ನವದೆಹಲಿ: ದೇಶ ವಿದೇಶಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿಯೂ ಒಂದು ಕಾಲದಲ್ಲಿ ವಿಪರೀತ ಸಿಗರೇಟ್ ಸೇದುತ್ತಿದ್ದ ಬಾಲಿವುಡ್ ನಟ ಶಾರುಕ್ ಖಾನ್ ಅವರು ಈಗ ಸಿಗರೇಟ್ ಚಟದಿಂದ ಸಂಪೂರ್ಣ ವಿಮುಖರಾಗಿದ್ದಾರೆ.

ಹೌದು, ಈ ವಿಷಯವನ್ನು ಸ್ವತಃ ಶಾರುಕ್ ಖಾನ್ ಅವರೇ ಸ್ಪಷ್ಟಪಡಿಸಿದ್ದಾರೆ. ನವೆಂಬರ್ 2 ರಂದು ತಮ್ಮ 59 ನೇ ಜನ್ಮದಿನ ಆಚರಿಸಿಕೊಂಡ ಅವರು ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನೆರೆದಿದ್ದ ಅಪಾರ ಅಭಿಮಾನಿಗಳನ್ನು ಉದ್ದೇಶಿಸಿ ಈ ವಿಷಯ ಹೇಳಿದರು.

‘ನಿಮಗೊಂದು ಒಳ್ಳೆಯ ವಿಷಯ ಹೇಳುತ್ತಿದ್ದೇನೆ. ಸಿಗರೇಟ್ನಿಂದ ನಾನು ಸಂಪೂರ್ಣ ದೂರ ಸರಿದಿದ್ದೇನೆ. ನಾನೀಗ ಚೆನ್ನಾಗಿ ಉಸಿರಾಡುತ್ತಿದ್ದೇನೆ‘ ಎಂದು ಪರೋಕ್ಷವಾಗಿಯೂ ತಮ್ಮ ಅಭಿಮಾನಿಗಳಿಗೆ ಸಿಗರೇಟ್ ತ್ಯಜಿಸಿ ಉತ್ತಮ ಆರೋಗ್ಯ ರೂಡಿಸಿಕೊಳ್ಳಿ ಎಂದು ಕರೆ ನೀಡಿದ್ದಾರೆ.

‘ಸಿನಿಮಾಗಳ ಮೂಲಕ ನಾನು ಇನ್ನೂ 10 ವರ್ಷ ನಿಮ್ಮನ್ನು ರಂಜಿಸಲಿದ್ದೇನೆ. ಇನ್ಮುಂದೆ ನಿಮಗೆ ಅಚ್ಚರಿ ಎನಿಸುವ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ‘ ಎಂದು ಹೇಳಿದ್ದಾರೆ.

ಈ ಹಿಂದೆ ಸಿಗರೇಟ್ ಸೇದುವ ಚಟಕ್ಕೆ ಅಂಟಿಕೊಂಡಿದ್ದ ಶಾರುಕ್ ಖಾನ್ ಅವರು ಸಾರ್ವಜನಿಕವಾಗಿಯೂ ಸಿಗರೇಟ್ ಸೇದಿ ಹಲವರ ಕೆಂಗೆಣ್ಣಿಗೆ ಗುರಿಯಾಗಿದ್ದರು.

2012 ರ ಐಪಿಎಲ್ ಪಂದ್ಯವೊಂದರಲ್ಲಿ ವೀಕ್ಷಕರ ಗ್ಯಾಲರಿಯಲ್ಲಿ ಕೂತು ಸಿಗರೇಟ್ ಸೇದಿದ್ದಕ್ಕೆ ಶಾರುಕ್ ಅವರಿಗೆ ಜೈಪುರ ನ್ಯಾಯಾಲಯ ₹1,000 ದಂಡ ವಿಧಿಸಿತ್ತು.

2017ರಲ್ಲಿ ಪತ್ರಿಕಾಗೋಷ್ಠಿಯೊಂದರಲ್ಲಿ ಶಾರುಕ್ ಅವರು ಪತ್ರಕರ್ತರ ನಡುವೆಯೇ ತಮ್ಮ ಮಕ್ಕಳ ಸಮ್ಮುಖದಲ್ಲಿ ಸಿಗರೇಟ್ ಸೇದಿ ಸಾಕಷ್ಟು ಟೀಕೆ ಎದುರಿಸಿದ್ದರು.

60ರ ಗಡಿ ಸಮೀಪದಲ್ಲಿರುವ ಶಾರುಕ್ ಫಿಟ್ನೆಸ್ಗೆ ಹೆಚ್ಚಿನ ಗಮನ ಕೊಡುತ್ತಿದ್ದು ಸಿಗರೇಟ್, ಮದ್ಯಪಾನದಿಂದ ದೂರ ಆಗಿದ್ದಾರೆ. ತಮ್ಮ ದೇಹಕ್ಕೆ ಹೊಂದುವ ಅತ್ಯುತ್ತಮ ಡಯಟ್ ಕಡೆ ಅವರು ಗಮನ ಹರಿಸಿದ್ದಾರೆ.

ಸದ್ಯ ಶಾರುಕ್ ಅವರು ಸುಜಯ್ ಘೋಶ್ ನಿರ್ದೇಶಿಸುತ್ತಿರುವ ‘ಕಿಂಗ್’ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶೇಷ ಎಂದರೆ ಈ ಚಿತ್ರದಲ್ಲಿ ಶಾರುಕ್ ಜೊತೆ ಅವರ ಮಗಳು ಸುಹಾನಾ ಖಾನ್ ಕೂಡ ನಟಿಸುತ್ತಿದ್ದಾರೆ.
.DMKಯನ್ನು ನಾಶ ಮಾಡಲು ಹೊಸ ಪಕ್ಷ ಕಟ್ಟುತ್ತಾರೆ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ .‘ಒಂದು ರಾಷ್ಟ್ರ, ಒಂದು ಚುನಾವಣೆ’ ವಿರುದ್ಧ ನಿರ್ಣಯ ಅಂಗೀಕರಿಸಿದ ವಿಜಯ್ TVK ಪಕ್ಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.