ರಕ್ತಹೀನತೆ:
ರಕ್ತಹೀನತೆಯು ಗರ್ಭಿಣಿ ಯರಲ್ಲಿ ನಿಶ್ಯಕ್ತಿ ಉಂಟು ಮಾಡಿ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಸುಲಭವಾಗಿ ತಡೆಗಟ್ಟ ಬಹುದಾದ ಸಮಸ್ಯೆ ಇದು. ಆದರೆ, ಇದನ್ನು ತಡೆಗಟ್ಟಲು ಸರ್ಕಾರ ಜಾರಿ ಗೊಳಿಸಿರುವ ಯೋಜನೆಗಳ ಅನುಷ್ಠಾನ ದಲ್ಲಿನ ವೈಫಲ್ಯ ಎದ್ದು ಕಾಣುತ್ತದೆ.
‘ಮಧಾಹ್ನದ ಒಂದೊತ್ತಿನ ಊಟಕ್ಕೆ ಕೂಲಿ ಕೆಲಸ ಅಥವಾ ಮನೆಗೆಲಸ ಬಿಟ್ಟು ಅಂಗನವಾಡಿಗೆ ಹೋಗಬೇಕಾ? ನಮಗೆ ದಿನಕ್ಕೆ ಕೂಲಿ ₹200 ಸಿಗುತ್ತದೆ. ಅದಕ್ಕೆ ಮನೆಗೆ ಆಹಾರ ಧಾನ್ಯದ ಕಿಟ್ ವಿತರಿಸಿದರೆ ಸೂಕ್ತ’ ಎನ್ನುತ್ತಾರೆ ಕಲಬುರಗಿ ಜಿಲ್ಲೆಯ ನರಸಮ್ಮ.
ಸಾಂಸ್ಥಿಕ ಹೆರಿಗೆ ಹೆಚ್ಚಳ:
ತಾಯಂದಿರ ಸಾವು ತಪ್ಪಿಸಲು ಸರ್ಕಾರವು ಒಂದು ದಶಕದ ಹಿಂದೆಯೇ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಗೆ ಒತ್ತು ನೀಡಿದೆ.
ಮತ್ತೊಂದು ಸಮಸ್ಯೆ:
ಅಧಿಕ ರಕ್ತದೊತ್ತಡವು ತಾಯಂದಿರನ್ನು ಕೊಲ್ಲುವ ಮತ್ತೊಂದು ಸಮಸ್ಯೆ. ಗರ್ಭಧಾರಣೆಯ ಮೂರನೇ ಮಾಸಿಕ ಹಾಗೂ ಹೆರಿಗೆ ನಂತರ ಮೊದಲ 24 ಗಂಟೆಗಳಲ್ಲಿ ಕಂಡುಬರುವ ಇದು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಮಾರಕ. ಇದನ್ನು ನಿಯಂತ್ರಿಸದಿದ್ದರೆ ದೇಹದಲ್ಲಿ ಉಪ್ಪಿನಾಂಶ ಹೆಚ್ಚಾಗಿ ತಾಯಿಯನ್ನು ಮೃತ್ಯುಕೂಪಕ್ಕೆ ದೂಡುತ್ತದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಬಹಳಷ್ಟು ಗರ್ಭಿಣಿಯರು ನಿಯಮಿತವಾಗಿ ತಪಾಸಣೆಯನ್ನೇ ಮಾಡಿಸುವುದಿಲ್ಲ ಎಂಬುದು ವಿಪರ್ಯಾಸ.
ಭ್ರಷ್ಟಾಚಾರ ಉಲ್ಬಣ
ಸರ್ಕಾರಿ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು ಭ್ರಷ್ಟಾಚಾರದ ಕೂಪಗಳಾಗಿವೆ ಎನ್ನುವ ಆರೋಪ ವ್ಯಾಪಕವಾಗಿದೆ. ಹಣ ನೀಡದಿದ್ದರೆ ಗರ್ಭಿಣಿಯರಿಗೆ ವೈದ್ಯಕೀಯ ಸೇವೆಯೇ ಸಿಗದಿರುವಂತಹ ವಾತಾವರಣವಿದೆ. ಕಳೆದ ವರ್ಷ ತುಮಕೂರು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಯಿ ಮತ್ತು ಅವಳಿ ಗಂಡು ಶಿಶುಗಳು ಮೃತಪಟ್ಟ ಘಟನೆ ಇದಕ್ಕೊಂದು ತಾಜಾ ಉದಾಹರಣೆ.
ಉತ್ತರ ಕರ್ನಾಟಕದಲ್ಲೇ ಹೆಚ್ಚು ಸಾವು
ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ಗದಗ, ವಿಜಯಪುರ, ಬಾಗಲಕೋಟೆ, ದಾವಣಗೆರೆ, ಶಿವಮೊಗ್ಗ, ಧಾರವಾಡ, ತುಮಕೂರು ಜಿಲ್ಲೆಯಲ್ಲಿ ತಾಯಂದಿರ ಸಾವಿನ ಪ್ರಮಾಣ ಹೆಚ್ಚಿದೆ. ಚಾಮರಾಜನಗರ, ಮೈಸೂರು, ಹಾಸನ ಜಿಲ್ಲೆಯಲ್ಲಿಯೂ ತಾಯಂದಿರ ಮರಣಕ್ಕೆ ಕಡಿವಾಣ ಬಿದ್ದಿಲ್ಲ.
ಕೊಪ್ಪಳದ 100 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಶಿಶುಗಳ ಆರೈಕೆಯಲ್ಲಿ ತೊಡಗಿರುವ ದಾದಿ –ಪ್ರಜಾವಾಣಿ ಚಿತ್ರ/ಭರತ್ ಕಂದಕೂರ
ಕಲಬುರಗಿಯ ಜಿಮ್ಸ್ ಆಸ್ಪತ್ರೆಯ ಮಕ್ಕಳ ಆರೋಗ್ಯ ಪುನಃಶ್ಚೇತನ ಕೇಂದ್ರದಲ್ಲಿ ಅಪೌಷ್ಟಿಕತೆ ಕೊರತೆಯಿಂದ ಬಳಲುತ್ತಿರುವ ಮಕ್ಕಳನ್ನು ಆರೈಕೆ ಮಾಡುತ್ತಿರುವ ತಾಯಂದಿರು –ಪ್ರಜಾವಾಣಿ ಚಿತ್ರ/ತಾಜುದ್ದೀನ ಆಜಾದ್
ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರು ಆರೋಗ್ಯ ತಪಾಸಣೆಗಾಗಿ ಸರತಿ ಸಾಲಿನಲ್ಲಿ ಕುಳಿತಿರುವುದು –ಪ್ರಜಾವಾಣಿ ಚಿತ್ರ/ತಾಜುದ್ದೀನ ಆಜಾದ್
ಗುಡ್ಡಗಾಡು ಜಿಲ್ಲೆಯಾದ ಉತ್ತರ ಕನ್ನಡದ ಕುಗ್ರಾಮಗಳಲ್ಲಿ ವಾಸಿಸುವ ಕೆಲವು ಬುಡಕಟ್ಟು ಜನಾಂಗದವರು ಇನ್ನೂ ಸಾಂಪ್ರದಾಯಿಕ ಹೆರಿಗೆ ಪದ್ಧತಿ ಅನುಸರಿಸುತ್ತಿದ್ದರು. ಸತತ ಜಾಗೃತಿ ಮೂಲಕ ಈಗ ಅದು ನಿಂತಿದೆ
– ಡಾ.ಅನ್ನಪೂರ್ಣ ವಸ್ತ್ರದ್, ಜಿಲ್ಲಾ ಆರೋಗ್ಯಾಧಿಕಾರಿ ಉತ್ತರ ಕನ್ನಡ.ತಾಯಂದಿರ ಸಾವಿನ ಪ್ರಮಾಣ ಕಡಿಮೆ ಮಾಡಲು ಸಾಕಷ್ಟು ಪ್ರಯತ್ನ ನಡೆಸಿದ್ದೇವೆ. ವೈದ್ಯಕೀಯ ಸೌಕರ್ಯ ಹೆಚ್ಚಿದ್ದು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸ್ತ್ರೀರೋಗ ತಜ್ಞರು ಇದ್ದಾರೆ. ಜಿಲ್ಲಾ ಮತ್ತು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲೂ ಶಸ್ತ್ರಚಿಕಿತ್ಸಾ ಘಟಕಗಳ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಸಕಾಲದಲ್ಲಿ ಚಿಕಿತ್ಸೆ ಲಭಿಸಲಿದ್ದು ಮರಣ ಪ್ರಮಾಣ ಕಡಿಮೆಯಾಗಿದೆ
– ಡಾ.ಪ್ರಭುಲಿಂಗ ಮಾನಕರ್ ಆರ್‌ಸಿಎಚ್‌ಒ ಅಧಿಕಾರಿ ಕಲಬುರಗಿ.ತಾಯಂದಿರ ಮರಣ ದರ ಲೆಕ್ಕಾಚಾರ ಹೇಗೆ?
ಯಾವುದೇ ರಾಜ್ಯದ ಆರೋಗ್ಯದ ಮಾನದಂಡ ಅಳೆಯಲು ತಾಯಿ ಮತ್ತು ಶಿಶು ಮರಣವೇ ಅಳತೆಗೋಲು. ಸಂತಾನೋತ್ಪತ್ತಿ ವಯಸ್ಸಿನ ಒಟ್ಟು ಮಹಿಳೆಯರನ್ನು (ಪ್ರತಿ ಲಕ್ಷ ಜೀವಂತ ಜನನ) ಸಾವನ್ನಪ್ಪಿದ ತಾಯಂದಿರ ಪ್ರಮಾಣದಿಂದ ಭಾಗಿಸಿದಾಗ ಬರುವ ಭಾಗಲಬ್ದವನ್ನು ‘ತಾಯಂದಿರ ಮರಣ ದರ’ವೆಂದು ಕರೆಯುತ್ತಾರೆ.
ಸೋಲಿಗರಲ್ಲೂ ಕಡಿಮೆಯಾದ ಮನೆ ಹೆರಿಗೆ