ಬೆಂಗಳೂರು: ಕೇರಳದ ವಯನಾಡ್ನಲ್ಲಿ ಸಂಭವಿಸಿದ ಭೀಕರ ಭೂಕುಸಿತ ಮತ್ತು ನೆರೆಯಿಂದಾಗಿ ನೂರಾರು ಜನ ಸಂತ್ರಸ್ತರಾಗಿದ್ದಾರೆ. ಇವರಿಗೆ ನೆರವಾಗಲು ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ₹10 ಲಕ್ಷ ನೀಡಿದ್ದಾರೆ.

ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ₹10 ಲಕ್ಷ ನೀಡಿದ್ದಾರೆ ಎಂದು ವರದಿಯಾಗಿದೆ. ರಶ್ಮಿಕಾ ಅವರ ನೆರವಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಶ್ಮಿಕಾ ಮಾತ್ರವಲ್ಲದೆ ನಟ ಸೂರ್ಯ, ಚಿಯಾನ್ ವಿಕ್ರಮ್ ಹಾಗೂ ಮಲಯಾಳಂ ನಟರಾದ ಮೋಹನ್ಲಾಲ್, ಮಮ್ಮುಟ್ಟಿ, ಮಾಳವಿಕಾ ಮೋಹನ್ ಸೇರಿದಂತೆ ಹಲವರು ಸಹಾಯಹಸ್ತ ಚಾಚಿದ್ದಾರೆ.

ವಯನಾಡ್ನಲ್ಲಿ ಮೃತರ ಸಂಖ್ಯೆ 173ಕ್ಕೆ ಏರಿದ್ದು, 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇನ್ನೂ ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆಯಿದ್ದು ಸಾವಿನ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.