‘ನಾನು ಕೋ ಕೋ ಕೋಳಿಕ್ಕೆ ರಂಗ...’ ಈ ಹಾಡನ್ನು ಕೇಳದವರೇ ಇಲ್ಲ. ಇದೇ ಹಾಡನ್ನು ಶೀರ್ಷಿಕೆಯಾಗಿಸಿಕೊಂಡು ಮಾಸ್ಟರ್ ಆನಂದ್ ನಟಿಸಿರುವ ‘ನಾ ಕೋಳಿಕ್ಕೆರಂಗ’ ಸಿನಿಮಾ ನವೆಂಬರ್ 10ರಂದು ತೆರೆಗೆ ಬರಲಿದೆ.

‘ಕೋವಿಡ್ಗೆ ಮೊದಲು ಚಿತ್ರ ಶುರುವಾಗಿತ್ತು. ‘ಮರೆಯೋದುಂಟೆ ಮೈಸೂರ ದೊರೆಯ’ ಹಾಡು ಚಿತ್ರದಲ್ಲಿದೆ. ಅದರಲ್ಲಿ ಮೈಸೂರು ದಸರಾ ಮತ್ತು ಮಹಾರಾಜರ ವಿಷಯಗಳು ಬರುತ್ತವೆ. ಹಾಗಾಗಿ ದಸರಾ ವೇಳೆ ಸಿನಿಮಾ ರಿಲೀಸ್ ಮಾಡುವ ಉದ್ದೇಶವಿತ್ತು. ಆದರೆ ಸ್ವಲ್ಪ ತಡವಾಗಿ ತೆರೆಗೆ ಬರುತ್ತಿದ್ದೇವೆ’ ಎಂದರು ಮಾಸ್ಟರ್ ಆನಂದ್.

ಗೊರವಾಲೆ ಮಹೇಶ್ ನಿರ್ದೇಶನದ ಚಿತ್ರಕ್ಕೆ ಎಸ್.ಟಿ. ಸೋಮಶೇಖರ್ ಬಂಡವಾಳ ಹೂಡಿದ್ದಾರೆ. ‘ಅಮ್ಮನಾಗಿ ಹಿರಿಯ ನಟಿ ಭವ್ಯಾ ಕಾಣಿಸಿಕೊಂಡಿದ್ದಾರೆ. ಮಂಡ್ಯ ಭಾಗದಲ್ಲೇ ಶೇ. 90ರಷ್ಟು ಚಿತ್ರೀಕರಣ ಮಾಡಿದ್ದೇವೆ’ ಎಂದು ಮಹೇಶ್ ತಿಳಿಸಿದರು.

ರಾಜೇಶ್ವರಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಧನಪಾಲ್ ಮತ್ತು ಬೆಟ್ಟೇಗೌಡ ಅವರ ಛಾಯಾಗ್ರಹಣವಿದೆ. ಶೋಭರಾಜ್, ಹೊನ್ನವಳ್ಳಿ ಕೃಷ್ಣ, ಪುಂಗ, ಶಕೀಲಾ ಮತ್ತಿರರು ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.