ನುಗ್ಗೇಕಾಯಿಯಂತೆಯೇ ನುಗ್ಗೆಸೊಪ್ಪು ರುಚಿಕರವಾಗಿದೆ .ಪಾಲಕ್ ಸೊಪ್ಪಿಗಿಂತ ಹೆಚ್ಚಿನ ಪೋಷಕಾಂಶ ಇರುವ ನುಗ್ಗೆಸೊಪ್ಪು ರಕ್ತದ ಒತ್ತಡ ಮತ್ತು ರಕ್ತಹೀನತೆಗೆ ಸಿದ್ದೌಷಧ. ಇದರ ರೆಸಿಪಿಯನ್ನು ಕವಿತಾ ಹೆಗಡೆ ನೀಡಿದ್ದಾರೆ.

ನುಗ್ಗೆ ಸೊಪ್ಪಿನ ಪಡ್ಡು

ಬೇಕಾಗುವ ಸಾಮಗ್ರಿಗಳು: ಅಕ್ಕಿ 2 ಕಪ್, ಉದ್ದಿನಬೇಳೆ 1/2 ಕಪ್, ಅವಲಕ್ಕಿ 1/4 ಕಪ್, ಮೆಂತ್ಯ 1 ಚಮಚ, ನುಗ್ಗೆ ಸೊಪ್ಪು 2 ಹಿಡಿ, ರುಚಿಗೆ ತಕ್ಕಷ್ಟು ಉಪ್ಪು, ಸೋಡಾ1/4 ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಚಮಚ, ಈರುಳ್ಳಿ 2, ಕೊತ್ತಂಬರಿ ಸೊಪ್ಪು ಸ್ವಲ್ಪ, ಎಣ್ಣೆ 5 ಚಮಚ

ವಿಧಾನ: ಅಕ್ಕಿ ,ಉದ್ದಿನಬೇಳೆ, ಮೆಂತ್ಯ ಮೂರನ್ನು ನೀರಿನಲ್ಲಿ ಆರು ಗಂಟೆ ನೆನೆಸಿ. ಅವಲಕ್ಕಿ ಹಾಕಿ ರುಬ್ಬಿ ಹುದುಗಲು ಬಿಡಿ. ರುಬ್ಬಿದ ಮಿಶ್ರಣಕ್ಕೆ ಹೆಚ್ಚಿದ ನುಗ್ಗೆ ಸೊಪ್ಪು, ಈರುಳ್ಳಿ, ಕೊತ್ತಂಬರಿ ಸೊಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಸೋಡಾ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಕಾದ ಪಡ್ಡು ಹೆಂಚಿನ ಮೇಲೆ ಎಣ್ಣೆ ಹಚ್ಚಿ ಒಂದೊಂದೇ ಸೌಟು ಹಿಟ್ಟು ಹಾಕಿ ಎರಡೂ ಕಡೆ ಚೆನ್ನಾಗಿ ಬೇಯಿಸಿ ತೆಗೆಯಿರಿ. ಚಟ್ನಿ ಜೊತೆಗೆ ಸರ್ವ್ ಮಾಡಿ.

ನುಗ್ಗೆಸೊಪ್ಪಿನ ಸ್ಟೀಮ್ ಬಾಲ್ಸ್

ಬೇಕಾಗುವ ಸಾಮಗ್ರಿಗಳು: ನುಗ್ಗೆಸೊಪ್ಪು-2 ಕಪ್, ದೋಸೆ ಅಕ್ಕಿ -4 ಕಪ್, ಅಕ್ಕಿ ರವಾ -2 ಕಪ್,ತೆಂಗಿನ ತುರಿ -3 ಕಪ್, ಹುಣಸೆ ರಸ 4 ಚಮಚ, ಬೆಲ್ಲ 5 ಚಮಚ,ಒಣ ಮೆಣಸು -7,ಧನಿಯಾ 2 ಚಮಚ,
ಜೀರಿಗೆ -1ಚಮಚ,ಉಪ್ಪು ರುಚಿಗೆ ತಕ್ಕಷ್ಟು, ಅರಿಶಿನ ಪುಡಿ1/4 ಚಮಚ

ವಿಧಾನ: ಮೊದಲು ದೋಸೆ ಅಕ್ಕಿಯನ್ನು ಎಂಟು ಗಂಟೆಗಳ ಕಾಲ ನೆನೆಹಾಕಿ. ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿಕೊಳ್ಳಿ . ನಂತರ ತೆಂಗಿನ ತುರಿ, ಧನಿಯಾ, ಜೀರಿಗೆ,ಉಪ್ಪು ಬೆಲ್ಲ , ಹುಣಸೆ ರಸ,ಮೆಣಸು ಹಾಕಿ ನುಣ್ಣಗೆ ಮಸಾಲೆಯ ಪೇಸ್ಟ್ ಮಾಡಿಕೊಳ್ಳಿ. ಒಂದು ಬಾಣಲೆಯಲ್ಲಿ ಅಕ್ಕಿ ರವಾ , ರುಬ್ಬಿದ ಅಕ್ಕಿಯ ಮಿಶ್ರಣ , ಮಸಾಲೆ ಪೇಸ್ಟ್ , ಹೆಚ್ಚಿದ ನುಗ್ಗೆಸೊಪ್ಪು ಎಲ್ಲವನ್ನೂ ಹಾಕಿ ಬೇಕಾಗುವಷ್ಟು ನೀರು ಸೇರಿಸಿ ಕುದಿಸಿ. ಮಿಶ್ರಣ ಗಟ್ಟಿಯಾಗಿ ಉಂಡೆ ಕಟ್ಟುವ ಹದಕ್ಕೆ ಬಂದಾಗ ಉರಿ ಆರಿಸಿ ತಣಿಸಿ ರವೆಉಂಡೆಯಂತೇ ಬಾಲ್ಸ್ ಮಾಡಿಟ್ಟುಕೊಳ್ಳಿ. ಈಗ ಸ್ಟೀಮರ್ ನಲ್ಲಿ ಅಥವಾ ಇಡ್ಲಿ ಕುಕ್ಕರ್ನಲ್ಲಿ ಅರ್ಧ ಗಂಟೆ ಹಬೆಯಲ್ಲಿ ಬೇಯಿಸಿದರೆ ನುಗ್ಗೆಸೊಪ್ಪು ಸ್ಟೀಮ್ ಬಾಲ್ಸ್ ಸವಿಯಲು ಸಿದ್ಧ.

ನುಗ್ಗೆಸೊಪ್ಪಿನ ಸೂಪ್

ಬೇಕಾಗುವ ಸಾಮಗ್ರಿಗಳು: ನುಗ್ಗೆಸೊಪ್ಪು1 ಕಪ್, ಈರುಳ್ಳಿ-1, ಬೆಳ್ಳುಳ್ಳಿ -2 ಎಸಳು ಶುಂಠಿ/4 ಇಂಚು, ಎಣ್ಣೆ 1/4 ಚಮಚ,ಉಪ್ಪು ರುಚಿಗೆ ತಕ್ಕಷ್ಟು, ಕಾಳುಮೆಣಸಿನ ಪುಡಿ 1/4 ಚಮಚ, ನಿಂಬುರಸ 1/4 ಚಮಚ

ವಿಧಾನ: ಮೊದಲು ಒಂದು ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ , ಶುಂಠಿ ಈರುಳ್ಳಿಯನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ. ಅದೇ ಬಾಣಲೆಯಲ್ಲಿ ನುಗ್ಗೆಸೊಪ್ಪನ್ನು ಹಾಕಿ ಬಾಡಿಸಿ.ಎಲ್ಲವನ್ನೂ ನುಣ್ಣಗೆ ರುಬ್ಬಿಕೊಂಡು ಸಾಕಷ್ಟು ನೀರು, ಉಪ್ಪು,ಕಾಳು ಮೆಣಸಿನಪುಡಿ ಹಾಕಿ ಚೆನ್ನಾಗಿ ಕುದಿಸಿ.ಸರ್ವಿಂಗ್ ಬೌಲ್ಗೆ ಹಾಕಿ ನಿಂಬುರಸ ಬೆರೆಸಿ ಬಿಸಿ-ಬಿಸಿಯಾಗಿ ಸವಿಯಿರಿ.

ನುಗ್ಗೆಸೊಪ್ಪಿನ ಕರ್ರಿ

ಬೇಕಾಗುವ ಸಾಮಗ್ರಿಗಳು: ನುಗ್ಗೆ ಸೊಪ್ಪು -2 ಹಿಡಿ, ತೆಂಗಿನ ತುರಿ -1 ಕಪ್, ಬ್ಯಾಡಗಿ ಮೆಣಸು -10,ಶುಂಠಿ ಬೆಳ್ಳುಳ್ಳಿ ಪೇಸ್ಟ್ -2 ಚಮಚ,ಧನಿಯಾ -1 ಚಮಚ, ಕರಿಬೇವು 6 ಎಲೆ, ಅರಿಶಿನ ಪುಡಿ ಚಿಟಿಕೆ, ಉಪ್ಪು ರುಚಿಗೆ ತಕ್ಕಷ್ಟು, ಈರುಳ್ಳಿ -3,ಹೆಸರು ಬೇಳೆ -1 ಕಪ್,ಎಣ್ಣೆ -4 ಚಮಚ, ಹುಣಸೆ ಹಣ್ಣು ಸ್ವಲ್ಪ

ವಿಧಾನ: ನುಗ್ಗೆ ಸೊಪ್ಪು ಮತ್ತು ಹೆಸರು ಬೇಳೆಯನ್ನು ತೊಳೆದು ಎರಡನ್ನೂ ಕುಕ್ಕರ್ ನಲ್ಲಿ ಹಾಕಿ ನಾಲ್ಕು ವಿಷಲ್ ಕೂಗಿಸಿ. ನಂತರ ಒಂದು ಬಾಣಲೆಯಲ್ಲಿ ಬ್ಯಾಡಗಿ ಮೆಣಸು , ಧನಿಯಾ , ಎಣ್ಣೆ ,ಕರಿಬೇವು ಹಾಕಿ ಹುರಿದು ತೆಂಗಿನತುರಿ ಜೊತೆಗೆ ರುಬ್ಬಿಕೊಳ್ಳಿ. ನಂತರ ಅದೇ ಬಾಣಲೆಯಲ್ಲಿ ಎಣ್ಣೆ ಹಾಕಿ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ ಈರುಳ್ಳಿ ಹಾಕಿ ಪ್ರೈ ಮಾಡಿ. ನಂತರ ಬೇಯಿಸಿದ ನುಗ್ಗೆ ಸೊಪ್ಪು , ಹೆಸರು ಬೇಳೆ ಹಾಕಿ ಅದಕ್ಕೆ ಉಪ್ಪು , ಹುಣಸೆಹಣ್ಣು , ಅರಿಶಿನ ಪುಡಿ, ರುಬ್ಬಿದ ಮಸಾಲೆ ಹಾಕಿದರೆ ರುಚಿಯಾದ ನುಗ್ಗೆಸೊಪ್ಪಿನ ಕರ್ರಿ ಸವಿಯಲು ಸಿದ್ದ.

ನುಗ್ಗೆಸೊಪ್ಪಿನ ದೋಸೆ

ಬೇಕಾಗುವ ಸಾಮಗ್ರಿಗಳು: ದೋಸೆ ಅಕ್ಕಿ 2 ಕಪ್, ನುಗ್ಗೆಸೊಪ್ಪು 1/2 ಕಪ್, ಮೆಂತೆ -1ಚಮಚ, ಕೊತ್ತಂಬರಿ - 1ಚಮಚ, ಜೀರಿಗೆ -1/2ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಬೆಲ್ಲ 2 ಚಮಚ, ಹುಣಸೆ ರಸ 1 ಚಮಚ, ತೆಂಗಿನ ತುರಿ 1/4 ಕಪ್, ಒಣಮೆಣಸು -5, ಅರಿಶಿನ ಪುಡಿ ಚಿಟಿಕೆ

ವಿಧಾನ: ಮೊದಲು ಅಕ್ಕಿ ಮೆಂತ್ಯವನ್ನು ಎರಡು ಗಂಟೆ ನೆನಸಿಡಿ . ನೆನಸಿದ ಅಕ್ಕಿಯನ್ನ ತೊಳೆದು ಧನಿಯಾ, ತೆಂಗಿನ ತುರಿ, ಒಣ ಮೆಣಸು , ಉಪ್ಪು ಹುಣಸೆರಸ , ಅರಿಶಿನ ಪುಡಿ ,ಬೆಲ್ಲ , ಜೀರಿಗೆ ಹಾಕಿ ರುಬ್ಬಿಕೊಳ್ಳಿ. ಹೆಚ್ಚಿದ ನುಗ್ಗೆ ಸೊಪ್ಪನ್ನು ಎಣ್ಣೆ ಹಾಕಿ ಹುರಿದು, ತಯಾರಿಸಿದ ದೋಸೆ ಹಿಟ್ಟಿಗೆ ಬೆರೆಸಿ.ಕಾದ ಕಾವಲಿಯ ಮೇಲೆ ದೊಸೆ ಹುಯ್ದು ಎರಡೂ ಬದಿ ಬೇಯಿಸಿ ತೆಗೆಯಿರಿ. ಉತ್ತಮ ಬಣ್ಣ ಮತ್ತು ರುಚಿಯ ನುಗ್ಗೆಸೊಪ್ಪಿನ ದೋಸೆ ಬೆಣ್ಣೆಯೊಂದಿಗೆ ಸವಿಯಲು ಸಿದ್ಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.