ಮೂವತ್ತು ವರ್ಷಗಳ ಹಿಂದೆ, 1991ರಲ್ಲಿ , ಡೆಮಿ ಮೂರ್ ಎಂಬ ಸುಂದರಿ ವ್ಯಾನಿಟಿಫೇರ್ ಪತ್ರಿಕೆಯ ಮುಖಪುಟದಲ್ಲಿ ತುಂಬುಗರ್ಭಿಣಿಯಾಗಿ ಕಾಣಿಸಿಕೊಂಡಳು. ಅಲ್ಲಿಂದೀಚೆಗೆ ಪ್ರೆಗ್ನೆನ್ಸಿ ಫೋಟೋಗ್ರಫಿ ಎಂಬ ಹಿತವಾದ ಮರುಳು ಶುರುವಾಯಿತೆಂದೇ ಹೇಳಬೇಕು. ಬಸುರಾಗಿದ್ದನ್ನು ಮುಚ್ಚಿಡಬೇಕು, ಅದನ್ನು ತೋರಿಸುವುದು ಸೌಂದರ್ಯದ ಲಕ್ಷಣವಲ್ಲ ಎಂಬ ಹಳೆಯ ನಂಬಿಕೆಯನ್ನು ತೊಡೆದು ಹಾಕಿ ತಾಯಿಯಾಗುವ ಸಂಭ್ರಮವನ್ನು ಆಚರಿಸುವುದಕ್ಕೆ ನಾಂದಿ ಹಾಡಿದ್ದು ಡೆಮಿ ಮೂರ್.

ಬದುಕಿನ ಪ್ರತಿಯೊಂದು ಸಂತಸದ ಕ್ಷಣಗಳನ್ನು ದಾಖಲುಮಾಡಿ ಇಟ್ಟುಕೊಳ್ಳುವುದು ಮನುಷ್ಯನ ಸ್ವಭಾವ. ಒಂದು ಗಂಡು ಹೆಣ್ಣು ಮದುವೆಯ ಮೂಲಕ ಜೊತೆಯಾಗುವುದು ಅತ್ಯಂತ ಸಂತೋಷದ ಕ್ಷಣವಾಗಿದ್ದರಿಂದ ಮದುವೆಗೂ ಮೊದಲು ಪ್ರಿವೆಡ್ಡಿಂಗ್ ಶೂಟ್ ಎನ್ನುವ ಟ್ರೆಂಡ್ ಇತ್ತೀಚೆಗೆ ಶುರುವಾಗಿತ್ತು. ಈಗ ಮದುವೆಯ ನಂತರ ಹೆಣ್ಣಿನ ಪಾಲಿಗೆ ಸಿಗುವ ಮೊದಲ ದೊಡ್ಡ ಖುಷಿ ಎಂದರೆ ತಾಯ್ತನ. ಅದನ್ನೂ ಭಿನ್ನವಾಗಿ ದಾಖಲು ಮಾಡಿಟ್ಟುಕೊಳ್ಳುವ ಪರಂಪರೆಯೊಂದು ಶುರುವಾಗಿದೆ.

ಈ ಹಿಂದೆ ಈ ರೀತಿ ಪೋಟೊ ಶೂಟ್ ಅನ್ನು ಬಾಲಿವುಡ್ನ ಸಾಕಷ್ಟು ಮಂದಿ ಮಾಡಿಸಿದ್ದಾರೆ. ಶಿಲ್ಪಾ ಶೆಟ್ಟಿ, ಐಶ್ವರ್ಯ ರೈ ಬಚ್ಚನ್, ಲಿಸಾ ಹೆಡನ್, ಕರೀನಾ ಕಪೂರ್ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದೇ ರೀತಿ ಕನ್ನಡ ನಟಿಯರು ನಾವ್ಯಾರಿಗೆ ಏನ್ ಕಮ್ಮಿ ಎಂದು ಪ್ರೆಗ್ನೆನ್ಸಿ ಪೋಟೋ ಶೂಟ್ಗೆ ಮುಂದಾಗಿದ್ದೂ ಇದೆ. ಈ ಸಾಲಿನಲ್ಲಿ ಶ್ವೇತಾ ಶ್ರೀವಾತ್ಸವ್, ರಾಧಿಕಾ ಪಂಡಿತ್ ಮೊದಲಾದವರು ಇದ್ದರು. ಈಗ ಈ ಸಾಲಿಗೆ ಸೇರಿದ್ದಾರೆ ಕಿರುತರೆ ನಟಿ ದಿಶಾ ಮದನ್, ಬಹುಭಾಷಾ ನಟಿಯರಾದ ಆಮಿ ಜಾಕ್ಸನ್ ಮತ್ತು ಸಮೀರಾ ರೆಡ್ಡಿ.

ದಿಶಾ ಮದನ್

ಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿಕೊಂಡು, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು, ಕಿರುತರೆ ನಟಿಯಾಗಿ ಕಡೆಗೆ ಶಿವರಾಜ್ ಕುಮಾರ್ ನಿರ್ಮಾಣದ ವೆಬ್ ಸೀರಿಸ್ನಲ್ಲಿ ಪಾತ್ರಮಾಡಿ ಫೇಮಸ್ ಆಗಿದ್ದವರು ದಿಶಾ ಮದನ್. ಮೊದಲು ‘ವಿ ಆರ್ ಪ್ರೆಗ್ನೆಂಟ್’ ಎಂದು ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದ್ದರು. ಅದಾದ ಮೇಲೆ ಶುರುವಾಗಿದ್ದು ಅವರ ಭಿನ್ನ ಭಿನ್ನ ಪ್ರೆಗ್ನೆನ್ಸಿ ಪೋಟೊ ಶೂಟ್ಗಳ ಹರಿವು. ತಮ್ಮ ಇನ್ಸ್ಟಾಗ್ರಾಂ ಖಾತೆಯ ಮೂಲಕ ಹೊಸ ಹೊಸ ಪೋಟೊಗಳನ್ನು ಅಪ್ಲೋಡ್ ಮಾಡುವುದರ ಜೊತೆಗೆ ಗರ್ಭಿಣಿ ಮಹಿಳೆಯರಿಗೆ ಧೈರ್ಯ ತುಂಬುವ ಕಾರ್ಯವನ್ನೂ ಮಾಡಿದ್ದರು, ತಮ್ಮ ಮನದಾಳವನ್ನು ತೆರೆದಿಟ್ಟಿದ್ದರು. ‘ಹೆಣ್ಣು ಗರ್ಭಿಣಿಯಾದ ವೇಳೆಯಲ್ಲಿ ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ತುಂಬಾ ಬದಲಾಗುತ್ತಾಳೆ. ಅವಳ ಪಾಲಿಗೆ ಇದು ಮ್ಯಾಜಿಕಲ್ ಜರ್ನಿ. ಎಲ್ಲವನ್ನೂ ಪಾಸಿಟಿವ್ ಆಗಿ ಕಂಡು, ಸಂತೋಷದಿಂದ ಇರುವುದು, ಕಾಲ ಕಾಲಕ್ಕೆ ವೈದ್ಯರ ಸಲಹೆ ಪಡೆದು ಮುಂದುವರೆದು ತಾಯ್ತನವನ್ನು ಅನುಭವಿಸಬೇಕು’ ಎಂದು ಬರೆದುಕೊಂಡಿದ್ದರು. ಜೊತೆಗೆ ಭಿನ್ನವಾದ ಮತ್ತು ಸಾಂಪ್ರದಾಯಿಕವಾದ ಫೋಟೊ ಶೂಟ್ಗಳನ್ನು ಮಾಡಿಸಿದರೂ.

ಆಮಿ ಜಾಕ್ಸನ್

ಬ್ರಿಟಿಷ್ ನಟಿ ಆಮಿ ಜಾಕ್ಸನ್ ಹಿಂದಿ, ತಮಿಳು, ತೆಲಗು, ಕನ್ನಡ ಚಿತ್ರರಂಗಕ್ಕೆಲ್ಲಾ ಪರಿಚಿತರು. ಇತ್ತೀಚೆಗೆ ತೆರೆಗೆ ಬಂದಿದ್ದ ಶಿವರಾಜ್ ಕುಮಾರ್, ಸುದೀಪ್ ನಟನೆಯ ‘ದಿ ವಿಲನ್’ ಚಿತ್ರದಲ್ಲಿ ನಾಯಕಿಯಾಗುವುದರ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದ ಆಮಿ ತಾವು ಗರ್ಭಿಣಿಯಾದ ಮೊದಲ ದಿನದಿಂದಲೂ ಬಗೆ ಬಗೆಯ ಪೋಟೋಗಳನ್ನು ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಬಂದಿದ್ದಾರೆ. ಗರ್ಭಿಣಿಯಾದ ಮೇಲೂ ದೇಶ ವಿದೇಶಗಳ ಪರ್ಯಟನೆ ಮುಂದುವರೆಸುತ್ತಾ ತಾನಿದ್ದ ಕಡೆಯಲ್ಲೇ ಸುಂದರವಾದ ಹಿನ್ನೆಲೆ ಸೃಷ್ಟಿಸಿ ಚೆಂದದ ಮತ್ತು ಭಿನ್ನ ಭಿನ್ನವಾದ ಫೋಟೊಗಳನ್ನು ಅಪ್ಲೋಡ್ ಮಾಡಿಕೊಂಡೇ ಬಂದಿದ್ದಾರೆ ಆಮಿ. ಗರ್ಭಿಣಿಯಾಗಿ ಆರೂವರೆ ತಿಂಗಳು ತುಂಬಿದ್ದ ವೇಳೆಯಲ್ಲಿ ಜಿಮ್ ಮುಗಿಸಿಕೊಂಡು ಕೂತಿದ್ದ ಫೋಟೋವನ್ನು ಹಾಕಿ ‘ನಾನು ಈಗಲೂ ಜಿಮ್ಗೆ ಹೋಗಬೇಕೆ? ಅಥವಾ ಒಂದು ಬಾಟಲ್ ಹನಿ ತಿನ್ನಬೇಕೆ? ಎಂದು ಪ್ರತಿ ಬೆಳಗಿನ ಜಾವ ನನ್ನೊಳಗೇ ಯುದ್ಧ ಶುರುವಾಗುತ್ತದೆ’ ಅನ್ನುವ ಪೋಸ್ಟ್ ಹಾಕಿಕೊಂಡಿದ್ದರೂ ಕೂಡ.

ಸಮೀರಾ ರೆಡ್ಡಿ

ಕಿಚ್ಚ ಸುದೀಪ್ ಮತ್ತು ಚಿರಂಜೀವಿ ಸರ್ಜಾ ಜೊತೆಗೆ ‘ವರದ ನಾಯಕ’ ಚಿತ್ರದಲ್ಲಿ ಹಾಗೂ ಹಿಂದಿ, ತಮಿಳು, ತೆಲುಗು, ಬೆಂಗಾಳಿ ಭಾಷೆಯಲ್ಲೂ ನಟಿಸಿ ಬಂದಿದ್ದಾರೆ. ಈಗ ಮೊನ್ನೆ ಮೊನ್ನೆಯಷ್ಟೇ ನೀರಿನ ಆಳದಲ್ಲಿ ಇಳಿದು ಫೋಟೋಶೂಟ್ ಮಾಡಿಸಿದ್ದು ಎಲ್ಲರ ಪಾಲಿಗೂ ಅಚ್ಚರಿ ಮತ್ತು ತೀರಾ ಹೊಸದು. ಗರ್ಭಿಣಿಯಾಗಿ ಒಂಬತ್ತನೆಯ ತಿಂಗಳಿನ ಆರಂಭದಲ್ಲಿರುವ ಸಮೀರಾ ರೆಡ್ಡಿ ಈಗಾಗಲೇ ಒಂದು ಮಗುವಿನ ತಾಯಿ. ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಅವರು ಪ್ರೆಗ್ನೆನ್ಸಿಯ ಪ್ರಾರಂಭವಾದ ದಿನಗಳಿಂದಲೂ ಫೋಟೊ ಶೂಟ್ ಮಾಡಿಸಿದ್ದಾರೆ.

ಆದರೆ, ಕಡೆಯದಾಗಿ ನೀರಿನ ಆಳದಲ್ಲಿ ಮಾಡಿಸಿದ ಪೋಟೊ ಶೂಟ್ ವೈರಲ್ ಆಗಿತ್ತು. ಇದಾಗುತ್ತಿದ್ದಂತೆಯೇ ಆರೋಗ್ಯ ಸಂಬಂಧಿ ಪುರವಣಿಗಳು ಸಮೀರಾ ಫೋಟೊಶೂಟ್, ಅದರ ಸಾಧಕ-ಬಾಧಕಗಳನ್ನು ಚರ್ಚಿಸಿವೆ. ಜೊತೆಗೆ ಸಮೀರಾ ಕೂಡ ತುಂಬಾ ಎಚ್ಚರಿಕೆಯಿಂದ ಈ ರೀತಿಯ ಫೋಟೊಶೂಟ್ ಮಾಡಿಸಬೇಕು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.