 ₹39 ಕೋಟಿ ಗಳಿಸಿರುವುದಾಗಿ ವರದಿಗಳು ಹೇಳಿವೆ.

ಟೈಗರ್ ಶ್ರಾಫ್ ಹಾಗೂ ಹೃತಿಕ್ ರೋಷನ್ ಅವರ ವಾರ್ ಸಿನಿಮಾ ಮೊದಲ ದಿನ ₹29 ಕೋಟಿ, ಅಮಿರ್ ಖಾನ್ ಅವರ ತಗ್ಸ್ ಆಫ್ ಹಿಂದೂಸ್ತಾನ್ ₹26 ಕೋಟಿ, ಸಲ್ಮಾನ್ ಖಾನ್ ಅವರ ಟೈಗರ್ ಜಿಂದಾ ಹೈ ₹24 ಕೋಟಿ ಗಳಿಸಿತ್ತು.

ಭಾರತೀಯ ಸಿನಿಮಾ ರಂಗದಲ್ಲಿ ಅತ್ಯಧಿಕ ಗಳಿಕೆ ಕಂಡ (ಸುಮಾರು ₹1200 ಕೋಟಿ) ಸಿನಿಮಾ ಎಂಬ ಖ್ಯಾತಿ ಗಳಿಸಿರುವ ಬಾಹುಬಲಿ ದಿ ಬಿಗಿನಿಂಗ್‌ನ ದಾಖಲೆಯನ್ನು ಹಾಗೂ ಸಾವಿರ ಕೋಟಿ ದಾಟಿರುವ ಆರ್‌ಆರ್‌ಆರ್ ಚಿತ್ರದ ದಾಖಲೆಯನ್ನುಕೆಜಿಎಫ್ ಚಾಪ್ಟರ್– 2 ಅಳಿಸಿ ಹಾಕುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ವೈವಾಹಿಕ ಜೀವನಕ್ಕೆ ಕಾಲಿಟ್ಟ ರಣಬೀರ್ –ಆಲಿಯಾ: ಶುಭ ಹಾರೈಸಿದ ಪ್ರಿಯಾಂಕಾ ಚೋಪ್ರಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.