ಹುಬ್ಬಳ್ಳಿ: 'ಶ್ರೀ ಪಾಂಡವ ಸಿನಿ ಕಂಬೈನ್ಸ್ ನಿರ್ಮಾಣದ 'ನನ್ ಜೊತೆ ಪೂಜಾಲಕ್ಷ್ಮೀ' ಚಲನಚಿತ್ರ ಫೆ. 25ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ' ಎಂದು ಚಿತ್ರದ ನಾಯಕ ನಟ ಯೇಶು ಹೇಳಿದರು.

'ನೈಜ ಘಟನೆಯ ಆಧಾರಿತ ಕೌಟುಂಬಿಕ ಚಿತ್ರ ಇದಾಗಿದ್ದು, ಮಡಿಕೇರಿ, ತುಮಕೂರು ಸೇರಿದಂತೆ ವಿವಿಧೆಡೆ ಚಿತ್ರೀಕರಣ ಮಾಡಲಾಗಿದೆ. ಹೊಸಬರೇ ಸೇರಿಕೊಂಡು ಮಾಡಿರುವ ಚಿತ್ರದಲ್ಲಿ ಐದು ಹಾಡುಗಳಿದ್ದು, ಮೂರು ಹಾಡುಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಆರಂಭದಲ್ಲಿ 50 ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನವಾಗಲಿದೆ' ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಗ್ಯಾರೇಜ್ ಹುಡುಗನ ಕನಸು ಹೇಗೆ ನನಸಾಗುತ್ತದೆ, ಅವನ ಜೀವನ ಪಯಣ ಹೇಗೆ, ಪ್ರೀತಿ-ಪ್ರೇಮದ ತೊಳಲಾಟದ ಬಗ್ಗೆ ಚಿತ್ರ ಸಂದೇಶ ನೀಡುತ್ತದೆ ಎಂದರು.

ವೆಂಕಟರಮಣಪ್ಪ, ಶಶಿಕುಮಾರ್, ಮಣಿ ಮತ್ತು ವೆಂಕಟೇಶ ಚಿತ್ರದ ನಿರ್ಮಾಪಕರಾಗಿದ್ದು, ಬಿ.ಟಿ.ಎನ್. ರಾಮು ಸಹ ನಿರ್ಮಾಪಕರಾಗಿದ್ದಾರೆ. ಅಜಿತರಾಯ್ ನಿರ್ದೇಶನ, ಪ್ರತೀಕ ಶೆಟ್ಟಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ ನಾಯಕಿಯಾಗಿ ಹುಬ್ಬಳ್ಳಿಯ ಆಹಾರಿಕಾ ನಾಯಕ ನಟಿಸಿದ್ದಾರೆ ಎಂದು ಹೇಳಿದರು.

ನಿರ್ದೇಶಕ ಅಜಿತ್ ರಾಯ್, ಕಾಂತರಾಜ್, ವಿವೇಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.