‘ಲೂಸ್ ಮಾದ’ ಯೋಗೇಶ್ ನಟನೆಯ ‘ಲಂಬೋದರ ಬಸವನಗುಡಿ ಬೆಂಗಳೂರು’ ಚಿತ್ರ ಈ ಶುಕ್ರವಾರ ತೆರೆಕಾಣುತ್ತಿದೆ. ಕಳೆದ ಒಂದು ವರ್ಷದಿಂದ ಯೋಗಿ ನಟನೆಯ ಒಂದೂ ಚಿತ್ರ ತೆರೆಗೆ ಬಂದಿಲ್ಲ. ಹಾಗಾಗಿ, ಈ ಸಿನಿಮಾದ ಮೇಲೆ ಅವರಿಗೆ ನಿರೀಕ್ಷೆ ಹೆಚ್ಚಿದೆಯಂತೆ.

‘ಇದು ಪಕ್ಕಾ ಕಾಮಿಡಿ, ಸೆಂಟಿಮೆಂಟ್ ಚಿತ್ರ. ಶಾಲಾ ಹಂತದಿಂದ ಹಿಡಿದು ಕಾಲೇಜು ಹಂತದವರೆಗೆ ಹೇಗೆ ಯೋಗಿಯ ಬದುಕು ಸಾಗುತ್ತದೆ ಎನ್ನುವುದರ ಸುತ್ತ ಕಥೆ ಹೊಸೆಯಲಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು ನಿರ್ದೇಶಕ ಕೆ. ಕೃಷ್ಣರಾಜ್.

ಪೋಷಕ ನಟಿ ಅರುಣಾ ಬಾಲರಾಜ್ ನಾಯಕನ ಅಮ್ಮನಾಗಿ ಬಣ್ಣಹಚ್ಚಿದ್ದಾರೆ. ‘ಚಿತ್ರದಲ್ಲಿ ಅಮ್ಮ – ಮಗನ ಬಾಂಧವ್ಯ ಚೆನ್ನಾಗಿದೆ’ ಎಂದರು.

ಚಿತ್ರದಲ್ಲಿ ಫ್ಲಾಷ್ಬ್ಯಾಕ್ ಕಥೆ ಇದೆಯಂತೆ. ‘ಮಗನಿಗೆ ಅಮ್ಮನಾಗಿ ಬುದ್ಧಿ ಹೇಳಬೇಕಲ್ಲ. ಹಾಗಾಗಿ, ಅವನಿಗೆ ಪೊರಕೆಯಲ್ಲಿ ಚೆನ್ನಾಗಿ ಬಾರಿಸಿದ್ದೇನೆ’ ಎಂದು ನಕ್ಕರು. ಯೋಗೇಶ್, ‘ಇದು ಕೌಟುಂಬಿಕ ಚಿತ್ರ. ಜನರಿಗೆ ಮನರಂಜನೆಯ ಪ್ಯಾಕೇಜ್ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.