‘ವೇದ’ ಚಿತ್ರದಲ್ಲಿನ ನಟನೆಗಾಗಿ ನಟಿ ಗಾನವಿ ಲಕ್ಷ್ಮಣ್ ಅತ್ಯುತ್ತಮ ನಟಿ ಟ್ರೋಫಿ ಮುಡಿಗೇರಿಸಿಕೊಂಡರು. ‘ಜಾನಕಿ’ಯಾಗಿ ಕನ್ನಡ ಪ್ರೇಕ್ಷಕರ ಮನ–ಮನೆಗಳಲ್ಲಿ ಗುರುತಿಸಿಕೊಂಡು ಮನೆ ಮಗಳಾದವರು.

ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟು ಮಿಂಚುತ್ತಿರುವ ನಟಿಯರ ಪೈಕಿ ಗಾನವಿ ಕೂಡ ಒಬ್ಬರು. ಟಿ.ಎನ್.ಸೀತಾರಾಂ ನಿರ್ದೇಶನದ ‘ಮಗಳು ಜಾನಕಿ’ ಧಾರಾವಾಹಿ ಮೂಲಕ ಬಣ್ಣದ ಲೋಕದ ಪಯಣ ಆರಂಭಿಸಿದ ಇವರಿಗೆ ರಂಗಭೂಮಿಯ ನಂಟೂ ಇದೆ. ತಮ್ಮ ವೃತ್ತಿಜೀವನವನ್ನು ವಸತಿಶಾಲೆಯೊಂದರಲ್ಲಿ ನೃತ್ಯ ಶಿಕ್ಷಕಿಯಾಗಿ ಆರಂಭಿಸಿದ ಗಾನವಿ, ನಟ ರಿಷಬ್ ಶೆಟ್ಟಿ ನಟನೆಯ ‘ಹೀರೋ’ ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ಇದು ಅವರ ಸಿನಿಪಯಣಕ್ಕೆ ಬಾಗಿಲಾಯಿತು. ಅವಕಾಶಗಳು ಇಲ್ಲಿಂದ ಹರಿದುಬಂದವು.

ಧಾರಾವಾಹಿಗೆ ಪ್ರವೇಶಿಸಿದಾಗ ಬಣ್ಣದ ಲೋಕಕ್ಕೆ ಹೊಸಬರಾಗಿದ್ದ ಗಾನವಿ, ‘ಹೀರೋ’ ಮೂಲಕ ನಟನೆಯನ್ನು ಮತ್ತಷ್ಟು ಶಾರ್ಪ್ ಮಾಡಿಕೊಂಡರು. ದೊಡ್ಡ ಕಥೆ, ಶಕ್ತಿಯುತವಾದ ಪಾತ್ರವೇ ಬೇಕು ಎನ್ನುವ ತುಡಿತದ ಅವರಿಗೆ ‘ವೇದ’ದ ವೇದಿಕೆ ಒದಗಿಸಿತ್ತು. ನಟ ಶಿವರಾಜ್ಕುಮಾರ್ ಅವರ 125ನೇ ಸಿನಿಮಾ ಎಂಬ ಮೈಲುಗಲ್ಲು. ಅಲ್ಲಿ ‘ಪುಷ್ಪ’ ಎಂಬ ಪಾತ್ರದಲ್ಲಿ ಗಾನವಿ ಮಿಂಚಿದವರು. ಶಿವರಾಜ್ಕುಮಾರ್–ಗಾನವಿ ಜೋಡಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡರು. ಚಂದನವನದಿಂದ ಟಾಲಿವುಡ್ಗೂ ಕಾಲಿಟ್ಟಿದ್ದಾರೆ ಗಾನವಿ. ಅವರ ತೆಲುಗಿನ ಮೊದಲ ಚಿತ್ರ, ಅಜಯ್ ಸಾಮ್ರಾಟ್ ನಿರ್ದೇಶನದ ಜಗಪತಿ ಬಾಬು, ಆಶಿಶ್ ಗಾಂಧಿ ಅವರು ನಟಿಸಿರುವ ‘ರುದ್ರಾಂಗಿ’ ಚಿತ್ರೀಕರಣ ಪೂರ್ಣಗೊಂಡಿದ್ದು, ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ಈ ಪ್ರಶಸ್ತಿಯನ್ನು ತಂದೆ–ತಾಯಿಗೆ ಅರ್ಪಿಸುತ್ತೇನೆ. ‘ಪ್ರಜಾವಾಣಿ’ ಸಿನಿಮಾ ಉತ್ಸವ ಇದು. ನಿರ್ದೇಶಕ ಎ.ಹರ್ಷ ಅವರು ಈ ಅದ್ಭುತ ಪಾತ್ರವನ್ನು ಸೃಷ್ಟಿಸಿದರು. ಗೀತಾ ಶಿವರಾಜ್ಕುಮಾರ್ ಹಾಗೂ ಶಿವರಾಜ್ಕುಮಾರ್ ಅವರಿಗೆ ಧನ್ಯವಾದ.
ಗಾನವಿ ಲಕ್ಷ್ಮಣ್

ಅತ್ಯುತ್ತಮ ನಟಿ: ಗಾನವಿ ಲಕ್ಷ್ಮಣ್ (ಚಿತ್ರ: ವೇದ)

ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದವರು
* ಹಿತಾ ಚಂದ್ರಶೇಖರ್ (ಚಿತ್ರ: ತುರ್ತು ನಿರ್ಗಮನ)
* ಲಕ್ಷ್ಮಿ ಚಂದ್ರಶೇಖರ್ (ಚಿತ್ರ: 9 ಸುಳ್ಳು ಕಥೆಗಳು)
* ಸಿರಿ ರವಿಕುಮಾರ್ (ಚಿತ್ರ: ಸಕುಟುಂಬ ಸಮೇತ)
* ಗಾನವಿ ಲಕ್ಷ್ಮಣ್ (ಚಿತ್ರ: ವೇದ)
* ಅದಿತಿ ಪ್ರಭುದೇವ (ಚಿತ್ರ: Once upon a time in ಜಮಾಲಿಗುಡ್ಡ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.