ದೇವರನ್ನು ಅವಹೇಳನ ಮಾಡಿದ ಆರೋಪದಡಿಯಲ್ಲಿ ತೆಲುಗಿನ ಬಿಗ್ ಬಾಸ್ ಸ್ಪರ್ಧಿ ’ಸರಯೂ’. ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಸರಯೂ ಅವರು ಹಿಂದೂ ದೇವರನ್ನು ಅವಹೇಳನ ಮಾಡಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಸರಯೂ ಅವರನ್ನು ಬಂಧಿಸಲಾಗಿದೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

‘ತೆಲುಗು ಬಿಗ್ ಬಾಸ್ 5ರ ಆವೃತ್ತಿಯಲ್ಲಿ ಸರಯೂ ಭಾಗವಹಿಸಿದ್ದರು. ಈ ಬಿಗ್ಬಾಸ್ ಕಾರ್ಯಕ್ರಮವನ್ನು ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ನಡೆಸಿಕೊಟ್ಟಿದ್ದರು. ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ಸರಯೂ ತಮ್ಮ ನೇರ ನಡೆನುಡಿಯಿಂದಸುದ್ದಿಯಾಗಿದ್ದರು. ಸಾಕಷ್ಟು ವಿವಾದಗಳ ಮೂಲಕವು ಅವರು ಸದ್ದು ಮಾಡಿದ್ದರು.

ಇತ್ತೀಚೆಗೆ ಅವರು ರೆಸ್ಟೋರೆಂಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ತಮ್ಮ ಆಪ್ತರ ಜತೆಯಲ್ಲಿ ಭಾಗವಹಿಸಿದ್ದರು. ಇದರಲ್ಲಿ ಅವರುತಲೆಯ ಮೇಲೆ ಗಣಪತಿ ಸೇರಿದಂತೆ ವಿವಿಧ ದೇವತೆಗಳ ಗೊಂಬೆಯನ್ನು ಧರಿಸಿ, ಮದ್ಯಸೇವನೆ ಮಾಡಿದ್ದರು. ಇದರ ವಿಡಿಯೊವನ್ನು ಸರಯೂ ಯುಟ್ಯೂಬ್ನಲ್ಲಿ ಹಂಚಿಕೊಂಡಿದ್ದರು.

ಈ ವಿಡಿಯೊ ಆಧರಿಸಿ ವಿಶ್ವ ಹಿಂದೂ ಪರಿಷತ್ ಹೈದರಾಬಾದ್ ಪೊಲೀಸರಿಗೆ ದೂರು ನೀಡಿತ್ತು. ಸರಯೂ ಅವರನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.