ಮುಂಬೈ : ತನ್ನ ವಿಶಿಷ್ಟ ಉಡುಗೆಗಳಿಂದಲೇ ಜನಪ್ರಿಯತೆ ಗಳಿಸಿರುವ ಬಾಲಿವುಡ್ ನಟಿ ಉರ್ಫಿ ಜಾವೇದ್, ಮುಂಬೈ ರೆಸ್ಟೋರೆಂಟ್‌ನಲ್ಲಿ ತನಗಾದ ಕಹಿ ಅನುಭವವನ್ನು ಇನ್‌ಸ್ಟಾಗ್ರಾಮ್ ಸ್ಟೋರಿನಲ್ಲಿ ಹಂಚಿಕೊಂಡಿದ್ದಾರೆ. ನನ್ನ ‘ಫ್ಯಾಶನ್ ಆಯ್ಕೆ‘ ನೋಡಿ ನನಗೆ ರೆಸ್ಟೋರೆಂಟ್‌ನಲ್ಲಿ ಪ್ರವೇಶ ನಿರಾಕರಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ಧಾರೆ.

ಮಂಗಳವಾರ ಉರ್ಫಿ ಜಾವೇದ್ ಮುಂಬೈನ ರೆಸ್ಟೋರೆಂಟ್‌ವೊಂದಕ್ಕೆ ಹೋಗಿದ್ದರು. ಈ ವೇಳೆ ರೆಸ್ಟೋರೆಂಟ್‌ನ ಮ್ಯಾನೇಜರ್ ಉರ್ಫಿ ಜಾವೇದ್‌ಗೆ ಪ್ರವೇಶ ನಿರಾಕರಿಸಿದ್ದಾರೆ. ಪ್ರವೇಶ ನಿರಾಕರಿಸಿರುವುದಕ್ಕೆ ಕಾರಣವೇನು? ಎಂದು ಉರ್ಫಿ ಪ್ರಶ್ನಿಸಿದ್ದಾರೆ. ಈ ನಡುವೆ ಉರ್ಫಿ ಮತ್ತು ಮ್ಯಾನೇಜರ್ ನಡುವೆ ಜಗಳವಾಗಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಉರ್ಫಿ, ‘ಇದು ನಿಜವಾಗಿಯೂ 21ನೇ ಶತಮಾನದ ಮುಂಬೈಯೇ? ರೆಸ್ಟೋರೆಂಟ್‌ನಲ್ಲಿ ನನಗೆ ಪ್ರವೇಶ ನಿರಾಕರಿಸಲಾಗಿದೆ. ನನ್ನ ಫ್ಯಾಷನ್ ಆಯ್ಕೆಯನ್ನು ನೀವು ಒಪ್ಪದಿದ್ದರೂ ಪರವಾಗಿಲ್ಲ. ಅದಕ್ಕಾಗಿ ನನ್ನನ್ನು ವಿಭಿನ್ನವಾಗಿ ನೋಡುವುದು ಬೇಡ. ನೀವು ವಿಭಿನ್ನವಾಗಿ ನೋಡುತ್ತಿದ್ದೀರಾ ಎಂದದಾದರೆ ಅದನ್ನು ಒಪ್ಪಿಕೊಳ್ಳಿ. ಕುಂಟು ನೆಪಗಳನ್ನು ಹೇಳುವುದು ಬೇಡ. ಇದನ್ನು ನೋಡುತ್ತೇನೆ @ಜೊಮ್ಯಾಟೊ #ಮುಂಬೈ‘ ಎಂದು ಬರೆದುಕೊಂಡಿದ್ದಾರೆ.

ಉರ್ಫಿ ಜಾವೇದ್‌ಗೆ ಪ್ರವೇಶ ನಿರಾಕರಿಸಿರುವ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಿದ್ದು, ಪರ ವಿರೋಧ ಅಭಿಪ್ರಾಯಗಳು ಬಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.