‘ಬಾಹುಬಲಿ’ ಸಿನಿಮಾದ ನಂತರ ಎಸ್.ಎಸ್. ರಾಜಮೌಳಿ ತಮ್ಮ ಮುಂದಿನ ಚಿತ್ರ ‘ಆರ್ಆರ್ಆರ್’ನಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ. ಈ ಐತಿಹಾಸಿಕ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಖ್ಯಾತ ತೆಲುಗು ನಟರಾದ ಜ್ಯೂನಿಯರ್ ಎನ್ಟಿಆರ್ ಹಾಗೂ ರಾಮ್ ಚರಣ್ ತೇಜಾ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ದೊಡ್ಡ ಬಜೆಟ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿ ಆಲಿಯಾ ಭಟ್ ಹಾಗೂ ಅಜಯ್ ದೇವಗನ್ ನಟಿಸುತ್ತಿರುವುದು ವಿಶೇಷ.

ಈ ಹಿಂದೆ ರಾಜಮೌಳಿ ಹಾಗೂ ಅವರ ತಂಡವು ಈ ಬಹುನಿರೀಕ್ಷಿತ ಚಿತ್ರ 2020ರ ಜುಲೈ 30ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಿತ್ತು. ಈಗ ಮೂಲವೊಂದರ ಪ್ರಕಾರ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದ್ದು, 2021ರ ಸಂಕ್ರಾಂತಿಗೆ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.

ಲಂಡನ್ನಲ್ಲಿ ‘ಬಾಹುಬಲಿ’ ಸಿನಿಮಾದ ಪ್ರದರ್ಶನಕ್ಕೋಸ್ಕರ ರಾಜಮೌಳಿ ಅಲ್ಲಿಗೆ ತೆರಳಿದ್ದರಿಂದ ‘ಆರ್ಆರ್ಆರ್’ ಸಿನಿಮಾದ ಚಿತ್ರೀಕರಣವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆಯಂತೆ.

ಈ ಚಿತ್ರದಲ್ಲಿ ತುಂಬ ಬ್ಯುಸಿ ಇರುವ ಇಬ್ಬರು ತೆಲುಗು ಸೂಪರ್ಸ್ಟಾರ್ಗಳು ನಟಿಸುತ್ತಿದ್ದಾರೆ. ಅವರಿಬ್ಬರ ಡೇಟ್ಗಳು ಪರಸ್ಪರ ನಿಗದಿಯಾಗಬೇಕು. ಹಾಗೇ ಬಾಲಿವುಡ್ನ ಸ್ಟಾರ್ಗಳಾದ ಆಲಿಯಾ ಹಾಗೂ ಅಜಯ್ ದೇವಗನ್ ಅವರ ಡೇಟ್ಗಳು ಹೊಂದಿಕೆಯಾಗಬೇಕು. ಈ ಎಲ್ಲಾ ಕಾರಣಗಳಿಂದ ಸಿನಿಮಾ ಚಿತ್ರೀಕರಣ ಕೊಂಚ ತಡವಾಗಬಹುದು ಎಂಬ ಆಲೋಚನೆ ಚಿತ್ರತಂಡದ್ದು.

ಈ ಚಿತ್ರದಲ್ಲಿ ಹೆಚ್ಚು ಆ್ಯಕ್ಷನ್ ದೃಶ್ಯಗಳನ್ನು ಸೇರಿಸಲು ರಾಜಮೌಳಿ ನಿರ್ಧರಿಸಿರುವುದೂ ಚಿತ್ರ ತಡವಾಗಲು ಮತ್ತೊಂದು ಕಾರಣ ಎನ್ನಲಾಗಿದೆ. ‘ಬಾಹುಬಲಿ’ಚಿತ್ರದಲ್ಲಿ ಇರುವ ಸ್ಟಂಟ್ಗಳಿಗಿಂತಲೂ ಹೆಚ್ಚು ಸ್ಟಂಟ್ಗಳು ರಾಜಮೌಳಿ ಈ ಸಿನಿಮಾದಲ್ಲಿ ತೋರಿಸಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.