ಕನ್ನಡ ರಾಜ್ಯೋತ್ಸವ 2019 | ಕನ್ನಡದ ಕಂದಮ್ಮಗಳ ಕಲರವ
ಸಾರ್ವಜನಿಕ ಶಿಕ್ಷಣ ಇಲಾಖೆ ಶುಕ್ರವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಮತ್ತು ಮಕ್ಕಳ ಮೇಳ ‘ಕರ್ನಾಟಕ ವೈಭವ 2019’ ಕಾರ್ಯಕ್ರಮ ಮನಮೋಹಕವಾಗಿತ್ತು. ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲೆಗಳ ಸಾವಿರಾರು ವಿದ್ಯಾರ್ಥಿಗಳು ಸಾಂಸ್ಕೃತಿಕ ಮತ್ತು ಕವಾಯತುಕಾರ್ಯಕ್ರಮದಲ್ಲಿ ಪಾಲ್ಗೊಂಡರು.ರಾಜ್ಯ ರಾಜಧಾನಿಯ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಕಾರ್ಯಕ್ರಮ ಸಾಂಸ್ಕೃತಿಕ ಹಬ್ಬದಂತಿತ್ತು. ಎಳೆಯೋಣ ಬಾರಾ ಕನ್ನಡದ ತೇರ, ಅರಳುವ ಪುಷ್ಪಗಳು ನೃತ್ಯ ಮತ್ತು ವೀರಮದಕರಿ ನಾಯಕ, ಕಿತ್ತೂರು ಚೆನ್ನಮ್ಮ ನೃತ್ಯರೂಪಕಗಳು, ಸುಗ್ಗಿ ಕಾಲ ಹಿಗ್ಗಿ ಬಂದಿತು ಜಾನಪದ ನೃತ್ಯ, ಜಾನಪದ ವೈಭವ ಹಾಗೂ ಯೋಗಾಸನ ಕಾರ್ಯಕ್ರಮಗಳಲ್ಲಿ ಶಾಲಾ ಮಕ್ಕಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು.ಪ್ರಜಾವಾಣಿ ಚಿತ್ರಗಳು:ಎಂ.ಎಸ್. ಮಂಜುನಾಥ್
Published : 1 ನವೆಂಬರ್ 2019, 13:34 IST