ಬೆಂಗಳೂರು: ಸಾಲು ಸಾಲು ಸಿನಿಮಾಗಳ ಸೋಲಿನಿಂದ ಕಂಗೆಟ್ಟಿರುವ ತೆಲುಗು ನಟ ರವಿತೇಜ ಇದೀಗ 'ಕ್ರ್ಯಾಕ್' ಆಗಿ ಕಮಾಲ್ ಮಾಡಲು ಬರುತ್ತಿದ್ದಾರೆ.

ರವಿತೇಜ ನಟೆಯಆ್ಯಕ್ಷನ್–ಕಾಮಿಡಿ ಇರುವ 'ಕ್ರ್ಯಾಕ್' ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಿಡುಗಡೆಯಾಗಿ 16 ಗಂಟೆಗಳಲ್ಲಿ ಸುಮಾರು 25 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.

ರವಿತೇಜ ರಗಡ್ ಲುಕ್ನ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಂಚ್ ಡೈಲಾಗ್ಗಳು ಹಾಗೂ ಮೈನವಿರೇಳಿಸುವ ಸಾಹಸ ದೃಶ್ಯಗಳ ಮೂಲಕ ರವಿತೇಜ್ ಮತ್ತೆ ಬಂದಿದ್ದಾರೆ.

ಯಶಸ್ವಿ ನಿರ್ದೇಶಕ ಎಂದೇ ಕರೆಸಿಕೊಳ್ಳುವ ಗೋಪಿಚಂದ್ ಮಾಲಿನೇನಿ ‘ಕ್ರ್ಯಾಕ್’ ಸಿನಿಮಾವನ್ನುನಿರ್ದೇಶನ ಮಾಡಿದ್ದಾರೆ. ರವಿತೇಜಗೆಶ್ರುತಿ ಹಾಸನ್ ಜೊತೆಯಾಗಿದ್ದಾರೆ. ಈ ಚಿತ್ರದ ಮೇಲೆ ರವಿತೇಜ ಸೇರಿದಂತೆ ಅವರ ಅಭಿಮಾನಿಗಳುಅಪಾರ ನಿರೀಕ್ಷೆ ಇರಿಸಿಕೊಂಡಿದ್ದಾರೆ.

'ಕ್ರ್ಯಾಕ್' ಮೇ 8ರಂದು ಬಿಡುಗಡೆಯಾಗಲಿದೆ.

ಒಂದು ಕಾಲದಲ್ಲಿ ತೆಲುಗಿನ ಸ್ಟಾರ್ ಹೀರೊಗಳ ಪಟ್ಟಿಯಲ್ಲಿ ಹೆಸರು ಗಿಟ್ಟಿಸಿಕೊಂಡಿದ್ದ ರವಿತೇಜ ಕೆಲ ದಿನಗಳಿಂದ ಸುದ್ದಿಯಲ್ಲಿರಲಿಲ್ಲ. ತಮ್ಮ ಆ್ಯಕ್ಷನ್–ಕಾಮಿಡಿ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಈ ನಟ ತೆಲುಗಿನಲ್ಲಿ ಅನೇಕ ಹಿಟ್ ಸಿನಿಮಾಗಳನ್ನು ನೀಡಿದವರು.ತೆಲುಗಿನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಖ್ಯಾತಿಯೂ ಇವರಿಗಿದೆ. 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ರವಿತೇಜ ಕನ್ನಡದ ‘ವಂದೇಮಾತರಂ’ ಹಾಗೂ ‘ವಜ್ರಕಾಯ’ ಸಿನಿಮಾದಲ್ಲೂ ನಟಿಸಿದ್ದರು.

2015ರಲ್ಲಿ ತೆರೆಕಂಡ ಸಂಪತ್ ನಂದಿ ನಿರ್ದೇಶನದ ಆ್ಯಕ್ಷನ್–ಕಾಮಿಡಿ ಚಿತ್ರ ‘ಬೆಂಗಾಲ್ ಟೈಗರ್’ ರವಿತೇಜಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ನಂತರಬಂದ ಅಮರ್ ಅಕ್ಬರ್ ಅಂಥೋನಿ,ಡಿಸ್ಕೊ ರಾಜಾ ಚಿತ್ರಗಳು ಸದ್ದು ಮಾಡಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.