ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ನಾಗಸಾಕಿ ಮೇಲೆ ಅಣುಬಾಂಬ್ ದಾಳಿ ನಡೆದು 75 ವರ್ಷ ತುಂಬಿದೆ. ಈ ನಿಮಿತ್ತ ಜಪಾನ್ನಲ್ಲಿ ಭಾನುವಾರ ಸ್ಮರಣಾರ್ಥ ಕಾರ್ಯಕ್ರಮ ನಡೆಯಿತು.

ಅಮೆರಿಕ 1945 ಆ.6ರಂದು ಜಪಾನಿನ ಹಿರೋಶಿಮಾ ನಗರದ ಮೇಲೆ ಅಣುಬಾಂಬ್ ದಾಳಿ ನಡೆಸಿದ್ದು, 1.40 ಲಕ್ಷ ಜನ ಮೃತಪಟ್ಟಿದ್ದರು. ಮೂರು ದಿನಗಳ ಬಳಿಕ ನಾಗಸಾಕಿಯ ಮೇಲೆ ನಡೆಸಿದ ಅಣುಬಾಂಬ್ ದಾಳಿಯಲ್ಲಿ 74,000 ಜನರು ತಮ್ಮ ಪ್ರಾಣ ಕಳೆದುಕೊಂಡರು.

ದಾಳಿಗೆಗೆ ಜಪಾನ್ನ ನಾಗಸಾಕಿ ನಗರವನ್ನೇ ಗುರಿ ಮಾಡಿಕೊಂಡಿದ್ದೇಕೆ? ಇಲ್ಲಿದೆ ವಿವರಣೆ

ಭೀಕರ ಅಣ್ವಸ್ತ್ರ ದಾಳಿಗೆ ತುತ್ತಾದ ಜಪಾನ್ನ ಎರಡನೇ ನಗರ ನಾಗಾಸಾಕಿ. ಇದು ದಕ್ಷಿಣ ಜಪಾನ್ನ ಅತೀ ದೊಡ್ಡ ಬಂದರು ನಗರಗಳ ಪೈಕಿ ಒಂದು. ಇಲ್ಲಿ ಫಿರಂಗಿ, ಯುದ್ಧ ಹಡಗು, ಸೇನಾ ಉಪಕರಣ ಹಾಗೂ ಇತರ ಯುದ್ಧ ಶಸ್ತ್ರಾಸ್ತ್ರಗಳನ್ನು ತಯಾರಿಸಲಾಗುತ್ತಿತ್ತು.

ಶತ್ರು ರಾಷ್ಟ್ರಗಳಿಂದ ಅಪಾಯ ಎದುರಾದಾಗ ಈ ನಗರವೇ ಮೊದಲು ಸನ್ನದ್ಧವಾಗುತ್ತಿತ್ತು.ಅಲ್ಲದೇ ಈ ನಗರ ಜಪಾನ್ ಸಂಸ್ಕೃತಿಗೆ ಪ್ರತಿಬಿಂಬದಂತಿತ್ತು. ಕಟ್ಟಡಗಳೆಲ್ಲಾ ಜಪಾನ್ ಸಂಸ್ಕೃತಿ–ಶೈಲಿಯಲ್ಲೇ ನಿರ್ಮಾಣವಾಗಿದ್ದವು. ಹೀಗಾಗಿ ಈ ನಗರವೇ ಅಮೆರಿಕದಾಳಿಗೆ ಗುರಿಯಾಯಿತು.

ಅಣ್ವಸ್ತ್ರ ದಾಳಿಗೂ ಮುಂಚೆ, ನಾಗಾಸಾಕಿ ನಗರದ ಮೇಲೆ ಯಾವುದೇ ದಾಳಿ ನಡೆದಿರಲಿಲ್ಲ. ಅಲ್ಲದೇ ಅಲ್ಲಿನ ಕಟ್ಟಡಗಳು ಬಾಂಬ್ ದಾಳಿಯನ್ನು ತಡೆದುಕೊಳ್ಳುವಷ್ಟು ದೃಢವಾಗಿರಲಿಲ್ಲ. ಹೀಗಾಗಿ ದಾಳಿ ನಂತರ ನಾಗಾಸಾಕಿಯ ರೂಪುರೇಷೆಗಳೇ ಬದಲಾಗಿ ಹೋದವು.

ಜಪಾನ್ನ ನಗರಗಳ ಮೇಲೆ ಅಣ್ವಸ್ತ್ರ ದಾಳಿ ನಡೆದು ಏಳು ದಶಕಗಳು ಕಳೆದರೂ ಇಂದಿಗೂ ಹಿರೋಶಿಮಾ ಮತ್ತು ನಾಗಸಾಕಿ ನಗರಗಳಲ್ಲಿ ವಿಕಿರಣದ ಸಮಸ್ಯೆ ಆರ್ಭಟಿಸುತ್ತಲೇ ಇದೆ. ಹಲವರು ವಿಚಿತ್ರ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ದೇಶಗಳ ಪ್ರತಿಷ್ಠೆಗೆ ಹಲವು ಮುಗ್ಧ ಜೀವಗಳು ಜೀವತೆತ್ತಿದ್ದು ವಿಷಾದನೀಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.