ಕನ್ನಡ ಮತ್ತು ಕೊಂಕಣಿ ಭಾಷೆಗಳಲ್ಲಿ ಬರುತ್ತಿದೆ ‘ದಿ ವೇಕೆಂಟ್ ಹೌಸ್’. ಜಾನೆಟ್ ನೊರೊನ್ಹ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಜಾನೆಟ್ ನೊರೊನ್ಹ ಅವರೇ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಶ್ರೇಯಸ್ ಚಿಂಗಾ ನಿರ್ದೇಶನದ ಮೊದಲ ಚಿತ್ರ ಇದು. ಎಸ್ಟರ್ ನೊರೊನ್ಹ ಅವರೇ ಈ ಚಿತ್ರದ ನಾಯಕಿ, ಸಂಗೀತ ನಿರ್ದೇಶಕಿ ಕೂಡಾ. ಸಾಹಿತ್ಯವನ್ನೂ ಅವರೇ ಬರೆದಿದ್ದಾರೆ. ಶ್ರೇಯಸ್ ನಿರ್ದೇಶನದ ಜತೆಗೆ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ.

ಚಿತ್ರದ ಫಸ್ಟ್‌ಲುಕ್ ಪೋಸ್ಟರ್ ಭಾನುವಾರ ಬಿಡುಗಡೆಯಾಗಿದೆ.

‘ದಿ ವೇಕೆಂಟ್ ಹೌಸ್’ ಜಾನೆಟ್ ನೊರೊನ್ಹ ಪ್ರೊಡಕ್ಷನ್ಸ್‌ನ ಮೂರನೇ ಚಿತ್ರ. ‘ಸೋಫಿಯಾ– ಅ ಡ್ರೀಮ್ ಗರ್ಲ್’ ಚಿತ್ರಕ್ಕೆ 2018ರಲ್ಲಿ ಅತ್ಯುತ್ತಮ ಪ್ರಾದೇಶಿಕ ಚಿತ್ರ ರಾಜ್ಯ ಪ್ರಶಸ್ತಿ ಒಲಿದಿತ್ತು. ಎರಡನೇ ಚಿತ್ರ ಜಾಕಿಶ್ರಾಫ್ ನಟನೆಯ ‘ಕಾಂತಾರ್’ಗೆ ಕೊಂಕಣಿ ಭಾಷಾ ಪ್ರದೇಶವಲ್ಲದೇ ವಿದೇಶದಲ್ಲೂ ಪ್ರೇಕ್ಷಕರ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಹೊಸ ಪ್ರಯತ್ನಕ್ಕೆ ಈ ಚಿತ್ರ ತಂಡ ಮುಂದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.