ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದರೂ ಸಿನಿಮಾ ಮೇಲೆ ಟಾಲಿವುಡ್ ನಟ ಪವನ್ ಕಲ್ಯಾಣ್ ಅವರಿಗೆ ಇರುವ ಕಡುಮೋಹ ಕಿಂಚಿತ್ತೂ ಕಡಿಮೆಯಾಗಿಲ್ಲ. ವೇಣು ಶ್ರೀರಾಮ್ ನಿರ್ದೇಶನದ ‘ವಕೀಲ್ ಸಾಬ್’ ಚಿತ್ರದಲ್ಲಿ ಅವರು ನಟಿಸುತ್ತಿರುವುದೇ ಇದಕ್ಕೆ ನಿದರ್ಶನ. ಇದು ಹಿಂದಿಯ ‘ಪಿಂಕ್’ ಚಿತ್ರದ ತೆಲುಗು ರಿಮೇಕ್.

ಇತ್ತೀಚೆಗೆ ಸ್ಟಾರ್ ನಟ, ನಟಿಯರು ವೆಬ್ ಸರಣಿಗಳ ಮೂಲಕ ಡಿಜಿಟಲ್ ಜಗತ್ತು ಪ್ರವೇಶಿಸಲು ಉತ್ಸುಕರಾಗಿದ್ದಾರೆ. ಈ ಜಗತ್ತಿನತ್ತ ಹೊಸ ಪೀಳಿಗೆಯು ಆಕರ್ಷಿತರಾಗಿರುವುದೇ ಇದಕ್ಕೆ ಕಾರಣ. ಹಾಗಾಗಿ, ಆ ಜಗತ್ತಿನ ಪ್ರೇಕ್ಷಕರನ್ನು ಸೆಳೆಯುವುದು ನಟ, ನಟಿಯರ ಮೂಲ ಉದ್ದೇಶ.

ಲಾಕ್‌ಡೌನ್ ಅವಧಿಯಲ್ಲಿ ಪವನ್ ಕಲ್ಯಾಣ್ ವಿದೇಶಿ ಹಾಗೂ ಭಾರತೀಯ ವೆಬ್ ಸರಣಿಗಳನ್ನು ವೀಕ್ಷಿಸಿದ್ದಾರೆ. ಹಾಗಾಗಿಯೇ, ಅವರು ವೆಬ್ ಸರಣಿಯಲ್ಲಿ ನಟಿಸಲು ಮನಸ್ಸು ಮಾಡಿದ್ದಾರೆ. ಅದಕ್ಕಾಗಿ ಸೂಕ್ತ ಕಥೆಯ ಹುಡುಕಾಟದಲ್ಲಿ ತೊಡಗಿದ್ದಾರೆ. ಶೀಘ್ರವೇ, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ ಎಂಬುದು ಟಾಲಿವುಡ್ ಅಂಗಳದ ಸುದ್ದಿ.

ಪವನ್ ಕಲ್ಯಾಣ್ ಈಗ ಸಿನಿಮಾ ಮತ್ತು ರಾಜಕೀಯದ ಎರಡೂ ದೋಣಿಗಳ ಮೇಲೆ ಪಯಣಿಸುತ್ತಿದ್ದಾರೆ. ರಾಜಕೀಯದಲ್ಲಿ ಯಶಸ್ಸು ಗಳಿಸಲು ಜನಸೇನಾ ಪಕ್ಷವನ್ನೂ ಕಟ್ಟಿದ್ದಾರೆ. ಆದರೆ, ಬೆಳ್ಳಿತೆರೆಯಲ್ಲಿ ಅವರಿಗೆ ಸಿಕ್ಕಿದಷ್ಟು ಸಕ್ಸಸ್ ರಾಜಕೀಯದಲ್ಲಿ ಸಿಕ್ಕಿಲ್ಲ. ಆದರೆ, ರಾಜಕಾರಣದ ಸಖ್ಯ ಕಳೆದುಕೊಳ್ಳಲು ಅವರು ಸಿದ್ಧರಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.