ನಟ ಪ್ರಭುದೇವ ಅವರ ‘ಪೊಯಿಕ್ಕಲ್ ಕುಥಿರೈ’ ಚಿತ್ರದ ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಒಂದು ಕಾಲು ಇಲ್ಲದೇ ಕೃತಕ ಕಾಲು ಜೋಡಿಸಿಕೊಂಡ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪೋಸ್ಟರ್ ಲುಕ್ ನೋಡುವಾಗ ಕಾರ್ಮಿಕನ ರೀತಿ ಶ್ರಮಜೀವಿಯ ರೀತಿ ಭಾಸವಾಗುತ್ತಿದೆ. ಒಂದು ಕೈಯಲ್ಲಿ ಸ್ಪ್ಯಾನರ್, ಮತ್ತೊಂದು ಕೈಯಲ್ಲಿ ಮಗುವನ್ನು ಎತ್ತಿಕೊಂಡಿರುವ ಚಿತ್ರದ ಈ ಪೋಸ್ಟರ್ ಹಲವು ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಸಂತೋಷ್ ಪಿ. ಜಯಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಶೇ 40ರಷ್ಟು ಚಿತ್ರೀಕರಣ ಮುಗಿದಿದೆ. ಈ ವರ್ಷ ಡಿಸೆಂಬರ್ ವೇಳೆಗೆ ಚಿತ್ರದ ಬಿಡುಗಡೆಯ ಗುರಿ ಇಟ್ಟುಕೊಳ್ಳಲಾಗಿದೆ. ವರಲಕ್ಷ್ಮೀ ಶರತ್‌ಕುಮಾರ್ ಮತ್ತು ರೈಸಾ ವಿಲ್ಸನ್ ಅವರು ಈ ಚಿತ್ರದ ನಾಯಕಿಯರು. ಪ್ರಕಾಶ್ ರೈ, ಸಮುದ್ರಖಣಿ ತಾರಾಗಣದಲ್ಲಿದ್ದಾರೆ.

ಇದೇ ವೇಳೆ ಪ್ರಭುದೇವ ಅವರ ಬದುಕಿನ ವಿವಿಧ ಮಜಲುಗಳ ಕುರಿತ ‘ಟೇಕ್ ಇಟ್ ಈಸಿ ಪಾಲಿಸಿ...’ ಆಡಿಯೋ ಬುಕ್ ಕೂಡಾ ಜನಪ್ರಿಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.