ಬೆಂಗಳೂರು: ರಾಕ್ಷಸ –ಗಂಧರ್ವರ ಟಾಸ್ಕ್ ಮುಕ್ತಾಯದ ಹಂತ ತಲುಪಿದೆ. ವಾರಾಂತ್ಯದಲ್ಲಿ ಎಲ್ಲ ಸ್ಪರ್ಧಿಗಳೂ ನಿಂತಿದ್ದಾರೆ. ಈ ನಡುವೆ ಪ್ರತಿ ವಾರದ ವಾಡಿಕೆಯಂತೆ ‘ಕಳಪೆ’ ಮತ್ತು ‘ಉತ್ತಮ’ ಪಟ್ಟಗಳನ್ನೂ ಮನೆಯ ಸದಸ್ಯರು ನಿರ್ಧರಿಸಿದ್ದಾರೆ.

ಈ ವಾರ ಕಾರ್ತಿಕ್ ಅವರಿಗೆ ಕಳಪೆ ಪಟ್ಟ ನೀಡಿ ಜೈಲಿಗೆ ಕಳುಹಿಸಲಾಗಿದೆ. ಸ್ನೇಹಿತ್, ನಮ್ರತಾ, ವಿನಯ್ ಸೇರಿದಂತೆ ಬಹುತೇಕ ಸದಸ್ಯರು ಕಳಪೆ ಪಟ್ಟವನ್ನು ಕಾರ್ತಿಕ್ಗೆ ನೀಡಿದ್ದಾರೆ.

ವಿನಯ್ ಅಂತೂ ‘ಈ ವಾರ ಖಂಡಿತವಾಗಿಯೂ ನೀನು ಕಳಪೆ ಪಟ್ಟಕ್ಕೆ ಅರ್ಹ’ ಎಂದು ನೇರವಾಗಿ ಹೇಳಿಯೇ ಕಳಪೆ ಪಟ್ಟ ನೀಡಿದ್ದಾರೆ. ಅದನ್ನು ಕಾರ್ತಿಕ್ ಕೈಮುಗಿದು ನಗುನಗುತ್ತಲೇ ಸ್ವೀಕರಿಸಿದ್ದಾರೆ.

ಜೈಲು ಉಡುಗೆ ತೊಟ್ಟ ಕಾರ್ತಿಕ್, ‘ಕೃಷ್ಣ ಜನ್ಮಸ್ಥಾನಕ್ಕೆ ಹೋಗ್ತಿದೀನಪ್ಪಾ’ ಎಂದು ಹೇಳಿ ಜೈಲು ಕೊಠಡಿಯೊಳಗೆ ಇಳಿದಿದ್ದಾರೆ. ವರ್ತೂರು ಮತ್ತು ತನಿಷಾ ಇಬ್ಬರೂ ಸೇರಿ ಕಾರ್ತಿಕ್ ಅವರನ್ನು ಜೈಲಿನ ಬಾಗಿಲಿಗೆ ಬಂದು ಬೀಳ್ಕೊಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.