ಸದ್ಯ ಸ್ಯಾಂಡಲ್ವುಡ್ನಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ‘ಕಬ್ಜ’ ಸಿನಿಮಾದ್ದೇ ಚರ್ಚೆ. ಉಪೇಂದ್ರ ಅವರ ಜನ್ಮದಿನದ(ಸೆ.18) ಪ್ರಯುಕ್ತ ಆರ್.ಚಂದ್ರು ಆ್ಯಕ್ಷನ್ ಕಟ್ ಹೇಳಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ದ ಟೀಸರ್ ಬಿಡುಗಡೆಯಾಗಿದ್ದು, ಈಗಾಗಲೇ ಯುಟ್ಯೂಬ್ನಲ್ಲಿ 92 ಲಕ್ಷ ಜನರು ಇದನ್ನು ವೀಕ್ಷಿಸಿದ್ದಾರೆ. ಟ್ವಿಟರ್ನಲ್ಲೂ ‘ಕಬ್ಜ’ ಟ್ರೆಂಡಿಂಗ್ನಲ್ಲಿದೆ.

ಟೀಸರ್ ಬಿಡುಗಡೆಯಾದ ಕೂಡಲೇ ಇದನ್ನು ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆ.ಜಿ.ಎಫ್ ಸಿನಿಮಾ ಹಾಗೂ ತೆಲುಗಿನ ಖ್ಯಾತ ನಿರ್ದೇಶಕ ರಾಜಮೌಳಿ ಅವರು ಆ್ಯಕ್ಷನ್ ಕಟ್ ಹೇಳಿದ್ದ ಆರ್.ಆರ್.ಆರ್ಗೆ ಹೋಲಿಕೆ ಮಾಡಿ ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದರು.

ಯುಟ್ಯೂಬ್ನಲ್ಲಿ ಟೀಸರ್ ಲಕ್ಷಾಂತರ ವೀಕ್ಷಣೆ ಕಂಡಿರುವ ಬಗ್ಗೆ ಹಾಗೂ ಹೋಲಿಕೆ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುತ್ತಾ ಪ್ರತಿಕ್ರಿಯೆ ನೀಡಿರುವ ಉಪೇಂದ್ರ ಅವರು, ‘ಕಬ್ಜ ಸಿನಿಮಾ ಮಾಡುತ್ತಿರುವಾಗಲೇ ನಾನು ನಿರ್ದೇಶಕರಲ್ಲಿ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಷ್ಟೇ ಟೀಸರ್ ಬಿಡುಗಡೆ ಮಾಡಿ ಎಂದಿದ್ದೆ. ಸಿನಿಮಾದಲ್ಲಿ ಎಷ್ಟು ಶಕ್ತಿ ಇದೆ ಎಂದು ನಿಮಗೆ ತಿಳಿದಿಲ್ಲ ಎನ್ನುತ್ತಿದ್ದೆ. ಹೀಗಾಗಿ ಟೀಸರ್ ಬಿಡುಗಡೆಗೆ ವಿಳಂಬ ಮಾಡಿದೆವು. ಡಿಸೆಂಬರ್ ವೇಳೆಗೆ ಕಬ್ಜ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ. ಹೀಗಾಗಿ ಸರಿಯಾದ ಸಮಯಕ್ಕೇ ಟೀಸರ್ ಬಿಡುಗಡೆಯಾಗಿದೆ. ಮೇಕಿಂಗ್ ಅದ್ಭುತವಾಗಿ ಮೂಡಿಬಂದಿದೆ. ತುಂಬಾ ಜನರು ಕೆ.ಜಿ.ಎಫ್ ಗೆ ಹೋಲಿಸುತ್ತಿದ್ದಾರೆ. ಇದು ಸಂತೋಷವೇ. ಕೆಜಿಎಫ್ ರೀತಿ ಮತ್ತೊಂದು ಕನ್ನಡ ಸಿನಿಮಾ ಮಾಡುತ್ತಿದ್ದೇವೆ ಎನ್ನುವುದು ಹೆಮ್ಮೆ ಪಡುವ ವಿಚಾರ’

‘ಹೋಲಿಕೆ ಸಹಜ. ಸಿನಿಮಾ ಬಂದ ಮೇಲೆಯೇ ಕೆ.ಜಿ.ಎಫ್ ಕಥೆ, ಸಬ್ಜೆಕ್ಟ್ ಬೇರೆ, ಕಬ್ಜ ಸಬ್ಜೆಕ್ಟ್ ಬೇರೆಯೇ ಎಂದು ಜನರೇ ಅರ್ಥ ಮಾಡಿಕೊಳ್ಳುತ್ತಾರೆ. ಮೇಕಿಂಗ್ ವಿಚಾರದಲ್ಲಿ ಆ ಸೆಟ್ಗಳು, ಅದ್ಧೂರಿತನದಿಂತ ಕೆ.ಜಿ.ಎಫ್ ರೀತಿ ಕಾಣುವುದು ಸಹಜ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.