ಬೆಂಗಳೂರು: ಉದಯ ವಾಹಿನಿಯ 27ವರ್ಷಗಳ ಸತತ ಮನರಂಜನೆಯ ಭಿನ್ನ ಪ್ರಯತ್ನಕ್ಕೆ ಹೊಸದೊಂದು ಧಾರಾವಾಹಿ ಸೇರುತ್ತಿದೆ.

ಯಾರಿವಳು, ಸೇವಂತಿ, ಸುಂದರಿ, ನೇತ್ರಾವತಿ, ಗೌರಿಪುರದ ಗಯ್ಯಾಳಿಗಳು, ನಯನತಾರ, ಮನಸಾರೆ, ಕಾವ್ಯಾಂಜಲಿ, ಕಸ್ತೂರಿ ನಿವಾಸದಂತಹ ಹಲವಾರು ವಿಭಿನ್ನ ಕೂತೂಹಲಕಾರಿ ಕಥೆಗಳನ್ನು ನೀಡಿದ ಉದಯ ವಾಹಿನಿಯ ಹೆಗ್ಗಳಿಕೆ ಹೆಚ್ಚಿಸಲು ಒಡಹುಟ್ಟಿದವರ ಕತೆಯನ್ನು ಹೇಳಲು “ಅಣ್ಣ-ತಂಗಿ” ಎಂಬ ಹೆಸರಿನ ಹೊಚ್ಚ ಹೊಸ ಧಾರಾವಾಹಿಯು ವೀಕ್ಷಕರ ಮನೆ ಬಾಗಿಲಿಗೆ ಬರಲಿದೆ.

‘ಅಣ್ಣ-ತಂಗಿʼ ಬೆಳ್ಳಿತೆರೆಯಷ್ಟೇ ಅತ್ಯುತ್ತಮ ಗುಣಮಟ್ಟದ ಕಥೆ, ಚಿತ್ರಕಥೆ, ಮೇಕಿಂಗ್ ಹಾಗೂ ತಾರಾಬಳಗವನ್ನು ಒಳಗೊಂಡಿದೆ.

ಕಥೆಯ ತಿರುಳೇನು?

ತುಳಸಿ ಮತ್ತು ಶಿವರಾಜು ಆದರ್ಶ ಅಣ್ಣ ತಂಗಿ.ಅಪ್ಪ ಅಮ್ಮ ಇಲ್ಲದಿರುವ ಇವರಿಬ್ಬರಿಗೂ ಇವರಿಬ್ಬರೇಆಸರೆ. ತುಳಸಿಗೆ ಹೆತ್ತವರ ಸ್ಥಾನದಲ್ಲಿರುವ ಶಿವಣ್ಣ ಕೂಡು ಕುಟುಂಬದ ಪ್ರೀತಿ ಸಿಗದೆ ಬೆಳೆದ ತಂಗಿಯನ್ನು ಎಲ್ಲ ಬಂಧುಗಳು ತುಂಬಿ ತುಳುಕುತ್ತಿರುವ ಒಂದು ದೊಡ್ಡ ಕುಟುಂಬಕ್ಕೆ ಮದುವೆ ಮಾಡಿಸಲು ಪ್ರಯತ್ನಿಸುತ್ತಾನೆ.

ಆದರೆ, ತಂಗಿಯ ಜಾತಕದ ಪ್ರಕಾರ ಭವಿಷ್ಯದಲ್ಲಿ ಅವಳಿಗೆ ಮದುವೆಯಾದರೆ ತನ್ನ ಊಸಿರಿನಂತಿರುವ ಅಣ್ಣನ ಸಂಬಂಧವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎನ್ನುವ ಸತ್ಯ ಗೊತ್ತಾಗುತ್ತದೆ. ಅಣ್ಣನನ್ನು ಒಂಟಿ ಮಾಡಿ ಬಿಟ್ಟು ಹೋಗಲು ತಂಗಿಗೆ ಮನಸಿಲ್ಲ. ಚಿಕ್ಕ ವಯಸ್ಸಿನಿಂದ ಒಗ್ಗಟ್ಟಿನಿಂದ ಬೆಳೆದು ಬಂದ ಇವರಿಬ್ಬರ ಬಂಧನ ತುಳಸಿಗೆ ಬರುವ ಗಂಡಿನ ಕಡೆಯವರಿಂದ ಅಥವಾ ಅತ್ತಿಗೆಯ ಕುಟುಂಬದಿಂದ ಮುರಿದು ಬೀಳುತ್ತಾ ಅನ್ನೋದೆ "ಅಣ್ಣ ತಂಗಿ"ಯ ಮೂಲ ಕಥೆ.

ಧಾರಾವಾಹಿ ತಂಡ

ಈ ಧಾರಾವಾಹಿಯ ನಿರ್ಮಾಣದ ಹೊಣೆಯನ್ನು ‘ಚೈತನ್ಯ ಹರಿದಾಸ್ ಸಿನಿಮಾಸ್’ ಹೊತ್ತಿದೆ. “ಆಕೃತಿ” ಯಂತಹ ಥ್ರಿಲ್ಲರ್ಧಾರಾವಾಹಿಯನ್ನು ಕೊಟ್ಟ ಕನ್ನಡದ ಖ್ಯಾತ ನಿರ್ದೇಶಕರಾದ ಕೆ.ಎಮ್. ಚೈತನ್ಯ ಮತ್ತು ಹರಿದಾಸ್ ಕೆ.ಜಿ.ಎಫ್ ರವರು ನಿರ್ಮಿಸುತ್ತಿದ್ದಾರೆ.

ನಿರ್ದೇಶನ ಮತ್ತು ಛಾಯಗ್ರಾಹಣದ ಹೊಣೆಯನ್ನುಎಮ್. ಕುಮಾರ್ ಹೊತ್ತಿದ್ದಾರೆ.ರಾಘವ ದ್ವಾರ್ಕಿಯವರದು ಚಿತ್ರಕತೆ.ತುರುವೆಕರೆ ಪ್ರಸಾದ್ ಅವರದುಸಂಭಾಷಣೆ. ಸಂಕಲನದ ಜವಾಬ್ದಾರಿಯನ್ನು ಗುರುರಾಜ್ ಬಿ.ಕೆ ತೆಗೆದುಕೊಂಡಿದ್ದಾರೆ.

ತಂಗಿ ತುಳಸಿ ಪಾತ್ರವನ್ನು ಅಖಿಲಾ ಪ್ರಕಾಶ್ ಹಾಗೂಅಣ್ಣನ ಪಾತ್ರವನ್ನು ಮಧು ಸಾಗರ್ನಿರ್ವಹಿಸುತ್ತಿದ್ದಾರೆ. ಮಾನಸ ಜೋಷಿ, ರಾಜೇಶ್ ದೃವ, ಸ್ವರಾಜ್, ರೋಹಿತ್ನಾಗೇಶ್, ಶರ್ಮಿತಾ, ಹಿರಿಯ ಕಲಾವಿದರಾದ ರಾಧಾ ರಾಮಚಂದ್ರ, ಗಿರಿಶ್ ಜತ್ತಿ, ತನುಜಾ ಅವರಂತಹ ಹಲವಾರು ತಾರೆಯರ ಗುಂಪು ಒಳಗೊಂಡ ಈ ಧಾರವಾಹಿ ನವೆಂಬರ್ 22ರಿಂದ ಸೋಮವಾರದಿಂದ ಶನಿವಾರದವೆರಗೆ ಸಂಜೆ 7ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

ಇದನ್ನೂ ಓದಿ:ಸರ್ವಾಧಿಕಾರವೇ ಪರಿಹಾರ: ಇನ್ಸ್ಟಾಗ್ರಾಂನಲ್ಲಿ ಕಂಗನಾ ಅಭಿಪ್ರಾಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.