ಗಾನ ಗಾರುಡಿಗ ದಿವಂಗತ ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಗೂ ಪಂಚಭಾಷಾ ತಾರೆ ಲಕ್ಷ್ಮೀ ಅಭಿನಯದ ತೆಲುಗಿನ ಸೂಪರ್ ಹಿಟ್ ಚಿತ್ರ 'ಮಿಥುನಂ'. ಈಗ ಕನ್ನಡದಲ್ಲಿ ಮೂಡಿಬರುತ್ತಿದೆ.8 ವರ್ಷಗಳ ಹಿಂದೆ ತೆಲುಗಿನಲ್ಲಿ ಬಿಡುಗಡೆಯಾದ ಸೂಪರ್ಹಿಟ್ ಚಿತ್ರ ಇದು. ಆ ವೇಳೆಗೆ ನಾಲ್ಕು ರಾಜ್ಯ ಪ್ರಶಸ್ತಿಗಳನ್ನು ಗೆದ್ದಿತ್ತು.ಸದ್ಯ ಕನ್ನಡದ ಡಬ್ಬಿಂಗ್ ಕಾರ್ಯ ನಡೆದಿದೆ. ಸೌಂಡ್ ಆಫ್ ಮ್ಯೂಸಿಕ್ ಗುರುರಾಜ್ ಅವರ ಸ್ಟುಡಿಯೋದಲ್ಲಿ ಡಬ್ಬಿಂಗ್ ಕಾರ್ಯ ನಡೆದಿದೆ.

ತೆಲುಗಿನಲ್ಲಿ ಈ ಚಿತ್ರವನ್ನುಆನಂದ್ ಮುಯಿದ ರಾವ್ನಿರ್ಮಿಸಿದ್ದರು. ಕನ್ನಡದಲ್ಲೂ ಅವರೇ ನಿರ್ಮಿಸುತ್ತಿದ್ದಾರೆ. ಮದುಸೂದನ್ ಹವಾಲ್ದಾರ್ ಅವರ ನೇತೃತ್ವ ಇದೆ. ತನಿಕೆಳ್ಳ ಭರಣಿ ನಿರ್ದೇಶಿಸಿದ್ದರು.ವರದರಾಜು ಚಿಕ್ಕಬಳ್ಳಾಪುರ ಅವರು ಸಾಹಿತ್ಯ ಮತ್ತು ಸಂಭಾಷಣೆ ಬರೆದಿದ್ದಾರೆ. ಚಿತ್ರದಲ್ಲಿರುವ ಐದು ಹಾಡುಗಳ ಪೈಕಿ ಒಂದನ್ನು ಎಸ್ಪಿಬಿ ಅವರೇ ಹಾಡಿದ್ದಾರೆ. ಸ್ವರ ವೀಣಾಪತಿ ಅವರ ಸಂಗೀತವಿದೆ. ಡಿಸೆಂಬರ್ ನಲ್ಲಿ 'ಮಿಥುನ' ಕರ್ನಾಟಕದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಬಾಲಸುಬ್ರಹ್ಮಣ್ಯಂ ಅವರು ಕೇವಲ ಗಾಯಕರಾಗಿ ಮಾತ್ರ ಅಲ್ಲ. 1966ರಲ್ಲಿ ಚಿತ್ರಗಳಿಗೆ ಹಾಡಲಾರಂಭಿಸಿದ ಎಸ್ಪಿಬಿ ಅವರು 1969ರಿಂದ ನಟನೆಗೂ ಪ್ರವೇಶ ಮಾಡಿದ್ದರು.ಅವರು ಕನ್ನಡ, ತಮಿಳು ಹಾಗೂ ತೆಲುಗಿನಸುಮಾರು 70ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅವರು ಪ್ರಧಾನ ಭೂಮಿಕೆಯಲ್ಲಿದ್ದಾರೆ. ತೆಲುಗಿನ ‘ಮಿಥುನಂ’ ಕನ್ನಡದಲ್ಲಿ ‘ಮಿಥುನ’ ಹೆಸರಿನಲ್ಲಿ ತೆರೆ ಕಾಣುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.