ನವದೆಹಲಿ: ದೇಶವ್ಯಾಪಿ ಲಾಕ್ಡೌನ್ ಆಗಿರುವ ಈ ಹೊತ್ತಲ್ಲಿ80 ಮತ್ತು 90ರ ದಶಕಗಳಲ್ಲಿ ದೂರದರ್ಶನದ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರವಾಹಿ ರಾಮಾಯಣ, ಮಹಾಭಾರತ, ಬ್ಯೋಮ್ಕೇಶ್ ಬಕ್ಷಿ ಮತ್ತು ಸರ್ಕಸ್ ಮತ್ತೊಮ್ಮೆ ಪ್ರಸಾರವಾಗುತ್ತಿದೆ.

ಜನಪ್ರಿಯ ಧಾರವಾಹಿಗಳನ್ನು ಮತ್ತೊಮ್ಮೆ ಪ್ರಸಾರ ಮಾಡಬೇಕು ಎಂಬ ಜನರ ಬೇಡಿಕೆಯ ಪಟ್ಟಿಯಲ್ಲಿ ಶಕ್ತಿಮಾನ್ ಧಾರವಾಹಿಯೂ ಇತ್ತು. ಜನರ ಬೇಡಿಕೆಯಂತೆಮುಕೇಶ್ ಖನ್ನಾ ಅವರ ಶಕ್ತಿಮಾನ್ ಮತ್ತೆ ಪ್ರಸಾರವಾಗಲಿದೆ. ಈ ಧಾರವಾಹಿಯ ಮುಂದುವರಿದ ಭಾಗದ ಕೆಲಸಗಳು ನಡೆಯುತ್ತಿವೆ ಎಂದು ನಟ ಮುಕೇಶ ಖನ್ನಾ ಹೇಳಿದ್ದಾರೆ.

ಮಾಧ್ಯಮವೊಂದಕ್ಕೆನೀಡಿದ ಸಂದರ್ಶನದಲ್ಲಿ ಶಕ್ತಿಮಾನ್ ಸೀಕ್ವೆಲ್ ಬಗ್ಗೆ ಮುಕೇಶ್ ಖನ್ನಾ ಮಾತನಾಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಶಕ್ತಿಮಾನ್ ಧಾರವಾಹಿಯ ಎರಡನೇ ಸಂಚಿಕೆಯ ಕೆಲಸ ಮಾಡುತ್ತಾ ಬಂದಿದ್ದೇವೆ. ಇದು ಸಮಕಾಲೀನ ವಿಷಯಾಧಾರಿತವಾಗಿದ್ದು, ನಮ್ಮ ಮೌಲ್ಯಗಳಿಗೂ ಒತ್ತು ನೀಡುತ್ತದೆ. ಮುಂದೇನಾಗುತ್ತದೆ ಎಂಬ ಕುತೂಹಲ ಜನರಲ್ಲಿರುವುದರಿಂದ ನಾವು ಮುಂದುವರಿದ ಭಾಗವನ್ನು ಕಿರುತೆರೆಯ ಮೇಲೆ ತರುತ್ತಿದ್ದೇವೆ ಎಂದು ಖನ್ನಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.