ಬೆಂಗಳೂರು: ಪ್ರತಿ ಮನುಷ್ಯನಲ್ಲಿ ಗಂಧರ್ವ ಮತ್ತು ರಾಕ್ಷಸ ಗುಣಗಳಿರುತ್ತವೆ. ಅದನ್ನು ಹೋಲಿಸಿದ ಬಿಗ್ ಬಾಸ್ ಮನೆಯಲ್ಲಿ ಗಂಧರ್ವ–ರಾಕ್ಷಸರ ಟಾಸ್ಕ್ ನೀಡಲಾಗಿದೆ.

ಕಣ್ಣಿನ ಸುತ್ತ ಕೆಂಪು ಬಣ್ಣ, ಕಡುಗಪ್ಪು ದಪ್ಪ ಹುಬ್ಬುಗಳು, ಕತ್ತಲೆಯೇ ಮೈಹೊದ್ದ ನಿಲುವಂಗಿ, ಕೆಂಪು ಚೂಪು ಕೋಡುಗಳು ಒಂದೆಡೆ ಇಷ್ಟು ಭೀಕರ ರೂಪದ ರಕ್ಕಸರ ಗುಂಪು. ಇನ್ನೊಂದೆಡೆ ಶಾಂತ ಭಾವವನ್ನು ಸೂಸುವ, ಬಿಳಿಯುಡುಗೆಯಲ್ಲಿ ನಸುನಗುತ್ತ ನಿಂತಿರುವ, ನೆತ್ತಿಯ ಮೇಲೂ ಬಿಳಿಯಾದ ಹೂತೊಟ್ಟ ಗಂಧರ್ವರು.

ಕಾರ್ತಿಕ್, ಸಂಗೀತಾ, ತನಿಷಾ, ಅವಿನಾಶ್ ಎಲ್ಲರೂ ಮುಖಕ್ಕೆ ಬಣ್ಣ ಬಳಿದುಕೊಂಡು, ಕೋಡುಗಳುಳ್ಳ ಕಡುಗಪ್ಪು-ಕೆಂಪು ಉಡುಪು ತೊಟ್ಟ ರಕ್ಕಸರಾಗಿ ಬದಲಾದರೆ, ವಿನಯ್, ನಮ್ರತಾ, ವರ್ತೂರು, ತುಕಾಲಿ ಸಂತೋಷ್ ಎಲ್ಲರೂ ಬಿಳಿಯುಡುಗೆ ತೊಟ್ಟು ಗಂಧರ್ವರಾಗಿದ್ದಾರೆ. ರಾಕ್ಷಸ ಪಾತ್ರ ತೊಟ್ಟ ಸ್ಪರ್ಧಿಗಳು ಮನೆಯಲ್ಲಿ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಮನೆಯನ್ನು ರಣರಂಗವಾಗಿಸಿದ್ದಾರೆ.

ಕಾರ್ತಿಕ್, ಅಡುಗೆ ಮನೆಯಲ್ಲಿ ನೀರು ಚೆಲ್ಲಿ, ಬೆಡ್ರೂಮಿನಲ್ಲಿ ಬಟ್ಟೆಗಳನ್ನೆಲ್ಲ ಕಿತ್ತಾಡಿ ಕಿರುಚಾಡುತ್ತ ಕುಣಿದಾಡಿದ್ದಾರೆ. ಸಂಗೀತಾ, ವಿನಯ್ ತಮ್ಮ ಹಿಂದೆ ಕುಪ್ಪಳಿಸಿಕೊಂಡು ಬರುತ್ತಿರಬೇಕು ಎಂದು ಅಪ್ಪಣೆ ಹೊರಡಿಸಿದ್ದಾರೆ. ನಮ್ರತಾ ಕಣ್ಣುಗಳಲ್ಲಿ ನೀರು ತುಂಬಿಕೊಂಡಿದೆ. ರಕ್ಕಸ ಗುಂಪು ಎಷ್ಟೇ ಕಿರುಚಾಡಿದರೂ ತಾಳ್ಮೆ ಕಳೆದುಕೊಳ್ಳದೆ ಗಂಧರ್ವರ ತಂಡ ತಣ್ಣಗಿದೆ. ಆದರೆ ಗಂಧರ್ವ ಪಾತ್ರ ತೊಟ್ಟರೂ ಸುಮ್ಮನಿರದ ವಿನಯ್, ‘ನಾನು ನನ್ನ ಪಾತ್ರದಿಂದ ಹೊರಗೆ ಬಂದರೆ ವಿಷಯವೇ ಬೇರೆ. ಪಾಪ, ಅವರನ್ನು ನೆನಪಿಸಿಕೊಂಡರೆ ಬೇಜಾರಗುತ್ತಿದೆ ’ ಎಂದು ಕಿಚಾಯಿಸಿದ್ದಾರೆ.

ಅಂದಹಾಗೆ ಈ ವಾರ ಎಲಿಮಿನೇಷನ್ ಇಲ್ಲದ ಕಾರಣ ಯಾರೂ ಮನೆಯಿಂದ ಹೊರಹೋಗಿಲ್ಲ. ಸ್ನೇಹಿತ್ ಕ್ಯಾಪ್ಟನ್ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.