ಬೆಂಗಳೂರು: ಒಂದು ಮುತ್ತಿನ ಕಥೆ ಹೇಳಿ ಮೂವತ್ತೈದು ಮುತ್ತುಗಳ ಚಿತ್ರೀಕರಣ ನಡೆಸಿದರು, ಒತ್ತಾಯದಿಂದ ಕೆಟ್ಟ ಅಶ್ಲೀಲ ದೃಶ್ಯಗಳಲ್ಲಿ ನಟಿಸುವಂತೆ ಮಾಡಿದರೆಂದು ನಟಿ ಸಂಜನಾ, ನಿರ್ದೇಶಕ ರವಿಶ್ರೀವತ್ಸ ಅವರ ಮೇಲೆ ಮೀಟೂ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ರವಿಶ್ರೀವತ್ಸ 'ಮಿಸ್ಟರ್ ಕ್ಲೀನ್, ಮಿಸ್ಟರ್ ಪರ್ಫೆಕ್ಟ್’ ಅಂತ ಪ್ರೂವ್ ಮಾಡಿ ತೋರಿಸುತ್ತೇನೆಂದು ಸವಾಲ್ ಒಡ್ಡಿದ್ದಾರೆ.

ಹನ್ನೆರಡು ವರ್ಷಗಳ ಹಿಂದೆ ಗಂಡ–ಹೆಂಡತಿ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ಸಂಜನಾ, ತನ್ನ ಮೊದಲ ಸಿನಿಮಾದಲ್ಲಿಯೇ ಅನುಭವಿಸಿದ ಕಷ್ಟಕೋಟಲೆ, ಒತ್ತಡ–ಒತ್ತಾಯಗಳ ಬಗ್ಗೆ ಇತ್ತೀಚಿಗೆ ಬಹಿರಂಗ ಪಡಿಸಿದ್ದರು. ಸಿನಿಮಾಗೆ ಸಹಿ ಮಾಡುವಾಗ ಹೇಳಿದ್ದ ಮಾತು, ಚಿತ್ರೀಕರಣದಲ್ಲಿ ನಿರ್ದೇಶಕರು ಮೀರಿದ್ದನ್ನು ಪ್ರಸ್ತಾಪಿಸಿದ್ದರು. ಒತ್ತಡ ಹೇರಿ ಎರಡು ಸಿನಿಮಾಗಳಿಗೆ ಆಗುವಷ್ಟು ಪ್ರಣಯ ದೃಶ್ಯಗಳಲ್ಲಿ ನಟಿಸುವಂತೆ ಮಾಡಿದರೆಂದು ರವಿಶ್ರೀವತ್ಸ ಮೇಲೆ ನೇರ ಆರೋಪ ಮಾಡಿದ್ದರು. ಈ ಆರೋಪಗಳ ಬಗ್ಗೆ ನಿರ್ದೇಶಕ ರವಿಶ್ರೀವತ್ಸ ಫೇಸ್ಬುಕ್ ಖಾತೆಯಲ್ಲಿ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಪಾರ್ಟ್ 2 ಆಗುವಷ್ಟು ಶೂಟಿಂಗ್; ಕಿಸ್ಸಿಂಗ್ ಸೀನ್ಗಳೇ 35ಕ್ಕೂ ಹೆಚ್ಚು– ಸಂಜನಾ

ಅನ್ನ ಕೊಟ್ಟ ಚಿತ್ರ ಗಂಡ ಹೆಂಡತಿ, ಕನ್ನಡಿಗರು ’ಮೊದಲು ಬಿಟ್ಟು ಆಮೇಲೆ ಹೊಡಿತೀವಿ’, 24 ವರ್ಷಗಳ ವೃತ್ತಿ ಜೀವನ, ಡೆಡ್ಲಿ, ಮಿಸ್ಟರ್ ಪರ್ಫೆಕ್ಟ್, ಮಿಸ್ಟರ್ ಕ್ಲೀನ್, ಬೊಂಬೆ ಆಡ್ಸೋನು...ಮೊದಲ ಷೋ ಶುರು ಮಾಡ್ತಿದ್ದೇನೆ,..ಹೀಗೆ ಡೈಲಾಗ್ ರೂಪದಲ್ಲಿ ಮಾತಿನ ಸಾಲುಗಳನ್ನುಪ್ರಕಟಿಸಿದ್ದಾರೆ.

'... ಕರೆ ಮಾಡಿದ ಪ್ರತಿಯೊಬ್ಬ ಮಿತ್ರರೂ, "ನೀವು ಯಾಕೆ ಮಾತಾಡ್ತಿಲ್ಲಾ? ಯಾಕೆ ಸುಮ್ಮನೆ ಆರೋಪ ಹೊತ್ತು ಕೂರ್ತಾಇದ್ದೀರೀ?? ಸತ್ಯಾ ಅಸತ್ಯತೆಗಳೇನು" ಅಂತ ಕೇಳಲಿಕ್ಕೆ ಶುರುಮಾಡಿದರು. ಮೌನವಾಗೇ ಇದ್ದೇ ಆದರೇ,ನನ್ನ ಮೌನಕ್ಕೆ ತಪ್ಪಾದ ಅರ್ಥ ಹೊರಹೊಮ್ಮಲಿಕ್ಕೆ ಶುರುವಾಗಿತ್ತು. "ಹೆಣ್ಣು ಮಗಳು" ಮಾತಿಗೆ ಮಾತು ಬೇಡಾ, ಅದೂ ನನ್ನ ಸಿನಿಮಾ ಕುಟುಂಬದ ಸಂಬಂಧಗಳನ್ನ ಹಾಳುಮಾಡುತ್ತೆ ಅಂತ ಸುಮ್ಮನಾಗಿದ್ದೆ.

But it was an issue of my Credentials! Life!! Career!!! Above all the Film n Other Films which has given Name Fame Bread n Butter everything to me!!!!

ಮೌನವನ್ನ ಮುರಿಯದಿದ್ದಲ್ಲಿ ಸುಳ್ಳಿನ ಆರೋಪಗಳಿಗೆ ನಾನೇ ನೀರೆರೆದು ಆಕೆಯನ್ನ ಮತ್ತಷ್ಟು ಬೆಳೆಸಿದಂತಾಗುತ್ತದೆಂದೂ ಭಾವಿಸಿದೆ.

Well, ನನಗೆ ಜನುಮ ಕೊಟ್ಟವರು ಹೆಣ್ಣು! ತಾಯಿ!! ನಾನು ಪ್ರತಿಯೊಬ್ಬ ಹೆಣ್ಣುಮಗಳನ್ನು ಗೌರವಿಸುತ್ತೇನೆ. ಅದು ಎಷ್ಟರಮಟ್ಟಿಗೆ ಸರೀ ಎಂಬುದೂ ನನ್ನೊಟ್ಟಿಗೆ ಇರುವವರಿಗೆ ಗೊತ್ತು, ಬಲ್ಲವರಿಗೆ ಗೊತ್ತು, ಇಲ್ಲಿರುವ ನನ್ನ ಅಕ್ಕ ತಂಗಿಯರಿಗೂ ಗೊತ್ತು.

ನಟಿಯೆಂದು ಕರೆಸಿಕೊಳ್ಳುವ ಆ ಹೆಣ್ಣು ಮಗಳ ಮಾತಿನ ಹಿಂದಿರುವ ಉದ್ದೇಶಗಳೇನೂ ನನಗೆ ಗೊತ್ತಿಲ್ಲ.

ಸಾಕ್ಷಿ ಪುರಾವೆಗಳಿಲ್ಲದೇ ಏಕಾಏಕಿ ಮಾಧ್ಯಮದ ಮುಂದೇ ಅವರಿವರಲ್ಲಿ, ಈ ಫೇಸ್ ಬುಕ್, ಟ್ವಿಟರ್, ಇನ್ಸ್ಟಾಗ್ರಾಂನಲ್ಲಿ ಮಾತಾಡುವುದು, ಪ್ರಚಾರಕ್ಜೆ ಸುಖಾಸುಮ್ಮನೆ ಕೂರುವುದು ಸರಿ ಅಲ್ಲಾ. ಕಾರಣ,ನಾನು ನಿರ್ದೇಶಕ ರವಿ ಶ್ರೀವತ್ಸ!! ಎಲ್ಲವನ್ನ ಇಟ್ಕೊಂಡೂ ಬೊಂಬೆ ಆಡ್ಸೋನು.

24 ವರುಷಗಳ ನನ್ನ ವೃತ್ತಿ ಜೀವನಕ್ಕೆ ಈಗ ಮತ್ತೊಂದು ತಿರುವು. ಸ್ನೇಹಿತರೇ, ಇಲ್ಲಿಯವರೆಗೆ ನನ್ನ ಜೊತೆಯಾಗಿದ್ದೀರಿ, ನಡೆಸ್ಕೊಂಡು ಕರ್ಕೊಂಡು ಬಂದ್ರೀ, ನನ್ನ ಹೆಸರಿಗೆ ಒಂದು ಸ್ಥಾನ ಮಾನ ಗೌರವ ಸಿಗುವ ಹಾಗೆ ಮಾಡಿದ್ರಿ.ಇದೆಲ್ಲ ನನ್ನ ತಂದೆ, ತಾಯಿ, ನನ್ನ ಯಜಮಾನ, ನನ್ನ ಗುರು ಹಿರಿಯರು, ಸ್ನೇಹಿತರು ಮತ್ತು ನೀವೆರಲ್ಲರು ಒಟ್ಟಾಗಿ ಒಂದುಗೂಡಿ ಕೊಟ್ಟಿರುವ ಭಿಕ್ಷೆ!!!

ಸತ್ಯದ ಗೆಲುವಿಗಾಗೀ ಅಸತ್ಯಾನ ಬೆತ್ತಲೆ ಮಾಡಿ ನಿಲ್ಲಸಲೇಬೇಕು ಇದು ಜಗದ ನಿಯಮ! ಹಾಲುಣಿಸಿದ ತಾಯಿಯನ್ನು ಸಮಾಜದ ನಡು ಬೀದಿಯಲ್ಲಿ ಬೆತ್ತಲೆ ಮಾಡಿ ನಿಲ್ಲಸುವ ಮಗ ನಾನಲ್ಲ!! ಇವತ್ತಿಗೂ, ಸಾಯುವ ಕೊನೆ ಘಳಿಗೆಯಲ್ಲಿ ಕೂಡ ನಾನು ಹೆಮ್ಮೆಯಿಂದ ಹೇಳುತ್ತೇನೆ "ಗಂಡ ಹೆಂಡತಿ" ಚಿತ್ರ ಅದು ನನಗೆ ಅನ್ನಕೊಟ್ಟ ತಾಯಿ!!!

ನಿಮ್ಮೆಲ್ಲರ ಆಶೀರ್ವಾದ ಬೆಂಬಲಾನ ನಂಬಿ, ಬೊಂಬೆಯಾಟದ ಮೊದಲನೇ ಷೋ ಈಗ ಶುರು ಮಾಡ್ತಾ ಇದ್ದೇನೆ. ಕೆಳಗೆ ಇರುವ ವೀಡಿಯೋ ಲಿಂಕ್ನ ಒಮ್ಮೆ ಸಂಪೂರ್ಣವಾಗಿ ನೋಡಿ ಪ್ಲೀಸ್.

Deadly is Mr. Clean and Mr. Perfect ಅಂತ ಮತ್ತೆ ಪ್ರೂವ್ ಮಾಡಿ ತೋರುಸ್ತೀನಿ.
ನೆನಪಿರಲೀ....
ನಾವು "ಕನ್ನಡಿಗರು" ಮೊದಲು ಬಿಟ್ಟು ಆಮೇಲೆ ಹೊಡಿತೀವಿ!!!

ಇನ್ನಷ್ಟು:#MeToo: ಶ್ರುತಿ ಬಿಡಿಸಿಟ್ಟ ಅರ್ಜುನ್ ಸರ್ಜಾ ರೂಪ!

ರವಿಶ್ರೀವತ್ಸ ಅವರ ಮಾತುಗಳಿಗೆ ಫೇಸ್ಬುಕ್ನಲ್ಲಿ ಅನೇಕರು ಬೆಂಬಲ ವ್ಯಕ್ತಪಡಿಸುವುದರೊಂದಿಗೆ ಸಂಜನಾ ವಿರುದ್ಧ ತೀಕ್ಷಣವಾಗಿ ಪ್ರತಿಕ್ರಿಯಿಸಿದ್ದಾರೆ. ಆ ಪೋಸ್ಟ್ಗಳನ್ನೂ ರವಿಶ್ರೀವತ್ಸ ಹಂಚಿಕೊಂಡು ಬೆಂಬಲ ಸೂಚಿಸಿದ್ದಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ಇವನ್ನೂಓದಿ

ಸ್ಯಾಂಡಲ್ವುಡ್ನಲ್ಲಿ ಮಿಟೂ: ಚಿತ್ರರಂಗಕ್ಕೆ ಸಂಗೀತಾ ಭಟ್ ವಿದಾಯ!

‘ಪಾತ್ರಕ್ಕಾಗಿ ಪಲ್ಲಂಗ’ವೆಂಬ ಉರಿಯ ನಾಲಿಗೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.