ನಟಿ ಲಕ್ಷ್ಮಿ ರೈ ಗ್ಲಾಮರ್ ಬೆಡಗಿ. ಪ್ರತಿಭಾನ್ವಿತ ನಟಿಯೂ ಹೌದು. ಕನ್ನಡದಲ್ಲಿ ಆಕೆ ನಟಿಸಿರುವ ‘ಝಾನ್ಸಿ’ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಪಕ್ಕಾ ಆ್ಯಕ್ಷನ್ ಸಿನಿಮಾ ಇದು. ಕಾಲ್ಪನಿಕ ಕಥೆ ಆಧಾರಿತ ಇದರಲ್ಲಿ ಹಲವು ನೈಜ ಘಟನೆಗಳನ್ನು ಅಳವಡಿಸಿಕೊಳ್ಳಲಾಗಿದೆಯಂತೆ.

ಆಕೆಯ ಬಣ್ಣದ ಬುಟ್ಟಿಯಲ್ಲಿ ಹಲವು ಸಿನಿಮಾಗಳಿವೆ. ಆ ಪೈಕಿ ಆಕೆ ತಮಿಳಿನಲ್ಲಿ ನಟಿಸಿರುವ ‘ಸಿಂಡ್ರೆಲ್ಲಾ’ ಸಿನಿಮಾ ಕುತೂಹಲ ಹೆಚ್ಚಿಸಿದೆ. ಇದನ್ನು ನಿರ್ದೇಶಿಸಿರುವುದು ವಿನೋ ವೆಂಕಟೇಶ್. ಹಾರರ್ ಚಿತ್ರ ಇದು. ಇದರ ಹೊಸ ಪೋಸ್ಟರ್ ಬಿಡುಗಡೆಯಾಗಿದ್ದು, ಆಕೆಯ ಹೊಸ ಅವತಾರ ಕಂಡು ಅಭಿಮಾನಿಗಳು ಬೆರಗಾಗಿದ್ದಾರೆ.

ಸಿನಿಮಾಗಳಲ್ಲಿ ಆಕೆ ಗ್ಲಾಮರ್ ಲುಕ್ನಲ್ಲಿಯೇ ಕಾಣಿಸಿಕೊಳ್ಳುವುದೇ ಹೆಚ್ಚು. ಸಾಮಾಜಿಕ ಜಾಲತಾಣಗಳಲ್ಲೂ ಗ್ಲಾಮರ್ ಫೋಟೊಗಳನ್ನೇ ಅಪ್ಲೋಡ್ ಮಾಡುತ್ತಾರೆ. ಈ ಚಿತ್ರದಲ್ಲಿ ಆಕೆಯದ್ದು ಅಪ್ಪಟ ಹಳ್ಳಿ ಹುಡುಗಿಯ ಗೆಟಪ್. ಸಾಧಾರಣ ಶರ್ಟ್ ಧರಿಸಿರುವ ಆಕೆ ಡಿಗ್ಲಾಮರ್ ಆಗಿ ಕನ್ನಡಿಯ ಮುಂದೆ ನಿಂತಿದ್ದಾರೆ. ಕನ್ನಡಿಯೊಳಗಿಂದ ರಕ್ತಸಿಕ್ತ ಕೈಯಿಂದ ಕಿರೀಟ ಪಡೆಯುವ ಉತ್ಸಾಹದಲ್ಲಿರುವ ಈ ಪೋಸ್ಟರ್ ಚಿತ್ರದ ಕಥೆಯ ಬಗ್ಗೆ ಕುತೂಹಲವನ್ನು ಹೆಚ್ಚಿಸಿದೆ.

ಚಿತ್ರದಲ್ಲಿ ಆಕೆಯದ್ದು ಪ್ರಧಾನ ಪಾತ್ರ. ಆಕೆಯೊಟ್ಟಿಗೆ ಸಾಕ್ಷಿ ಅಗರ್ವಾಲ್ ಕೂಡ ನಟಿಸಿದ್ದಾರೆ. ಕಳೆದ ಮಾರ್ಚ್ನಲ್ಲಿಯೇ ಈ ಸಿನಿಮಾ ಬಿಡುಗಡೆಯಾಗಬೇಕಿತ್ತು. ಕೊರೊನಾ ಭೀತಿಯಿಂದ ಬಿಡುಗಡೆಗೆ ವಿಳಂಬವಾಗಿದೆ. ಎಸ್ಎಸ್ಐ ಪ್ರೊಡಕ್ಷನ್ನಡಿ ಇದು ನಿರ್ಮಾಣಗೊಂಡಿದೆ.

ಇದೊಂದು ಫ್ಯಾಂಟಸಿ ಕಥನ. ಇದರಲ್ಲಿ ಮೂರು ವಿಭಿನ್ನ ಕಥೆಗಳು ಬೆಸೆದುಕೊಂಡಿವೆಯಂತೆ. ಲಕ್ಷ್ಮಿ ರೈ ಮೂರು ಶೇಡ್ನಲ್ಲಿ ಕಾಣಿಸಿಕೊಂಡಿದ್ದಾರೆ. ಆ ಪೈಕಿ ರಾಕ್ಸ್ಟಾರ್ ಪಾತ್ರವೂ ಒಂದಾಗಿದೆ. ಮಹಿಳಾ ಕೇಂದ್ರಿತ ಚಿತ್ರ ಇದಾಗಿದೆ. ಭಾವುಕತೆಯ ಜೊತೆಗೆ ಸಿಂಡ್ರೆಲ್ಲಾ ಕಥೆಯ ಎಳೆಯೂ ಇದೆಯಂತೆ. ಆದರೆ, ಆಕೆಯ ಪಾತ್ರಕ್ಕೆ ರೊಮ್ಯಾಂಟಿಕ್ ಸ್ಪರ್ಶವಿಲ್ಲ ಎಂಬುದು ಚಿತ್ರತಂಡದ ವಿವರಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.