ಚೆನ್ನೈ: ಮದುವೆಯಾದ 29 ವರ್ಷಗಳ ನಂತರ ಬೇರೆಯಾಗಿರುವುದಾಗಿ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಹಾಗೂ ಅವರ ಪತ್ನಿ ಸಾಯಿರಾ ಬಾನು ಅವರು ಮಂಗಳವಾರ ಘೋಷಿಸಿದ್ದಾರೆ.

1995ರಲ್ಲಿ ಮದುವೆಯಾಗಿದ್ದ ಈ ಜೋಡಿಗೆ ಖತಿಜಾ, ರಹೀಮಾ, ಅಮೀನ್ ಎಂಬ ಮೂವರು ಮಕ್ಕಳಿದ್ದಾರೆ.

ರೆಹಮಾನ್ ಹಾಗೂ ಸಾಯಿರಾ ಪರವಾಗಿ ವಕೀಲೆ ವಂದನಾ ಶಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಸಂಬಂಧದಲ್ಲಿ ಭಾವನಾತ್ಮಕ ಒತ್ತಡಗಳು ಹೆಚ್ಚಾದ ಕಾರಣ ಈ 'ಕಠಿಣ ನಿರ್ಧಾರ' ಕೈಗೊಳ್ಳಬೇಕಾಯಿತು ಎಂದು ಅವರಿಬ್ಬರು ಹೇಳಿರುವುದಾಗಿ ತಿಳಿಸಲಾಗಿದೆ.

'ಪರಸ್ಪರ ಆಳವಾದ ಪ್ರೀತಿ ಹೊಂದಿದ್ದರೂ, ಒತ್ತಡಗಳು ಮತ್ತು ಕಠಿಣ ಪರಿಸ್ಥಿತಿಗಳು ತಮ್ಮ ನಡುವೆ ಅಂತರ ಸೃಷ್ಟಿಸಿವೆ. ಅದನ್ನು ಸರಿಪಡಿಸಲಾಗದು ಎಂಬುದನ್ನು ಅವರು ಅರಿತಿದ್ದಾರೆ' ಎಂದು ಉಲ್ಲೇಖಿಸಲಾಗಿದೆ.

'ಸಾಯಿರಾ ಹಾಗೂ ರೆಹಮಾನ್ ಅವರು ಅಪಾರ ನೋವು ಮತ್ತು ಸಂಕಟದಿಂದಲೇ ಈ ನಿರ್ಧಾರ ಕೈಗೊಂಡಿದ್ದಾರೆ' ಎಂದು ಪುನರುಚ್ಚರಿಸಲಾಗಿದೆ.

ಇಂತಹ ಕಠಿಣ ಸಂದರ್ಭದಲ್ಲಿ ತಮ್ಮ ಖಾಸಗಿತನವನ್ನು ಗೌರವಿಸುವಂತೆ ಅವರಿಬ್ಬರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ ಎಂದೂ ಶಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.