ಮುಂಬೈ: ಹಿಂದಿ, ಮರಾಠಿ ಭಾಷೆಗಳ ಹಲವಾರು ಚಿತ್ರಗಳು, ಧಾರಾವಾಹಿಗಳು ಮತ್ತು ನಾಟಕಗಳಲ್ಲಿ ಅಭಿನಯಿಸಿದ್ದ ಹಿರಿಯ ನಟ ವಿಕ್ರಮ್ ಗೋಖಲೆ(77) ಅವರು ಶನಿವಾರ ಪುಣೆಯಲ್ಲಿ ನಿಧನರಾದರು.

ಅನಾರೋಗ್ಯಕ್ಕೀಡಾಗಿದ್ದ ಗೋಖಲೆ ಅವರನ್ನು ಪುಣೆಯ ದೀನನಾಥ ಮಂಗೇಶ್ಕರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದರು. ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಅವರು ಅಗಲಿದ್ದಾರೆ

ಗೋಖಲೆ ಕಲಾವಿದರ ಕುಟುಂಬದಿಂದ ಬಂದವರು. ಅವರಮುತ್ತಜ್ಜಿ ದುರ್ಗಾಬಾಯಿ ಕಾಮತ್ ಭಾರತೀಯ ಚಿತ್ರರಂಗದ ಮೊದಲ ನಟಿ, ಅಜ್ಜಿ ಕಮಲಾಬಾಯಿ ಕಾಮತ್ ಮೊದಲ ಬಾಲ ಕಲಾವಿದರು.

ಗೋಖಲೆ ಅವರು ‘ಅಗ್ನಿಪಥ್’, ‘ಹಮ್ ದಿಲ್ ದೆ ಚುಕೆ ಸನಮ್’, ‘ಮಿಷನ್ ಮಂಗಲ್’ ಮುಂತಾದ ಪ್ರಮುಖ ಚಿತ್ರಗಳಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.