ಬೆಂಗಳೂರು: ಬಿಗ್‌ಬಾಸ್ ಕನ್ನಡ 10ನೇ ಆವೃತ್ತಿಯು ಇದೀಗ ಅಂತಿಮ ಘಟ್ಟ ತಲುಪಿದೆ. ಇನ್ನು ಮೂರು ವಾರಗಳು ಮಾತ್ರ ಬಾಕಿ ಉಳಿದಿದ್ದು, ಆಟ ರೋಚಕತೆ ಪಡೆದುಕೊಂಡಿದೆ.

ಈ ನಡುವೆ, ಹಳ್ಳಿಕಾರ್ ಖ್ಯಾತಿಯ ವರ್ತೂರ್ ಸಂತೋಷ್ ಮತ್ತೆ ಕಳಪೆ ಪಟ್ಟ ಹೊತ್ತು ಮನೆಯ ಜೈಲು ಸೇರಿದ್ದಾರೆ.

ಮನೆಯಲ್ಲಿ ಯಾರ ಪಯಣ ಸ್ಲೋ ಮೋಷನ್‌ನಲ್ಲಿದೆ ಎಂಬ ಬಿಗ್‌ಬಾಸ್ ಕಳಿಸಿದ ಪ್ರಶ್ನೆಗೆ ಉತ್ತರಿಸಿದ ಸದಸ್ಯರು, ವರ್ತೂರ್ ಸಂತೋಷ್ ಕಡೆಗೆ ಬೊಟ್ಟು ಮಾಡಿದ್ದಾರೆ.

ಕ್ಯಾಪ್ಟನ್ಸಿ ಟಾಸ್ಕ್ ಅನ್ನು ವರ್ತೂರ್ ಲಘುವಾಗಿ ತೆಗೆದುಕೊಂಡರು ಎಂದು ನಮ್ರತಾ ಹೇಳಿದರೆ, ಸಂತೋಷ್ ಬಹಳ ಹಿಂದೆ ಉಳಿಯುತ್ತಾರೆ ಎನಿಸುತ್ತದೆ ಎಂದು ಸಂಗೀತಾ ಹೇಳಿದರು. ಪ್ರತಿಯೊಂದು ಮಾತಿಗೂ ಹೊರಗಡೆ ಇರುವ ಜನರಿಗೆ ಉತ್ತರ ಕೊಟ್ಟರೆ ಸಾಕು ಎಂದು ಹೇಳುವ ವರ್ತೂರ್, ಮನೆಯ ಆಟವನ್ನು ಕಡೆಗಣಿಸಿದ್ದಾರೆ ಎಂದು ಕಾರ್ತಿಕ್ ಉತ್ತರಿಸಿದ್ದಾರೆ.

ಇದರಿಂದ ಸಿಡಿಮಿಡಿಗೊಂಡ ವರ್ತೂರ್ ಸಂತೋಷ್, ಕ್ಯಾಪ್ಟನ್ಸಿ ಟಾಸ್ಕ್ ಆಡುವುದು ವೈಯಕ್ತಿಕ ವಿಚಾರ, ಜನರಿಗೆ ಇಷ್ಟವಾದರೆ ವೋಟ್ ಹಾಕಿ ಮನೆಯಲ್ಲಿ ಇರಿಸಿಕೊಳ್ಳುತ್ತಾರೆ. ಇಲ್ಲವಾದರೆ ಕಳುಹಿಸುತ್ತಾರೆ. ಇದಕ್ಕೆಲ್ಲ ನಾನು ಭಯ ಪಡುವುದಿಲ್ಲ. ಫೈನಲ್‌ನಲ್ಲಿ ಗೆದ್ದು ಟ್ರೋಫಿ ಎತ್ತಿಕೊಂಡೇ ಹೋಗುವುದಾಗಿ ಸವಾಲು ಹಾಕಿದ್ದಾರೆ.

ಇಂದಿನ ಪ್ರೊಮೊದಲ್ಲಿ ಇಷ್ಟು ಕಾವೇರಿದ ಸಂಭಾಷಣೆಯ ಮಾಹಿತಿ ಇದ್ದು, ಮುಂದೆ ಏನಾಗುತ್ತದೆ ಎಂಬ ಪ್ರಶ್ನೆಗೆ 9.30ಕ್ಕೆ ಪ್ರಸಾರವಾಗುವ ಎಪಿಸೋಡ್‌ನಲ್ಲಿ ಉತ್ತರ ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.