ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅನಂತ್‌ ಅಂಬಾನಿ–ರಾಧಿಕಾ ಮರ್ಚಂಟ್ ವಿವಾಹ: ಮುಂಬೈಗೆ ಬಂದ WWE ಸ್ಟಾರ್ ಜಾನ್ ಸೀನಾ

Published 12 ಜುಲೈ 2024, 13:06 IST
Last Updated 12 ಜುಲೈ 2024, 13:06 IST
ಅಕ್ಷರ ಗಾತ್ರ

ಮುಂಬೈ: ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಲುವಾಗಿ ಡಬ್ಲ್ಯೂಡಬ್ಲ್ಯೂಇ(WWE) ಕುಸ್ತಿಪಟು, ಹಾಲಿವುಡ್‌ ನಟ ಜಾನ್ ಸೀನಾ ಮುಂಬೈಗೆ ಬಂದಿದ್ದಾರೆ.

ನೀಲಿ ಕುರ್ತಾ ಹಾಗೂ ಬಿಳಿ ಪ್ಯಾಂಟ್‌ ಧರಿಸಿದ್ದ ಸೀನಾ, ಜಿಯೊ ವರ್ಲ್ಡ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ಫೋಟೊಗೆ ಪೋಸ್‌ ನೀಡಿದರು.

ವಿವಾಹ ಕಾರ್ಯಕ್ರಮಗಳು ಆರಂಭವಾಗುವ ಮುನ್ನ ಅವರಿಗೆ ಸಾಂಪ್ರದಾಯಿಕ ಶೈಲಿಯ 'ಪೇಟ' ತೊಡಿಸಲಾಯಿತು.

16 ಬಾರಿ ವಿಶ್ವ ಚಾಂಪಿಯನ್‌ ಆಗಿರುವ ಸೀನಾ, ಇತ್ತೀಚೆಗಷ್ಟೇ ಡಬ್ಲ್ಯೂಡಬ್ಲ್ಯೂಇಗೆ ವಿದಾಯ ಘೋಷಿಸಿದ್ದಾರೆ. 2025ರಿಂದ ಅವರು ಕುಸ್ತಿ ಅಖಾಡದಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಜಿಯೊ ವರ್ಲ್ಡ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ಇಂದು (ಜುಲೈ 12) ರಾತ್ರಿ 8ಕ್ಕೆ ಅನಂತ್–ರಾಧಿಕಾ ವಿವಾಹ ನಡೆಯಲಿದೆ. ಜುಲೈ 14ರವರೆಗೂ ಸಂಭ್ರಮಾಚರಣೆ ನಡೆಸಲಾಗುತ್ತದೆ. ಜುಲೈ 13ರಂದು 'ಶುಭ ಆಶೀರ್ವಾದ' ಹಾಗೂ ಜುಲೈ 14ರಂದು 'ಮಂಗಳ ಉತ್ಸವ' ನಡೆಯಲಿದೆ.

ಸೀನಾ ಮಾತ್ರವಲ್ಲದೆ ಬಾಕ್ಸರ್‌ ಮೈಕ್‌ ಟೈಸನ್‌, ಹಾಲಿವುಡ್‌ ಹಾಗೂ ಬಾಲಿವುಡ್‌ನ ತಾರೆಯರು, ಜಾಗತಿಕ ರಾಜಕೀಯ ನಾಯಕರು ಮದುವೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT