ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಕನ್ನಡದ ಅತ್ಯುತ್ತಮ ಚಿತ್ರ ‘ಚಾರ್ಲಿ 777’

Published : 24 ಆಗಸ್ಟ್ 2023, 16:03 IST
Last Updated : 24 ಆಗಸ್ಟ್ 2023, 16:03 IST
ಫಾಲೋ ಮಾಡಿ
Comments
ಇದನ್ನು ದೇವರ ಅನುಗ್ರಹ ಎಂದು ಭಾವಿಸುತ್ತೇನೆ. ನನ್ನ ಮೂರು ವರ್ಷಗಳ ಪರಿಶ್ರಮ ಇದು. ನೂರಕ್ಕೂ ಹೆಚ್ಚು ಅಮ್ಮನ ಸಿನಿಮಾಗಳನ್ನು ನೋಡಿ ಇದನ್ನು ಸಿದ್ಧಪಡಿಸಿದ್ದೆ. ಕಲಾವಿದರೊಬ್ಬರ ಬಗ್ಗೆ ಇರುವ ಸುದೀರ್ಘ ಸಾಕ್ಷ್ಯಚಿತ್ರವಿದು. ಹೀಗಾಗಿಯೇ ಮೂರು ದಾಖಲೆಗಳು ಇದರ ಮೇಲಿದೆ. ನಮ್ಮಲ್ಲಿ ಸಾಕಷ್ಟು ಕಲಾವಿದರು ಪ್ರತಿಭೆಗಳಿದ್ದಾರೆ. ಇವರ ಬಗ್ಗೆ ಇಂತಹ ಒಂದು ದಾಖಲೆ ಸಿದ್ಧಪಡಿಸಲು ನನ್ನ ಈ ಪ್ರಯತ್ನ ಒಂದು ನಾಂದಿಯಾಗಬೇಕು. ಇಂತಹ ಸಾಕ್ಷ್ಯಚಿತ್ರ ನಮ್ಮ ಹಿರಿಯರ ಬಗ್ಗೆ ಒಂದು ದಾಖಲೆ ಇದ್ದಂತೆ. ರಾಜ್ಯ ಪ್ರಶಸ್ತಿಯಲ್ಲಿ ಸಾಕ್ಷ್ಯಚಿತ್ರಕ್ಕೆ 30 ನಿಮಿಷ ಅವಧಿಯ ನಿಯಮವಿದೆ. ಇದರಿಂದಾಗಿ ಇಂತಹ ಸಾಕ್ಷ್ಯಚಿತ್ರಕ್ಕೆ ನ್ಯಾಯವೂ ಸಿಗುವುದಿಲ್ಲ. ವ್ಯಕ್ತಿ ವಿಷಯಕ್ಕೂ ನಿರ್ದೇಶಕನೊಬ್ಬ ನ್ಯಾಯ ಒದಗಿಸಿಕೊಡಲು ಸಾಧ್ಯವಿಲ್ಲ. ಈ ನಿಯಮವನ್ನು ರಾಜ್ಯ ಸರ್ಕಾರ ಬದಲಾಯಿಸಬೇಕು.   
- ಅನಿರುದ್ಧ ಜತ್ಕರ್‌ ನಟ 
ನಮ್ಮ ಇಡೀ ತಂಡಕ್ಕೆ ‘777 ಚಾರ್ಲಿ’ ಒಂದು ವಿಶೇಷ ಸಿನಿಮಾವಾಗಿತ್ತು. ಐದು ವರ್ಷಗಳ ಪಯಣ ಇದು. ಉಳಿದ ಸಿನಿಮಾದ ತಯಾರಿಯಂತೆ ಈ ಸಿನಿಮಾದ ತಯಾರಿ ಇರಲಿಲ್ಲ. ಇಡೀ ತಂಡವೇ ನಾಲ್ಕೈದು ವರ್ಷ ಇದಕ್ಕಾಗಿ ವ್ಯಯಿಸಿತ್ತು. ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾದಾಗಲೇ ನಮ್ಮ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿತ್ತು. ಇದೀಗ ರಾಷ್ಟ್ರ ಪ್ರಶಸ್ತಿ ಸಿಕ್ಕಿರುವುದು ಅದಕ್ಕೊಂದು ಗರಿ. ನನ್ನ ಚೊಚ್ಚಲ ಸಿನಿಮಾ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವುದಕ್ಕೆ ಖುಷಿ ಇದೆ. ಒಂದು ಗೌರವ ಸಿಕ್ಕಿದೆ. ಪರಂವಃ ಸ್ಟುಡಿಯೋಸ್‌ ರಕ್ಷಿತ್‌ ಶೆಟ್ಟಿ ಈ ಯಶಸ್ಸಿನ ಹಿಂದೆ ಇದ್ದಾರೆ. ಪ್ರಶಸ್ತಿಗಳು ನನ್ನ ಮುಂದಿನ ಜವಾಬ್ದಾರಿ ಹೆಚ್ಚಿಸಿವೆ. ಈ ರಾಷ್ಟ್ರ ಪ್ರಶಸ್ತಿ ನನ್ನ ಮೇಲಿನ ಜವಾಬ್ದಾರಿಯನ್ನು ಬೆಟ್ಟದಷ್ಟು ಹೆಚ್ಚಿಸಿದೆ. 
–ಕಿರಣ್‌ ರಾಜ್‌ ಕೆ. ನಿರ್ದೇಶಕ  
ಮೂರನೇ ಬಾರಿ ಪ್ರಶಸ್ತಿ ಕೋವಿಡ್‌ ಸಮಯದಲ್ಲಿ ಹಲವು ಆರೋಗ್ಯ ಸಮಸ್ಯೆಗಳನ್ನು ನೋಡಿದ್ದೇವೆ. ಕ್ರೀಡೆಯ ಮೂಲಕ ಈ ಸಮಸ್ಯೆಗಳಿಂದ ಹೇಗೆ ಹೊರಬರಬಹುದು ಎನ್ನುವುದನ್ನು ‘ಆಯುಷ್ಮಾನ್’ ಮುಖೇನ ತಿಳಿಸುವ ಪ್ರಯತ್ನ ಮಾಡಿದ್ದೇವೆ. ನಾನು ಪುನೀತ್ ರಾಜಕುಮಾರ್ ಅವರ ಜತೆ ಸಿನಿಮಾ ಮಾಡಬೇಕಿತ್ತು. ಚಿತ್ರ ಇನ್ನೇನು ಘೋಷಣೆ ಮಾಡಬೇಕು ಎನ್ನುವಷ್ಟರಲ್ಲಿ ಅವರು ನಿಧನರಾದರು. ಹೀಗಾಗಿ ನಾನು ಸಿನಿಮಾಗಳಿಂದ ಕೆಲ ತಿಂಗಳ ಕಾಲ ದೂರ ಹೋದೆ. ವಾಪಸ್ಸಾದಾಗ ಮಾಡಿದ ಸಿನಿಮಾ ‘ಆಯುಷ್ಮಾನ್’. ಇದು ನನ್ನ ಮೂರನೇ ರಾಷ್ಟ್ರ ಪ್ರಶಸ್ತಿ ಎನ್ನುವ ಹೆಮ್ಮೆ ಇದೆ. 
- ಜೇಕಬ್ ವರ್ಗೀಸ್ ನಿರ್ದೇಶಕ. 
ಈ ಸುದ್ದಿಯಿಂದ ಆಗಿರುವ ಸಂತೋಷವನ್ನು ಪದಗಳಲ್ಲಿ ಹೇಳಿ ಅದಕ್ಕೆ ನ್ಯಾಯ ಕೊಡಿಸಲು ಸಾಧ್ಯವಿಲ್ಲ. ಇದು ಇಡೀ ಪರಂವಃ ಕುಟುಂಬಕ್ಕೆ ಹೆಮ್ಮೆಯ ಸಮಯ. ಕಿರಣ್‌ರಾಜ್‌ಗೆ ಅಭಿನಂದನೆ ಅವರ ಪರಿಶ್ರಮಕ್ಕೆ ಫಲ ಸಿಕ್ಕಿದೆ. 
–ರಕ್ಷಿತ್‌ ಶೆಟ್ಟಿ ನಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT