ಗುಲಾಮಗಿರಿ ಹಾಗೂ ವೇಶ್ಯಾವಾಟಿಕೆಗೆ ತಳ್ಳುವ ಉದ್ದೇಶದಿಂದ ಮಾರಾಟ ಮಾಡಲಾಗಿದ್ದ ಗುರುದಾಸ್ಪುರದ ಮಹಿಳೆಯೊಬ್ಬರನ್ನು ನಟ ಹಾಗೂ ಸಂಸದ ಸನ್ನಿ ಡಿಯೋಲ್ ರಕ್ಷಿಸಿದ್ದಾರೆ.

ಈ ವಿಷಯ ಟ್ವಿಟರ್ನಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ‘ಅಂತೂ ಸನ್ನಿ ಡಿಯೋಲ್ ಒಳ್ಳೆಯ ಕೆಲಸ ಮಾಡಿದ್ದಾರೆ’, ‘ವಿವಾದಗಳಿಂದ ಹೊರಬಂದ ಡಿಯೋಲ್’ ಎಂದು ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.

ಸಂಸದರಾದ ಬಳಿಕ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ಸನ್ನಿ ಡಿಯೋಲ್ ಮೊದಲ ಬಾರಿಗೆ ಒಳ್ಳೆಯ ಕೆಲಸ ಮಾಡಿ ಸುದ್ದಿಯಾಗಿದ್ದಾರೆ ಎಂದು ಅವರ ಅಭಿಮಾನಿಗಳು ಕಾಲೆಳೆದಿದ್ದಾರೆ. ಬಾಲಿವುಡ್ ನಟ, ನಟಿಯರು ಸನ್ನಿ ಡಿಯೋಲ್ ಕೆಲಸವನ್ನು ಹೊಗಳಿದ್ದಾರೆ.

45 ವರ್ಷದ ವೀಣಾ ಬೇಡಿ ಅವರಿಗೆ ₹30 ಸಾವಿರಕ್ಕೆ ಮನೆಕೆಲಸ ಕೊಡಿಸುವುದಾಗಿ ನಂಬಿಸಿ ಪಾಕಿಸ್ತಾನ ಮೂಲದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಲಾಗಿತ್ತು. ಕರ್ತಾರ್ಪುರಕ್ಕೆ ಸನ್ನಿ ಡಿಯೋಲ್ ಭೇಟಿ ನೀಡಿದ್ದ ಸಂದರ್ಭದಲ್ಲಿ ಆಕೆಯನ್ನು ಹುಡುಕಿಕೊಡುವಂತೆ ಸಂಬಂಧಿಕರು ಮನವಿ ಮಾಡಿದ್ದರು. ಎನ್ಜಿಒ ಹಾಗೂ ಪೊಲೀಸರ ಸಹಾಯ ಪಡೆದುಕೊಂಡು ಆಕೆಯನ್ನು ಹುಡುಕಲಾಗಿದೆ.

ವೀಣಾ ಮನೆಗೆ ತಲುಪಿದ ಬಳಿಕ ಕುಟುಂಬದವರು ಸನ್ನಿ ಡಿಯೋಲ್ಗೆ ಧನ್ಯವಾದ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.