ಭಿನ್ನವಾದ ಶೀರ್ಷಿಕೆಯಿಂದಲೇ ಗಮನಸೆಳೆದಿರುವ, ಆರ್.ಜೆ.ಪ್ರದೀಪ್ ನಿರ್ಮಾಣದ ‘ಮರ್ಯಾದೆ ಪ್ರಶ್ನೆ’ ಸಿನಿಮಾ ನ.22ರಂದು ಬಿಡುಗಡೆಯಾಗಲಿದೆ.

ಸಕ್ಕತ್ ಸ್ಟುಡಿಯೊದ ಸಂಸ್ಥಾಪಕ ಆರ್.ಜೆ ಪ್ರದೀಪ್, ಚಿತ್ರದ ನಿರ್ದೇಶಕ ನಾಗರಾಜ್ ಸೋಮಯಾಜಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಚಿತ್ರ ಬಿಡುಗಡೆಯ ಮಾಹಿತಿ ನೀಡಿದರು. ‘ಸಕ್ಕತ್ ಸ್ಟುಡಿಯೊ ನಮ್ಮ ಕನಸು. ಒಂದೊಳ್ಳೆಯ ಸಿನಿಮಾ ಮಾಡಬೇಕು ಅನಿಸಿತ್ತು. ನಾನು, ನಾಗರಾಜ್ ಕಥೆ ಬಗ್ಗೆ ಚರ್ಚೆ ಮಾಡಿ, ಇಬ್ಬರು ಸೇರಿ ಸಿನಿಮಾಗಾಗಿ ಕೈ ಜೋಡಿಸಿದೆವು’ ಎಂದು ಪ್ರದೀಪ್ ತಿಳಿಸಿದರು.

‘ರಾಜ್ಯದಲ್ಲಿ ಮಾತ್ರವಲ್ಲ, ಹೈದರಾಬಾದ್, ಚೆನ್ನೈ ಹೀಗೆ ಬೇರೆ ರಾಜ್ಯಗಳ ಜೊತೆಗೆ ವಿದೇಶದಲ್ಲಿಯೂ ‘ಮರ್ಯಾದೆ ಪ್ರಶ್ನೆ’ ಸಿನಿಮಾ ರಿಲೀಸ್ ಆಗಲಿದೆ’ ಎಂದು ಚಿತ್ರತಂಡ ತಿಳಿಸಿದೆ. ಸಿನಿಮಾದಲ್ಲಿ ರಾಕೇಶ್ ಅಡಿಗ, ಸುನೀಲ್ ರಾವ್, ಶೈನ್ ಶೆಟ್ಟಿ, ತೇಜು ಬೆಳವಾಡಿ, ಪೂರ್ಣಚಂದ್ರ ಮೈಸೂರು, ಪ್ರಭು ಮುಂಡ್ಕೂರ್, ರೇಖಾ ಕೂಡ್ಲಿಗಿ, ನಾಗೇಂದ್ರ ಶಾ, ಶ್ರವಣ್ ಮುಖ್ಯ ತಾರಾಗಣದಲ್ಲಿದ್ದಾರೆ.

ಚಿತ್ರಕ್ಕೆ ಪ್ರದೀಪ್ ಅವರೇ ಕಥೆ ಬರೆದಿದ್ದಾರೆ. ನಾಗರಾಜ್ ಈ ಹಿಂದೆ ‘ದಿ ಬೆಸ್ಟ್ ಆ್ಯಕ್ಟರ್’, ‘ಮೈಕ್ರೊ’ ಸಿನಿಮಾಗಳನ್ನು ಮಾಡಿದ್ದರು. ‘ಮರ್ಯಾದೆ ಪ್ರಶ್ನೆ’ ಚಿತ್ರಕ್ಕೆ ಸಂದೀಪ್ ವೆಲ್ಲುರಿ ಛಾಯಾಚಿತ್ರಗ್ರಹಣ, ಅರ್ಜುನ್ ರಾಮು ಸಂಗೀತವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.